ಕೋಟಿ ಕೊಡುತ್ತೇವೆ ಅಂದರೂ ಕುರಿ ಮಾರದ ಮಾಲೀಕ! – ಈ ಕುರಿಯ ವಿಶೇಷತೆ ಏನು ಗೊತ್ತಾ?

ಕೋಟಿ ಕೊಡುತ್ತೇವೆ ಅಂದರೂ ಕುರಿ ಮಾರದ ಮಾಲೀಕ! – ಈ ಕುರಿಯ ವಿಶೇಷತೆ ಏನು ಗೊತ್ತಾ?

ನಾಡಿನೆಲ್ಲೆಡೆ ಬಕ್ರೀದ್‌ ಹಬ್ಬದ ಸಂಭ್ರಮ ಮನೆ ಮಾಡಿದೆ. ಪ್ರತಿವರ್ಷವೂ ಬಕ್ರೀದ್‌ ಹಬ್ಬದ ವೇಳೆ ಕುರಿಗಳಿಗೆ ಭರ್ಜರಿ ಡಿಮ್ಯಾಂಡ್ ಇರುತ್ತದೆ. ಲಕ್ಷ ಲಕ್ಷ ಹಣ ಕೊಟ್ಟು ಕುರಿಗಳನ್ನು ಖರೀದಿ ಮಾಡುತ್ತಾರೆ. ಆದ್ರೆ ರಾಜಸ್ಥಾನದಲ್ಲಿ ಒಂದು ಕುರಿಮರಿಯ ಬೆಲೆ ಎಲ್ಲರು ಬಾಯಿ ಮೇಲೆ ಬೆರಳಿಟ್ಟುಕೊಳ್ಳುವಂತೆ ಮಾಡಿದೆ.. ಯಾಕಂದ್ರೆ 1 ಕೋಟಿ ರೂಪಾಯಿ ಕೊಡ್ತೀನಿ ಅಂದ್ರೂ ಮಾಲೀಕ ಕುರಿಯನ್ನು ಮಾರಾಟ ಮಾಡಲು ಒಪ್ಪುತ್ತಿಲ್ಲ!

ಇದನ್ನೂ ಓದಿ: ಬಕ್ರೀದ್ ಹಬ್ಬಕ್ಕೆ ಕುರಿಯನ್ನು ಬಲಿ ಕೊಡುವುದು ಯಾಕೆ ? – ಬಕ್ರೀದ್ ಹಬ್ಬದ ಮಹತ್ವವೇನು? ಇಲ್ಲಿದೆ ಸಂಪೂರ್ಣ ಮಾಹಿತಿ

ರಾಜಸ್ಥಾನದ ತಾರಾ ನಗರ ಎಂಬಲ್ಲಿ ರಾಜು ಸಿಂಗ್ ಅನ್ನೋರು ಕುರಿಗಳನ್ನ ಸಾಕಿದ್ದಾರೆ. ಅವರ ಮನೆಯ ಹೆಣ್ಣು ಕುರಿಯೊಂದು ಕಳೆದ ವರ್ಷ ಮರಿಗೆ ಜನ್ಮ ನೀಡಿತ್ತು. ಅದೇ ಮರಿಗೆ ಈಗ 1 ಕೋಟಿ ಆಫರ್ ಬಂದಿದೆ. ಯಾಕಂದ್ರೆ ಕುರಿಮರಿಯ ಮೇಲೆ 786 ಅಂತಾ ಸಂಖ್ಯೆಯನ್ನು ಬರೆಯಲಾಗಿದೆ. ಭಾರತೀಯ ಉಪಖಂಡದಲ್ಲಿ ಮುಸ್ಲಿಮರು ಅದೃಷ್ಟಶಾಲಿ ಎಂದು ಪರಿಗಣಿಸುವ ಅಂಕಿ ಈ ಕುರಿಯ ಮೇಲೆ ಇದೆ. ಮುಸ್ಲಿಮರು ಈ ಪವಿತ್ರ ಸಂಖ್ಯೆಯನ್ನು  ಆರಾಧಿಸುತ್ತಾರಂತೆ. ಹೀಗಾಗಿ ಒಂದು ಕೋಟಿ ರೂಪಾಯಿ ನೀಡಿ ಕೆಲ ಮುಸ್ಲಿಮರು ಕುರಿಮರಿ ಖರೀದಿಗೆ ಮುಂದಾಗಿದ್ದಾರೆ.

ಕುರಿಗೆ ಕೋಟಿ ಕೊಡುತ್ತೀನಿ ಅಂದ್ರೂ ಕೂಡ ಮಾಲೀಕ ರಾಜು ಈ ಕುರಿಮರಿ ಮೇಲೆ ನನಗೆ ಭಾರಿ ಪ್ರೀತಿ ಇದ್ದು ಅದನ್ನ ಎಷ್ಟೇ ಹಣ ಕೊಟ್ಟರೂ ಯಾವುದೇ ಕಾರಣಕ್ಕೂ ಮಾರಾಟ ಮಾಡಲ್ಲ ಎಂದಿದ್ದಾರೆ. ಹಾಗೆಯೇ ಅದರ ರಕ್ಷಣೆಗಾಗಿ ಮನೆಯೊಳಗೆ ಇಟ್ಟುಕೊಂಡಿರೋದಾಗಿ ಹೇಳಿದ್ದಾರೆ.

suddiyaana