ಮಹಾನಟಿ ಗಗನಾಗೆ ಕಂಕಣ ಭಾಗ್ಯ! – ಶೌರ್ಯನ ಜೊತೆ ರಾಜಕುಮಾರಿ ಮದ್ವೆ
ಲಡ್ಡು ಬಾಳಲ್ಲಿ ಹೊಸ ಅಧ್ಯಾಯ ಶುರು!

ಜೀ ಪವರ್ ಪ್ರಸಾರವಾಗ್ತಿರೋ ರಾಜಕುಮಾರಿ ಸೀರಿಯಲ್ ಆರಂಭದಲ್ಲೇ ವೀಕ್ಷಕರಿಗೆ ಇಷ್ಟ ಆಗ್ತಿದೆ. ಧಾರಾವಾಹಿ ಕತೆ ಕೂಡ ಸೀರಿಯಲ್ ಪ್ರೇಮಿಗಳಿಗೆ ಇಷ್ಟವಾಗ್ತಿದೆ. ಮಿಡಲ್ ಕ್ಲಾಸ್ ನಲ್ಲಿ ಹುಟ್ಟಿ ಬೆಳದ ಲಡ್ಡು ಕಜ್ಜಾಯ ಮಾರಿ ಜೀವನ ನಡೆಸ್ತಿದ್ದಾಳೆ. ಆಕೆಗೆ ದೊಡ್ಡ ಸ್ವೀಟ್ ಅಂಗಡಿ ಕಟ್ಬೇಕು ಅನ್ನೋ ಕನಸು ಇದೆ. ಆದ್ರೀಗ ಆ ಕನಸು ನನಸಾಗೋದಿಕ್ಕೆ ಮುನ್ನವೇ ಆಕೆಯ ಬಾಳಿನಲ್ಲಿ ದೊಡ್ಡ ತಿರುವು ಎದುರಾಗಿದೆ. ಇದೀಗ ಲಡ್ಡು ಬಾಳಿಗೆ ಹೀರೋ ಎಂಟ್ರಿಯಾಗಿದ್ದು, ಮದುವೆ ಕೂಡ ನಡೆದಿದೆ.
ಇದನ್ನೂ ಓದಿ: ಶ್ರೀಶಾಂತ್ ಕೆನ್ನೆಗೆ ಬಾರಿಸಿದ ಹರ್ಭಜನ್ – 2008ರ ವಿಡಿಯೋ ಈಗ ರಿಲೀಸ್ ಯಾಕೆ?
ಜೀ ಪವರ್ ನಲ್ಲಿ ಪ್ರಸಾರವಾಗ್ತಿರೋ ರಾಜಕುಮಾರಿ ಸೀರಿಯಲ್ ಈಗ ರೋಚಕ ತಿರುವು ಪಡೆದುಕೊಂಡಿದೆ. ಸಣ್ಣ ವಯಸ್ಸಿನಲ್ಲೇ ಲಡ್ಡು ಮನೆಯ ಜವಾಬ್ದಾರಿ ಹೊತ್ತಿದ್ದಾಳೆ. ಹೀಗಾಗಿ ಆಕೆ, ಮನೆಯಲ್ಲಿ ಕಜ್ಜಾಯ ಸೇಲ್ ಮಾಡಿ, ಬಂದ ಹಣದಲ್ಲಿ ಮನೆ ನಡೆಸ್ತಿದ್ದಾಳೆ. ದೊಡ್ಡ ಸ್ವೀಟ್ ಅಂಗಡಿ ಕಟ್ಟಿಸೋದು ಆಕೆಯ ಕನಸು.. ಹೀಗಾಗಿ ಆಕೆ ಬಳಿ ಮದುವೆ ವಿಚಾರ ಮಾತಾಡಿದ್ರೆ ಸಿಟ್ಟು ಮಾಡಿಕೊಳ್ತಾಳೆ. ಮದುವೆ ಅಂದ್ರೆ ಅಲರ್ಜಿ ಅನ್ನುತ್ತಿದ್ದ ಲಡ್ಡು ಬಾಳಿಗೆ ಈಗ ಹೊಸ ಟ್ವಿಸ್ಟ್ ಸಿಕ್ಕಿದೆ. ಇದೀಗ ಲಡ್ಡು ಬಾಳಿಗೆ ಹೀರೋ ಎಂಟ್ರಿಯಾಗಿದ್ದಲ್ಲದೇ ಮದುವೆ ಕೂಡ ನಡೆದು ಹೋಗಿದೆ.
ಹೌದು.. ಲಡ್ಡು ಬಾಳಿನಲ್ಲಿ ಈಗ ಶೌರ್ಯನ ಎಂಟ್ರಿಯಾಗಿದೆ. ಪ್ರತಿ ಸಲ ಮೀಟ್ ಆದಾಗಲೂ ಅವರ ಮಧ್ಯೆ ಜಗಳವೇ.. ಸಣ್ಣ ಪುಟ್ಟ ವಿಚಾರಕ್ಕೂ ಹಾವು ಮುಂಗುಸಿಯಂತೆ ಕಿತ್ತಾಡ್ತಾರೆ. ಆದ್ರೆ ವಿಧಿ ಮಾತ್ರ ಅವರನ್ನ ಒಂದು ಮಾಡ್ತಿದೆ. ಲಡ್ಡು ಮನೆಯಿಂದ ಹೊರಡ್ತಿದ್ದಂತೆ ಹಾಲಕ್ಕಿ ನುಡಿಸುವವರು ಬಂದಿದ್ದಾರೆ. ಈ ವೇಳೆ ಈ ಮನೆಯೊಳಗೆ ಶುಭಕಾರ್ಯ ನಡೆಯುತ್ತೆ.. ಒಂದು ವಾರದೊಳಗೆ ಲಗ್ನ ನಡೆಯುತ್ತೆ. ಮುತ್ತಿನಂತ ಈ ಹುಡುಗಿಗೆ ಮದುವೆ ಆಗುತ್ತೆ. ಕುತ್ತಿಗೆಗೆ ತಾಳಿ ಬೀಳುತ್ತೆ ಅಂತಾ ಹೇಳಿದ್ದಾರೆ. ಇದನ್ನ ಕೇಳಿ ಎಲ್ಲರೂ ಶಾಕ್ ಆಗಿದ್ದಾರೆ. ಅಷ್ಟೊತ್ತಿದೆ. ಲಡ್ಡುವನ್ನ ಮದುವೆ ಆಗ್ಬೇಕು ಅಂತಾ ಗೋವಿಂದ ಆಕೆಯ ಮನೆಗೆ ಬಂದಿದ್ದಾನೆ. ಲಡ್ಡು ಜೊತೆ ಮದುವೆ ಮಾಡಿಸಿದ್ರೆ ಬದುಕ್ತೀಯ.. ಇಲ್ಲ ಅಂದ್ರೆ ಸಮಾಧಿ ಕಟ್ತೀನಿ ಅಂತಾ ಹೇಳಿದ್ದಾನೆ. ಬಳಿಕ ಲಡ್ಡು ಇದ್ದಲ್ಲಿಗೆ ಬಂದು ಆಕೆಯನ್ನ ಕಿಡ್ನ್ಯಾಪ್ ಮಾಡಲು ಬಂದಿದ್ದಾನೆ. ಅಷ್ಟೊತ್ತಿಗೆ ಶೌರ್ಯ ಬಂದು ಆಕೆಯನ್ನ ಕಾಪಾಡಿದ್ದಾನೆ. ಆದ್ರೆ ಲಡ್ಡುವನ್ನ ಕಾಪಾಡಲು ಬಂದ ಶೌರ್ಯನೆ ಈಗ ಆಕೆಯನ್ನ ಮದುವೆಯಾಗುವಂತೆ ಆಗಿದೆ.
ಗೋವಿಂದ ಲಡ್ಡುವನ್ನ ಮದುವೆಯಾಗಲು ಬಂದಿದ್ದಾನೆ, ಈ ವೇಳೆ ಆಕೆ ಅಲ್ಲಿಂದ ತಪ್ಪಿಸಿಕೊಂಡು ಹೋಗಿ ಶೌರ್ಯನ ರೂಮ್ ನಲ್ಲಿ ಅಡಗಿ ಕುಳಿತಿದ್ದಾಳೆ, ಇದು ಊರವರಿಗೆ ಗೊತ್ತಾಗಿದೆ, ಬಳಿ ಲಡ್ಡು ತಾಯಿ, ಶೌರ್ಯನ ಕಾಲಿಗೆ ಬಿದ್ದು ಮದುವೆ ಆಗು.. ಇಲ್ಲದಿದ್ರೆ ಆಕೆಯ ಬಾಳು ಹಾಳಾಗುತ್ತೆ ಎಂದು ಹೇಳಿಕೊಂಡಿದ್ದಾಳೆ. ಇದ್ರಿಂದಾಗಿ ಬೇರೆ ದಾರಿ ಕಾಣದೇ ಶೌರ್ಯ ಲಡ್ಡುಗೆ ತಾಳಿ ಕಟ್ಟಿದ್ದಾನೆ, ಇದೀಗ ಲಡ್ಡು ಬಾಳಿನಲ್ಲಿ ಹೊಸ ಅಧ್ಯಾಯ ಶುರುವಾಗಿದೆ. ಪುಟ್ಟ ಮನೆಯಲ್ಲಿದ್ದ ಲಡ್ಡು ಈಗ ರಾಜಕುಮಾರಿಯಾಗಿ ಅರಮನೆಗೆ ಕಾಲಿಡ್ತಿದ್ದಾಳೆ . ಆದ್ರೆ ಲಡ್ಡುವನ್ನ ಶೌರ್ಯ ಹೆಂಡ್ತಿಯಾಗಿ ಒಪ್ಪಿಕೊಳ್ಳುವುದು ಡೌಟ್.. ಯಾಕಂದ್ರೆ ಶೌರ್ಯ ಈಗಾಗಲೇ ಬೇರೆ ಹುಡುಗಿಯನ್ನ ಮದ್ವೆ ಆಗಲು ಮುಂದಾಗಿದ್ದ.. ಅಷ್ಟೇ ಅಲ್ಲ ಲಡ್ಡವನ್ನ ಕಂಡ್ರೆ ಆಗೋದೇ ಇಲ್ಲ. ಇದೀಗ ಶತ್ರುಗಳಂತೆ ಇದ್ದವರು ಹೇಗೆ ಒಂದಾಗ್ತಾರೆ ಅನ್ನೋ ಕ್ಯೂರಿಯಾಸಿಟಿ ಮೂಡಿದೆ.

ನೋಡಿರಿ

