ಟೀಂ ಇಂಡಿಯಾದ ಲಕ್ಕಿ ಗರ್ಲ್ – ಕ್ರಿಕೆಟ್ ಲೋಕದ ಮಾಸ್ಟರ್ ಮೈಂಡ್
ಕ್ರಿಕೆಟರ್ಸ್ ಜೋಶ್ ಗೆ ಈಕೆ ಕಾರಣ
ಟೀಂ ಇಂಡಿಯಾದ ಸಹಾಯಕ ಸಿಬ್ಬಂದಿಯಲ್ಲಿ ಒಬ್ರು ಮಹಿಳೆಯ ಓಡಾಟವನ್ನ ನೀವು ಆಗ್ಗಾಗೆ ನೋಡಿರ್ತೀರಿ.. ಭಾರತ ತಂಡದ ಸಕ್ಸಸ್ ನಲ್ಲಿ ಇವರ ಪಾತ್ರ ದೊಡ್ಡದಿದೆ.. ಹಾಗೇಯೇ ಆಟಗಾರರ ನಡುವೆ ಏನೇ ಕಂಪ್ಲೇಂಟ್ ಈಡ್ರೂ ಸಾಲ್ವು ಮಾಡೊದಿಕ್ಕೆ ಬರೋದು ಇದೇ ಲೇಡಿ.. ಟೀಂ ಇಂಡಿಯಾದ ಗೆಲುವಿನ ನಾಗಾಲೋಟ ಮುಂದುವರಿಸಲು ಈ ಮಹಿಳಾ ಸಹಾಯಕಿ ಪಿಲ್ಲರ್ ಆಗಿ ನಿಂತಿದ್ದಾರೆ.
ಅಮೆರಿಕ ಹಾಗೂ ವೆಸ್ಟ್ ಇಂಡೀಸ್ನಲ್ಲಿ ನಡೆಯುತ್ತಿರುವ ಟಿ20 ವಲ್ಡ್ ಕಪ್ ಮಹಾ ಸಂಗ್ರಾಮದಲ್ಲಿ ಟೀಮ್ ಇಂಡಿಯಾ ಹ್ಯಾಟ್ರಿಕ್ ಗೆಲುವು ಸಾಧಿಸಿ ಈಗಾಗಲೇ ಸೂಪರ್-8 ಹಂತಕ್ಕೇರಿದೆ. ಸಾಲು ಸಾಲು ಗೆಲುವಿನೊಂದಿಗೆ ಭಾರತ ಟ್ರೋಫಿ ಗೆಲ್ಲಬಲ್ಲ ಹಾಟ್ ಫೇವರೇಟ್ ತಂಡವಾಗಿದೆ. ಟೀಂ ಇಂಡಿಯಾ ಕೋಚಿಂಗ್ ಸಿಬ್ಬಂದಿಗಳ ಜತೆ ಮಹಿಳಾ ಅಧಿಕಾರಿಯೊಬ್ಬರು ಕೂಡ ಕಾಣಿಸಿಕೊಂಡಿರುವುದು ಅಭಿಮಾನಿಗಳ ಕುತೂಹಲಕ್ಕೆ ಕಾರಣವಾಗಿದೆ. ಟೀಂ ನಲ್ಲಿ ಕಳೆದ ಕೆಲವು ವರ್ಷಗಳಿಂದ ಸದ್ದಿಲ್ಲದೇ ಕೆಲಸ ಮಾಡುತ್ತಿರುವ ಆ ಸುಂದರಿ ಯಾರಿರಬಹುದು ಎನ್ನುವುದರ ಬಗ್ಗೆ ನೀವೂ ತಲೆಕೆಡಿಸಿಕೊಂಡರಿಬಹುದು.
ಅಂದಹಾಗೆ ಈಕೆಯ ಹೆಸರು ರಾಜಲ್ ಅರೋರಾ. ಈಕೆ ಟೀಂ ಇಂಡಿಯಾದ ಸಾಮಾಜಿಕ ಮಾಧ್ಯಮ ತಂಡದ ಮುಖ್ಯಸ್ಥರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ರಾಜಲ್ ಅಥವಾ ರಾಜ್ ಲಕ್ಷ್ಮಿ ಅರೋರ ಅವರು ಟೀಂ ಇಂಡಿಯಾದ ಝಲಕ್ ಅನ್ನು ಜಗತ್ತಿನ ಮುಂದೆ ಹೇಗೆ ಪ್ರಚುರ ಪಡಿಸಬೇಕು, ಟೀಂ ಇಂಡಿಯಾವನ್ನು ಸೋಷಿಯಲ್ ಮೀಡಿಯಾದಲ್ಲಿ ಹೇಗೆ ಹೈಲೈಟ್ ಮಾಡಬೇಕು ಎನ್ನುವುದರ ಮಾಸ್ಟರ್ ಮೈಂಡ್ ಇದೇ ಯಂಗ್ ಲೇಡಿ. ಕಂಟೆಂಟ್ ರೈಟರ್ ಆಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ ಅರೋರಾ, 2015ರಲ್ಲಿ ಬಿಸಿಸಿಐಗೆ ಸಾಮಾಜಿಕ ಮಾಧ್ಯಮ ವ್ಯವಸ್ಥಾಪಕರಾಗಿ ಸೇರಿಕೊಂಡ್ರು.. ಅಂದಿನಿಂದ ಇಂದಿನವರೆಗೆ ಭಾರತ ತಂಡ ಎಲ್ಲೇ ಸರಣಿ ಆಡಲು ಪ್ರವಾಸ ಕೈಗೊಂಡಾಗ ತಂಡದ ಜತೆ ಪ್ರಮಾಣಿಸುತ್ತಾರೆ. ಬಿಸಿಸಿಐನ ಆಂತರಿಕ ದೂರು ಸಮಿತಿಯ ಮುಖ್ಯಸ್ಥರಾಗಿಯೂ ಇವರು ಕಾರ್ಯನಿರ್ವಹಿಸುತ್ತಿದ್ದಾರೆ. ಆಟಗಾರರ ದುರ್ವರ್ತನೆಯ ವಿರುದ್ಧದ ದೂರುಗಳನ್ನು ಅವರು ಮೇಲ್ವಿಚಾರಣೆ ಮಾಡುತ್ತಾರೆ. ಅರೋರಾ ಅವರು 2022ರಲ್ಲಿ ಆಸ್ಟ್ರೇಲಿಯಾದಲ್ಲಿ ನಡೆದ ಟಿ20 ವಿಶ್ವಕಪ್ನಿಂದ ಭಾರತೀಯ ತಂಡದ ಸಹಾಯಕ ಸಿಬ್ಬಂದಿಯ ಭಾಗವಾಗಿದ್ದಾರೆ. ಪ್ರತಿ ಸರಣಿಗೂ ಮುನ್ನ ಆಟಗಾರರು ಮತ್ತು ಮಾಧ್ಯಮಗಳೊಂದಿಗೆ ಸಂವಾದ ನಡೆಸಲು ಸೂಕ್ತ ವ್ಯವಸ್ಥೆ ಮಾಡುವಲ್ಲಿ ಅರೋರಾ ಪ್ರಮುಖ ಪಾತ್ರ ವಹಿಸುತ್ತಾರೆ. ಐಪಿಎಲ್ನಲ್ಲಿಯೂ ಇವರು ಬಿಸಿಸಿಐ ಪರ ಕಾರ್ಯನಿರ್ವಹಿಸುತ್ತಾರೆ.
ಇನ್ನು ಕೆಎಲ್ ರಾಹುಲ್ ಅವರ ಪತ್ನಿ ಬಾಲಿವುಡ್ ನಟಿ ಅಥಿಯಾ ಶೆಟ್ಟಿ ಅವರೊಂದಿಗೆ ರಾಜಲ್ ಅರೋರಾ ತುಂಬಾ ಕ್ಲೋಸ್ ಆಗಿದ್ದಾರಂತೆ. ಇವರಿಬ್ಬರೂ ಹೆಚ್ಚಾಗಿ ಸೋಶಿಯಲ್ ಮೀಡಿಯಾದಲ್ಲಿ ಆಗಾಗ ಒಟ್ಟಿಗೆ ತೆಗೆಸಿಕೊಂಡಿರುವ ಫೋಟೋಗಳನ್ನು ಶೇರ್ ಮಾಡ್ತಾ ಇರ್ತಾರೆ.. ಇಶಾಂತ್ ಶರ್ಮಾ ಪತ್ನಿ ಜತೆಗೂ ಉತ್ತಮ ಸ್ನೇಹ ಸಂಬಂಧವನ್ನು ಹೊಂದಿದ್ದಾರೆ. ಇನ್ನು ರಾಜಲ್ ಅರೋರಾ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟಿವ್ ಆಗಿದ್ದು, ಇನ್ಸ್ಟಾಗ್ರಾಂನಲ್ಲಿ ಸಾವಿರಾರು ಮಂದಿ ಫಾಲೋ ಮಾಡುತ್ತಿದ್ದಾರೆ.