ನ್ಯಾಯಾಧೀಶರ ಮಗನ ಶೂ ಕಳವು – ವಿಶೇಷ ತನಿಖಾ ತಂಡ ರಚಿಸಿದ ಪೊಲೀಸರು!

ನ್ಯಾಯಾಧೀಶರ ಮಗನ ಶೂ ಕಳವು – ವಿಶೇಷ ತನಿಖಾ ತಂಡ ರಚಿಸಿದ ಪೊಲೀಸರು!

ನಮ್ಮ ಕಾನೂನು ವ್ಯವಸ್ಥೆ ಶೋಷಣೆಗೆ ಒಳಗಾದವರಿಗೆ ನ್ಯಾಯ ಕೊಡಿಸುವುದಕ್ಕಿಂತ ಅಧಿಕಾರ ಶಾಹಿಗಳ ಪರವಾಗಿದ್ದೇ ಹೆಚ್ಚು. ರಾಜಸ್ಥಾನದಲ್ಲಿ ಇಂಥಾದ್ದೇ ಒಂದು ವಿಚಿತ್ರ ಘಟನೆ ನಡೆದಿದ್ದು, ಸಾರ್ವಜನಿಕ ವಲಯದಲ್ಲಿ ಟೀಕೆಗೂ ಕಾರಣವಾಗಿದೆ. ನ್ಯಾಯಾಧೀಶರ ಮಗನ ಶೂ ಕಳೆದು ಹೋಗಿದ್ದು, ಇದನ್ನು ಹುಡುಕಲು ಪೊಲೀಸರು ವಿಶೇಷ ತನಿಖಾ ತಂಡವೊಂದನ್ನು ರಚಿಸಿದ್ದಾರೆ.

ಇದನ್ನೂ ಓದಿ: ಚಿಪ್ಸ್‌ ಪ್ಯಾಕೆಟ್‌ ಕದ್ದು ಜೈಲು ಪಾಲಾದ ಖ್ಯಾತ ನಟ – ಸೆಲೆಬ್ರಿಟಿಯಾದವನಿಗೆ ಇದೆಲ್ಲಾ ಬೇಕಿತ್ತಾ?

ಹೌದು ಈ ವಿಚಿತ್ರ ಘಟನೆ ರಾಜಸ್ಥಾನದಲ್ಲಿ ನಡೆದಿದೆ. ರಾಜಸ್ಥಾನದ ಅಲ್ವಾರ್‌ನ ಪೋಕ್ಸೊ ನ್ಯಾಯಾಲಯದ ನ್ಯಾಯಾಧೀಶ ಜೋಗೇಂದ್ರ ಕುಮಾರ್ ಅಗರ್ವಾಲ್ ಅವರು ತಮ್ಮ ಕುಟುಂಬದ ಜತೆಗೆ ಜೈಪುರದ ಬಡಿ ಚೌಪರ್ ಪ್ರದೇಶದಲ್ಲಿರುವ ಬ್ರಿಜ್ ನಿಧಿ ದೇಗುಲಕ್ಕೆ ಹೋಗಿದ್ದರು. ಆದರೆ ನ್ಯಾಯಧೀಶರ ಮಗ ಶೂ ತೆಗೆದು ದೇವಾಲಯದ ಒಳಗೆ ಹೋಗಿ ಪೂಜೆ ಮುಗಿಸಿ ಹೊರ ಬರುವಷ್ಟರಲ್ಲಿ ಆತನ 10 ಸಾವಿರ ಬೆಲೆ ಬಾಳುವ ಶೂ ಕಾಣೆಯಾಗಿದ್ದವು. ಹೀಗಾಗಿ ನ್ಯಾಯಾಧೀಶ ಜೋಗೇಂದ್ರ ಕುಮಾರ್ ಅಗರ್ವಾಲ್ ಅವರು ಮನಕ್ ಚೌಕ್ ಪೊಲೀಸ್ ಠಾಣೆಗೆ ಅಂಚೆ ಮೂಲಕ ಈ ಬಗ್ಗೆ ದೂರು ನೀಡಿದ್ದರು.

ನ್ಯಾಯಾಧೀಶರು ದೂರು ಕೊಟ್ಟ ಬೆನ್ನಲ್ಲೇ ಪೊಲೀಸರು ಟೀಂ ಮಾಡಿಕೊಂಡು ಈಗ ಶೂಗಾಗಿ ಹುಡುಕಾಡ್ತಿದ್ದಾರೆ. ಇದಕ್ಕಾಗಿ ಒಂದು ವಿಶೇಷ ತನಿಖಾ ತಂಡವನ್ನು ರಚಿಸಿ ಶೂ ಪತ್ತೆ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ. ಅಲ್ಲದೆ ಹಲವು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ನಡೆಸಿದ್ದು, ಘಟನೆಗೆ ಸಂಬಂಧಿಸಿದಂತೆ ಕೆಲವರನ್ನು ವಶಕ್ಕೆ ಪಡೆಯಲಾಗಿದೆ ಎಂದು ಹೇಳಿದ್ದಾರೆ. ಹೀಗೆ ಶೂಗಾಗಿ ಪೊಲೀಸರು ಟೀಂ ಮಾಡಿಕೊಂಡು ಹುಡುಕಾಡುತ್ತಿರೋದು ಸಾರ್ವಜನಿಕರ ಸಿಟ್ಟಿಗೆ ಕಾರಣವಾಗಿದೆ.

suddiyaana