ಮಹಿಳೆಯರಿಗೆ ಸರ್ಕಾರದಿಂದ ಸ್ಮಾರ್ಟ್ ಫೋನ್!

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಮಹಿಳೆಯರಿಗಾಗಿ ಶಕ್ತಿ ಯೋಜನೆಯಡಿ ಉಚಿತ ಬಸ್ ಪ್ರಯಾಣ, ಗೃಹಲಕ್ಷ್ಮೀ ಯೋಜನೆಯಡಿ ಮನೆ ಯಜಮಾನಿಗೆ 2000 ರೂಪಾಯಿ ನೀಡುತ್ತಿದೆ. ಇದೀಗ ಮತ್ತೊಂದು ರಾಜ್ಯದಲ್ಲಿ ಮಹಿಳೆಯರಿಗಾಗಿ ಅಲ್ಲಿನ ಸರ್ಕಾರ ಹೊಸ ಯೋಜನೆಯೊಂದನ್ನು ಜಾರಿಗೆ ತಂದಿದೆ. ಮಹಿಳೆಯರಿಗೆ ಉಚಿತ ಸ್ಮಾರ್ಟ್ ಪೋನ್ ಅನ್ನ ನೀಡುತ್ತಿದೆ.
ರಾಜಸ್ಥಾನ ಮುಖ್ಯಮಂತ್ರಿ ಆಶೋಕ್ ಗೆಹಲೋತ್ ಅವರು ಮಹಿಳೆಯರಿಗಾಗಿ ಹೊಸ ಯೋಜನೆಯೊಂದನ್ನು ಜಾರಿಗೆ ತಂದಿದ್ದಾರೆ. ಈ ಯೋಜನೆ ಅನ್ವಯ ಇಂಟರ್ನೆಟ್ ಸಂಪರ್ಕವಿರುವ ಸ್ಮಾರ್ಟ್‌ಫೋನ್‌ಗಳನ್ನು ಕುಟುಂಬದ ಮುಖ್ಯಸ್ಥೆಗೆ ನೀಡಲಾಗುತ್ತದೆ. ಇದೀಗ ಸಿಎಂ ಆಶೋಕ್ ಗೆಹಲೋತ್ ಅವರು ಸಾಂಕೇತಿಕವಾಗಿ ಸ್ಮಾರ್ಟ್ ಫೋನ್ ವಿತರಿಸುವ ಮೂಲಕ ಹೊಸ ಯೋಜನೆಗೆ ಚಾಲನೆ ನೀಡಿದ್ದಾರೆ. ಬಿರ್ಲಾ ಆಡಿಟೋರಿಯಂನಲ್ಲಿ ನಡೆದ ಕಾರ್ಯಕ್ರಮದಲ್ಲಿ ಇಂದಿರಾಗಾಂಧಿ ಸ್ಮಾರ್ಟ್ ಫೋನ್ ಯೋಜನೆಯ ಫಲಾನುಭವಿಗಳಿಗೆ ಮುಖ್ಯಮಂತ್ರಿ ಮೊಬೈಲ್‌ಗಳನ್ನು ವಿತರಿಸಿದ್ದಾರೆ.
ಇದನ್ನೂ ಓದಿ: ಸರ್ಕಾರದಿಂದ ಕಾಶಿ ಯಾತ್ರಾರ್ಥಿಗಳಿಗೆ 9 ದಿನಗಳ ಪ್ಯಾಕೇಜ್ – 5,000 ರೂಪಾಯಿ ಇದ್ದ ಸಹಾಯಧನ 7,500ಕ್ಕೆ ಹೆಚ್ಚಳ
‘ಜ್ಞಾನವೇ ಶಕ್ತಿ ಎಂಬ ಧೈಯ ವಾಕ್ಯದಡಿಯಲ್ಲಿ ಮಹಿಳೆಯರಿಗೆ ಸ್ಮಾರ್ಟ್‌ಫೋನ್‌ಗಳನ್ನು ವಿತರಿಸಲಾಗುತ್ತಿದೆ. ಈ ಯೋಜನೆಯು ಮಹಿಳೆಯರನ್ನು ಸಬಲೀಕರಣಗೊಳಿಸಲಿದೆ’. ಯೋಜನೆಯ ಮೊದಲ ಹಂತದಲ್ಲಿ ವಿಧವೆಯರು, ಪಿಂಚಣಿ ಪಡೆಯುವ ಒಂಟಿ ಮಹಿಳೆಯರು, ವಿದ್ಯಾರ್ಥಿನಿಯನ್ನು ಹೊಂದಿರುವ ಕುಟುಂಬಗಳನ್ನು ಯೋಜನೆಯ ಮೊದಲ ಹಂತದಲ್ಲಿ ಆಯ್ಕೆ ಮಾಡಲಾಗಿದೆ ಎಂದು ಗೆಹಲೋತ್ ಹೇಳಿದ್ದಾರೆ.
ವಿತರಣಾ ಶಿಬಿರದಲ್ಲಿ ಫಲಾನುಭವಿಗಳು ತಮಗೆ ಬೇಕಾದ ಬ್ಯಾಂಡ್‌ನ ಸ್ಮಾರ್ಟ್‌ಫೋನ್ ಆಯ್ಕೆಗೆ ಅವಕಾಶವಿದೆ. ನೇರ ಸೌಲಭ್ಯ ವರ್ಗಾವಣೆ(ಡಿಬಿಟಿ) ವಿಧಾನದಡಿ ಫಲಾನುಭವಿಗಳ ಖಾತೆಗೆ 36,800 ವರ್ಗಾವಣೆ ಮಾಡಲಾಗುತ್ತದೆ. ಯೋಜನೆಯ ಆರಂಭಿಕ ಹಂತದಲ್ಲಿ 40 ಲಕ್ಷ ಫಲಾನುಭವಿಗಳು ಸ್ಮಾರ್ಟ್‌ಫೋನ್ ಪಡೆಯಲಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.