ಮಹಾನಟಿ ಗಗನಾ ಈಗ ರಾಜಕುಮಾರಿ! -ದತ್ತುಪುತ್ರಿಗೆ Zee ಕನ್ನಡ ಭರ್ಜರಿ ಗಿಫ್ಟ್!
ಕನ್ನಡಿಗರ ಮನ ಗೆಲ್ಲುತ್ತಾ ಕಜ್ಜಾಯ!

ಗಗನಾ ರಿಯಾಲಿಟಿ ಶೋ ಮೂಲಕವೇ ಖ್ಯಾತಿ ಪಡೆದಿರೋ ಪ್ರತಿಭೆ.. ಮಹಾನಟಿ ಶೋ ಮೂಲಕ ಕನ್ನಡ ಕಿರುತೆರೆಗೆ ಎಂಟ್ರಿಕೊಟ್ಟ ಗಗನಾ ಒಂದಾದ ಮೇಲೊಂದು ಶೋಗಳಲ್ಲಿ ಮಿಂಚಿದ್ರು. ಇದೀಗ ಇದೇ ಮೊದಲ ಬಾರಿಗೆ ಗಗನಾ ಹಿರೋಯಿನ್ ಆಗಿ ತೆರೆಮೇಲೆ ಮಿಂಚಲು ರೆಡಿಯಾಗಿದ್ದಾರೆ. ಝೀ ಕನ್ನಡದ ಹೊಸ ಚಾನೆಲ್ ಝೀ ಪವರ್ನ ಹೊಸ ಧಾರಾವಾಹಿ ರಾಜಕುಮಾರಿಯಲ್ಲಿ ನಟಿಸುತ್ತಿದ್ದಾರೆ. ಇಂದಿನಿಂದ ಈ ಸೀರಿಯಲ್ ಪ್ರಸಾರ ಕಾಣಲಿದೆ.
ಜೀಕನ್ನಡ ವಾಹಿನಿ ಅದೆಷ್ಟೋ ಪ್ರತಿಭೆಗಳಿಗೆ ಒಂದೊಳ್ಳೆ ವೇದಿಕೆ ಕಲ್ಪಿಸಿಕೊಟ್ಟಿದೆ. ಈಗಾಗಲೇ ಅದೆಷ್ಟೋ ಕಲಾವಿದರನ್ನ ನಟನೆ, ಸಂಗೀತ ಕ್ಷೇತ್ರಕ್ಕೆ ಪರಿಚಯಿಸಿದೆ. ಈ ಸಾಲಿನಲ್ಲಿ ಮಹಾನಟಿ ಮೊದಲ ಸೀಸನ್ ಸ್ಪರ್ಧಿ ಗಗನಾ ಭಾರಿ ಕೂಡ ಒಬ್ಬರು. ಮಹಾನಟಿ ಶೋನಲ್ಲಿ ತನ್ನ ಸಹಜ ಅಭಿನಯ, ಮುಗ್ಧ ನಟನೆಯ ಮೂಲಕವೇ ಅಭಿಮಾನಿಗಳನ್ನು ಸಂಪಾದಿಸಿಕೊಂಡು ಬಂದಿದ್ರು. ಮಹಾನಟಿ ಶೋ ಬಳಿಕ ಡಾನ್ಸ್ ಕರ್ನಾಟಕ ಡಾನ್ಸ್, ಭರ್ಜರಿ ಬ್ಯಾಚುಲರ್ಸ್ ಸೀಸನ್ 2ರಲ್ಲೂ ಭಾಗವಹಿಸಿದ್ರು.. ಭರ್ಜರಿ ಬ್ಯಾಚುಲರ್ಸ್ ಸೀಸನ್ 2 ರಲ್ಲಿ ಡ್ರೋನ್ ಪ್ರತಾಪ್‌ಗೆ ಜೋಡಿಯಾಗಿ ಮೂರನೇ ರನ್ನರ್ ಅಪ್ ಆಗಿ ಮಿಂಚಿದ್ರು.. ಝಿಕನ್ನಡ ಆಲ್‌ಮೋಸ್ಟ್ ಎಲ್ಲಾ ಶೋ ಕಂಪ್ಲೀಟ್ ಆಯ್ತು.. ಗಗನಾ ಮುಂದೇನು ಮಾಡ್ತಾರೆ ಅನ್ನೋ ಕ್ಯೂರಿಯಾಸಿಟಿ ಎಲ್ಲರನ್ನ ಕಾಡ್ತಿತ್ತು.. ಇದೀಗ ಜೀಕನ್ನಡ ವಾಹಿನಿ ಗಗನಾಗೆ ಭರ್ಜರಿ ಗಿಫ್ಟ್ ಕೊಟ್ಟಿದೆ.. ಇನ್ಮುಂದೆ ಮಹಾನಟಿ ರಾಜಕುಮಾರಿಯಾಗಿ ತೆರೆಮೇಲೆ ಮಿಂಚಲಿದ್ದಾರೆ.
ಹೌದು, ಜೀಕನ್ನಡದ ಹೊಸ ಚಾನೆಲ್ ಜೀ ಪವರ್ ನಲ್ಲಿ ಹೊಸ ರಿಯಾಲಿಟಿ ಶೋ, ಹೊಸ ಸೀರಿಯಲ್‌ಗಳು ಪ್ರಸಾರವಾಗ್ತಿವೆ. ಇದೀಗ ಜೀ ಪವರ್ ನಲ್ಲಿ ಪ್ರಸಾರವಾಗಲಿರೋ ರಾಜಕುಮಾರಿ ಸೀರಿಯಲ್‌ನಲ್ಲಿ ಗಗನಾ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಇಂದಿನಿಂದ ಜೀ ಪವರ್‌ನಲ್ಲಿ ರಾಜಕುಮಾರಿ ಪ್ರಸಾರವಾಗಲಿದೆ. ಈ ಸೀರಿಯಲ್ ಝೀ ಬಾಂಗ್ಲಾದ ಮಿಥೈ ಸೀರಿಯಲ್ ರಿಮೇಕ್ ಎಂದು ಹೇಳಲಾಗುತ್ತಿದೆ. ಈ ಧಾರಾವಾಹಿಯಲ್ಲಿ ಲಂಗ ದಾವಣಿ ಧರಿಸಿ, ಎರಡು ಜಡೆ ಹಾಕಿ ಪಕ್ಕ ಹಳ್ಳಿ ಹುಡುಗಿ ಗೆಟಪ್ನಲ್ಲಿ ಕಾಣಿಸಿಕೊಂಡಿದ್ದಾರೆ. ಮನೆಯಲ್ಲಿ ಕಜ್ಜಾಯ ಮಾಡಿ, ಊರಲ್ಲಿ ಸೇಲ್ ಮಾಡೋ ಈಕೆಗೆ ದೊಡ್ಡ ಸ್ವೀಟ್ ಅಂಗಡಿ ನಡೆಸೋ ಆಸೆ.. ಕಡೆಗೆ ಆಕೆ ಸ್ವೀಟ್ ಅಂಗಡಿ ಓನರ್ ಅನ್ನೇ ಮದುವೆ ಆಗೋದೇ ಸೀರಿಯಲ್ ಕತೆ ಅನ್ನೋದು ಪ್ರೋಮೋ ನೋಡಿದಾಗ ಗೊತ್ತಾಗುತ್ತೆ.
ಅಂದಹಾಗೆ ರಾಜಕುಮಾರಿ ಧಾರಾವಾಹಿಗೆ ಇವರು ಸೆಲೆಕ್ಟ್ ಆಗಿದ್ದೆ ಅಚಾನಕ್ ಆಗಿಯಂತೆ. ಈ ಬಗ್ಗೆ ಸ್ವತಃ ಗಗನಾ ಅವರೇ ಹೇಳಿದ್ದಾರೆ. ನನಗೆ ಈ ಚಾನ್ಸ್ ಕೊಟ್ಟಿದ್ದೆ ಝೀ ಕನ್ನಡ. ಅಂದು ಭರ್ಜರಿ ಬ್ಯಾಚುಲರ್ಸ್ ಸೀಸನ್ 2 ಶೂಟಿಂಗ್ ನಡೆಯುತ್ತಿತ್ತು. ನನ್ನ ಹತ್ತಿರ ಬಂದ ಝೀ ಕನ್ನಡ ಟೀಮ್ ಈ ತರ ಒಂದು ಸೀರಿಯಲ್ ಅವಕಾಶ ಇದೆ ನೀನು ಮಾಡು ಅಂತ ಹೇಳಿದರು. ನಾನು ಆಗ ಯೋಚನೆ ಮಾಡಿದೆ. ನನಗೆ ಯಾವಾಗಲೂ ಒಳ್ಳೆಯ ಅವಕಾಶ ಕೊಡ್ತಾರೆ ಅಂತ. ಅದಕ್ಕೆ ಮಾಡ್ತೀನಿ ಅಂತ ಹೇಳಿದೆ. ಮತ್ತೆ ನಾನು ಆಡಿಷನ್ ಕೊಟ್ಟೆ. ಆ ಪಾತ್ರಕ್ಕೂ ಸೂಟ್ ಆಗ್ತಾಳೆ ಎಂದು ನನ್ನನ್ನೇ ಸೆಲೆಕ್ಟ್ ಮಾಡಿದ್ರು ಎಂದು ಹೇಳಿದ್ದಾರೆ.
ಗಗನಾ ಭಾರಿ ಚಿತ್ರದುರ್ಗ ಮೂಲದವರು. ಮಧ್ಯಮ ವರ್ಗದ ಕುಟುಂಬದಿಂದ ಬಂದ ಇವರು ಎಂಜಿನಿಯರಿಂಗ್ ಪದವಿಧರೆ. ಆದರೆ, ಗಗನಾಗೆ ಮೊದಲಿನಿಂದಲೂ ನಟನೆಯ ಮೇಲೆ ಒಲವಿತ್ತು. ಓದು ಮುಗಿಸಿದ ನಂತರ ಅವರು ಪ್ರತಿಷ್ಠಿತ ಕಂಪನಿಗಳಲ್ಲಿ ಕೆಲಸ ಮಾಡುತ್ತಿರುವಾಗ ಮಹಾನಟಿಗೆ ಆಡಿಷನ್ ಕೊಟ್ಟು ಸೆಲೆಕ್ಟ್ ಆದರು. ಬಳಿಕ ಐಟಿ ಕೆಲಸಕ್ಕೆ ರಿಸೈನ್ ಮಾಡಿ ಈಗ ತಮ್ಮ ನೆಚ್ಚಿನ ನಟನಾ ಕ್ಷೇತ್ರದಲ್ಲಿ ಬ್ಯುಸಿಯಾಗಿದ್ದಾರೆ. ಇಷ್ಟು ದಿನ ರಿಯಾಲಿಟಿ ಶೋಗಳಲ್ಲಿ ಮಿಂಚಿದ್ದ ಗಗನಾ ಇನ್ಮುಂದೆ ರಾಜಕುಮಾರಿಯಾಗಿ ಜನರ ಮನಸ್ಸು ಗೆಲ್ತಾರಾ ಅಂತಾ ಕಾದುನೋಡ್ವೇಕು.

ನೋಡಿರಿ

