ರಾಜಕುಮಾರಿ ಗಗನಾ Over Acting.. ಶೋ ಓಕೆ.. ಸೀರಿಯಲ್ನಲ್ಲೂ ಬಿಲ್ಡಪ್! – ಕೆಟ್ಟ ಕಮೆಂಟ್ಸ್.. ಲಡ್ಡು ಗೆಟಪ್ ಚೇಂಜ್?

ರಿಯಾಲಿಟಿ ಶೋಗಳ ಮೂಲಕ ಫೇಮಸ್ ಆದ ಪ್ರತಿಭೆ ಅದು ಗಗನಾ.. ಮಹಾನಟಿ ಸೀಸನ್ 1ರ ಮೂಲಕ ರಿಯಾಲಿಟಿ ಶೋಗೆ ಎಂಟ್ರಿ ಕೊಟ್ಟ ದುರ್ಗದ ಹುಡುಗಿ, ಸಖತ್ ಫೇಮಸ್.. ಬ್ಯಾಕ್ ಟು ಬ್ಯಾಕ್ ಶೋನಲ್ಲಿ ಭಾಗವಹಿಸಿರೋ ಗಗನಾರನ್ನ ಜೀ ಕನ್ನಡದ ದತ್ತು ಪುತ್ರಿ ಅಂತಾನೇ ಕರೀತಾರೆ. ರಿಯಾಲಿಟಿ ಶೋ ಮೂಲಕ ಮಿಂಚಿದ್ದ ಗಗನಾ ಇದೇ ಮೊದಲ ಬಾರಿಗೆ ಸೀರಿಯಲ್ ನಲ್ಲೂ ಚಾನ್ಸ್ ಪಡೆದಿದ್ದಾರೆ.. ರಾಜಕುಮಾರಿ ಸೀರಿಯಲ್ ಮೂಲಕ ತೆರೆಮೇಲೆ ಮಿಂಚುತ್ತಿದ್ದಾರೆ.. ಆದ್ರೀಗ ಗಗನಾ ಮೇಲೆ ಫ್ಯಾನ್ಸ್ ಯಾಕೋ ಸಿಟ್ಟು ಮಾಡಿಕೊಂಡಿದ್ದಾರೆ.. ಗಗನಾ ನಟನೆ ಮೇಲೆ ಸ್ಪಲ್ಪ ಮುನಿಸಿಕೊಂಡಿದ್ದಾರೆ.. ಗಗನಾ ಆಕ್ಟಿಂಗ್ ಓಕೆ.. ಓವರ್ ಆಕ್ಟಿಂಗ್ ಯಾಕೆ ಅಂತಾ ಕೇಳ್ತಿದ್ದಾರೆ.
ಇದನ್ನೂ ಓದಿ: ಬೆಂಗಳೂರಿಗರಿಗೆ ಪವರ್ ಕಟ್ ಶಾಕ್ – ಸೆ.15 ರಿಂದ 15 ದಿನ ಈ ಏರಿಯಾಗಳಲ್ಲಿ ವಿದ್ಯುತ್ ಕಡಿತ
ಜೀ ಕನ್ನಡದ ಮಹಾನಟಿ ಶೋ ಮೂಲಕ ಕನ್ನಡ ಕಿರುತೆರೆಗೆ ಕಾಲಿಟ್ಟ ಗಗನಾ ಅತೀ ಕಡಿಮೆ ಸಮಯದಲ್ಲೇ ವೀಕ್ಷಕರ ಮನಗೆದ್ದಿದ್ದಾರೆ.. ಓದೋದ್ರಲ್ಲಿ ಒಂದೆಹೆಜ್ಜೆ ಹಿಂದೆ.. ಆಕ್ಟಿಂಗ್ ನಲ್ಲಿ ಎರಡು ಹೆಜ್ಜೆ ಮುಂದೆ ಅಂತಾ ಡೈಲಾಗ್ ಹೊಡೆಯೋ ಮೂಲಕ ಫೇಮಸ್ ಆಗಿದ್ರು.. ಆಕೆ ಸ್ಟೇಜ್ ಗೆ ಬಂದ್ರು ಅಂದ್ರೆ ಮನರಂಜನೆ ಫಿಕ್ಸ್ ಅಂತಾನೇ ಲೆಕ್ಕ.. ಇದೇ ಕಾರಣಕ್ಕೆ ಮಹಾನಟಿ ಶೋ ಬಳಿಕ, ಡಿಕೆಡಿ ಶೋ ಗೆ ಆಯ್ಕೆ ಮಾಡಲಾಗಿತ್ತು.. ಅಲ್ಲಿ ಗಿಲ್ಲಿ ಗಗನಾ ಕಾಂಬಿನೇಷನ್ ಕ್ಲಿಕ್ ಆಗಿತ್ತು.. ಬಳಿಕ ಭರ್ಜರಿ ಬ್ಯಾಚುಲರ್ಸ್ ಶೋನಲ್ಲೂ ಗಗನಾ ಚಾನ್ಸ್ ಗಿಟ್ಟಿಸಿಕೊಂಡಿದ್ರು.. ಡ್ರೋನ್ ಪ್ರತಾಪ್ ಗೆ ಜೋಡಿಯಾಗಿದ್ದ ಗಗನಾ ಸಖತ್ ಮನರಂಜನೆ ನೀಡಿದ್ರು.. ಹೀಗೆ ರಿಯಾಲಿಟಿ ಶೋಗಳ ಮೂಲಕ ಮಿಂಚಿದ್ದ ಗಗನಾ ಇದೇ ಮೊದಲ ಬಾರಿಗೆ ಸೀರಿಯಲ್ಗೆ ಎಂಟ್ರಿಕೊಟ್ಟಿದ್ದಾರೆ.. ಜೀ ಪವರ್ ನಲ್ಲಿ ಪ್ರಸಾರವಾಗ್ತಿರೋ ರಾಜಕುಮಾರಿ ಸೀರಿಯಲ್ ನಲ್ಲಿ ನಾಯಕಿಯಾಗಿ ನಟಿಸ್ತಿದ್ದಾರೆ.. ಆದ್ರೀಗ ಗಗನಾ ಮೇಲೆ ಸೀರಿಯಲ್ ಫ್ಯಾನ್ಸ್ ಸಿಟ್ಟು ಮಾಡಿಕೊಂಡಿದ್ದಾರೆ.. ಅಮ್ಮಾ.. ಗಗನಾ ಆಕ್ಟಿಂಗ್ ಮಾಡು.. ಆದ್ರೆ ಓವರ್ ಆಕ್ಟಿಂಗ್ ಮಾಡ್ಬೇಡಾ ಅಂತಾ ಕಮೆಂಟ್ ಹಾಕ್ತಿದ್ದಾರೆ.
ಝೀ ಬಾಂಗ್ಲಾದ ಮಿಥೈ ಸೀರಿಯಲ್ ರಿಮೇಕ್ ರಾಜಕುಮಾರಿ ಸೀರಿಯಲ್ ಅಂತಾ ಹೇಳಲಾಗ್ತಿದೆ. ಇದ್ರಲ್ಲಿ ಗಗನಾ ಹಳ್ಳಿ ಹುಡುಗಿ ಲಡ್ಡು ಪಾತ್ರಕ್ಕೆ ಜೀವ ತುಂಬಿದ್ದಾರೆ.. ಕಜ್ಜಾಯ ತಯಾರಿಸಿ ಸೇಲ್ ಮಾಡೋ ಲಡ್ಡು, ಸ್ವೀಟ್ ಅಂಗಡಿ ಓನರ್ ಶೌರ್ಯನನ್ನ ಮದುವೆ ಆಗ್ತಾಳೆ. ಬಳಿಕ ಆಕೆ ಶೌರ್ಯನ ಮನೆಗೆ ಸೇರುವಂತೆ ಆಗಿದೆ. ಸೀರಿಯಲ್ ಸ್ಟೋರಿ ಏನೋ ಚೆನ್ನಾಗೇ ಸಾಗ್ತಾ ಇದೆ. ಆದ್ರೆ ಗಗನಾ ಆಕ್ಟಿಂಗ್ ವಿರುದ್ಧ ವೀಕ್ಷಕರು ಅಸಮಧಾನ ಹೊರ ಹಾಕಿದ್ದಾರೆ. ರಿಯಾಲಿಟಿ ಶೋನಲ್ಲಿ ಟಿಆರ್ಪಿ ಚೆನ್ನಾಗಿ ಬರುತ್ತೆ ಅಂತಾ ಗಗನಾರನ್ನ ಸೀರಿಯಲ್ಗೆ ಸೆಲೆಕ್ಟ್ ಮಾಡ್ತಿದ್ರು ಅನ್ಸುತ್ತೆ.. ಹತ್ತು ರೂಪಾಯಿ ಆಕ್ಟ್ ಮಾಡು ಅಂದ್ರೆ ನೂರು ರುಪಾಯಿ ಆಕ್ಟ್ ಮಾಡ್ತೀರಾ.. ಪಾತ್ರಕ್ಕೆ ತಕ್ಕಂತೆ ಅಭಿನಯ ಇಲ್ಲ ಎಂದು ಕೆಲವರು ಹೇಳಿದ್ದಾರೆ. ಇನ್ನು ಕೆಲವರು, ತುಂಬಾ ಫಾಸ್ಟ್ ಆಗಿ ಡೈಲಾಗ್ ಹೊಡಿತಾರೆ.. ಕಿರುಚಾಡಿದಂತೆ ಕೇಳಿಸುತ್ತೆ.. ಎಕ್ಸ್ಪ್ರೆಷನ್ ಕೂಡ ಚೆನ್ನಾಗಿ ಇರಲ್ಲ.. ಯಾರಾದ್ರೂ ಬೇರೆ ನಟಿಯನ್ನ ಈ ಪ್ಲೇಸ್ ಗೆ ಹಾಕಿದ್ರೆ ಒಳ್ಳೆದಿತ್ತು ಅಂತಾ ಕಾಮೆಂಟ್ ಮಾಡ್ತಿದ್ದಾರೆ. ಇನ್ನೂ ಕೆಲವರು ಗಗನಾ ಮಾಡ್ತಿರೋ ಪಾತ್ರ ಹಳ್ಳಿ ಹುಡುಗಿಯದ್ದು.. ಪಾತ್ರಕ್ಕೆ ತಕ್ಕಂತೆ ನಟನೆ ಮಾಡ್ತಿದ್ದಾರೆ.. ಆಕೆಯ ಸಹಜ ಅಭಿನಯ ನಮಗೆ ತುಂಬಾ ಇಷ್ಟ ಆಗಿದೆ ಅಂತ ಹೇಳ್ತಿದ್ದಾರೆ.
ಅಂದ್ಹಾಗೆ ರಿಯಾಲಿಟಿ ಶೋಗಳಲ್ಲಿ ಭಾಗವಹಿಸ್ತಿದ್ದಾಗಲೂ ಗಗನಾ ಓವರ್ ಆಕ್ಟಿಂಗ್ ಮಾಡ್ತಾರೆ ಅನ್ನೋ ಮಾತು ಕೇಳಿಬಂದಿತ್ತು. ಇದಕ್ಕೆ ಆಗ ಗಗನಾ ಪಾಸಿಟಿವ್ ಆಗೇ ರಿಯಾಕ್ಟ್ ಮಾಡಿದ್ರು.. ಓವರ್ ಆಕ್ಟಿಂಗ್ ಮಾಡ್ತಿದ್ದೀರಾ ಅಂತ ಕೆಲವರು ಹೇಳಿದ್ರು. ಆದ್ರೆ ನಾನು ಇರೋದು ಹೀಗೆ.. ನಾನು ಓವರ್ ಆಕ್ಟಿಂಗ್ ಮಾಡ್ತಿಲ್ಲ ಅಂತ ಹೇಳೋಕೆ ಇಷ್ಟವಿಲ್ಲ. ನಿಮಗೆ ಏನು ಅನಿಸಿದ್ರೂ ಓಕೆ ಅಂತಾ ಆಡಿಕೊಳ್ಳೋರ ಬಾಯಿಮುಚ್ಚಿಸಿದ್ರು.. ಇದೀಗ ಈ ಬಗ್ಗೆ ಮುಂದಿನ ದಿನಗಳಲ್ಲಿ ಮಾತಾಡ್ತಾರಾ ಅಂತಾ ಕಾದು ನೋಡ್ಬೇಕು.

ನೋಡಿರಿ

