ಫ್ಯಾನ್ಸ್ ಮನಗೆದ್ದ ರಾಜಾ ಸಾಬ್ – ಡೈನೋಸಾರ್ ಪ್ರಭಾಸ್ ನಟನೆಗೆ ಫುಲ್ ಮಾರ್ಕ್ಸ್

ಟಾಲಿವುಡ್ ರೆಬೆಲ್ ಪ್ರಭಾಸ್ ಸಿನಿಮಾ ರಿಲೀಸ್ ದಿನವೇ ಅವರ ಫ್ಯಾನ್ಸ್ ಗೆ ದೀಪಾವಳಿ ಹಬ್ಬ. ಇವತ್ತು ಶುಕ್ರವಾರ ಪ್ರಭಾಸ್ ಅಭಿನಯದ ರಾಜಾಸಾಬ್ ರಿಲೀಸ್ ಆಗಿದೆ. ಹಾರರ್ ಕಾಮಿಡಿ ಸಿನಿಮಾ ನೋಡಿದ ಪ್ರಭಾಸ್ ಅಭಿಮಾನಿಗಳು ಸಂಭ್ರಮಿಸಿದ್ದಾರೆ. ಇನ್ನು ಕೆಲವರು ನೆಗೆಟಿವ್ ವಿಮರ್ಶೆ ಮಾಡಿದರೂ ಕೂಡಾ ಸಿನಿಮಾ ಜಬರ್ದಸ್ತ್ ಆಗಿದೆ ಅಂತಿದ್ದಾರೆ ಫ್ಯಾನ್ಸ್.
ಇದನ್ನೂ ಓದಿ: ಆಸ್ಕರ್ ಅಂಗಳಕ್ಕೆ ಕಾಲಿಟ್ಟ ಕಾಂತಾರ ಚಾಪ್ಟರ್ -1 ಸಿನಿಮಾ – ಅತ್ಯುತ್ತಮ ಚಿತ್ರ ವಿಭಾಗದ ಸ್ಪರ್ಧೆಗೆ ಎಂಟ್ರಿ
ಡೈನೋಸಾರ್ ಪ್ರಭಾಸ್ ನಟನೆಯ ರಾಜಾ ಸಾಬ್ ಚಿತ್ರ ಭರ್ಜರಿಯಾಗಿಯೇ ತೆರೆಗೆ ಅಪ್ಪಳಿಸಿದೆ. ಪ್ರಭಾಸ್ ಜೊತೆ ಸಂಜಯ್ ದತ್, ಬೋಮನ್ ಇರಾನಿ, ಮಾಳವಿಕಾ ಮೋಹನ್ ಸೇರಿದಂತೆ ಅನೇಕರು ನಟಿಸಿದ್ದಾರೆ. ಈ ಚಿತ್ರ ಹಾರರ್ ಕಾಮಿಡಿ ಶೈಲಿಯಲ್ಲಿ ಮೂಡಿ ಬಂದಿದ್ದು, ಫ್ಯಾನ್ಸ್ ಪ್ರಭಾಸ್ ನಟನೆಗೆ ಫುಲ್ ಫಿದಾ ಆಗಿದ್ದಾರೆ. ಬಹಳ ಸಮಯದ ನಂತರ ಪ್ರಭಾಸ್ ಕಾಮಿಡಿ ಮಾಡಿದ್ದಾರೆ. ಭಯದ ಜೊತೆಗೆ ಹಾಸ್ಯದ ಲೇಪನ ಚಿತ್ರದ ಪ್ಲಸ್ ಪಾಯಿಂಟ್ ಅನ್ನೋದು ಅಭಿಮಾನಿಗಳ ಅಭಿಪ್ರಾಯ. ಇನ್ನು ಕೆಲವರು ಗ್ರಾಫಿಕ್ಸ್, ವಿಶ್ಯುವಲ್ಸ್ ಬೋರ್ ಹೊಡೆಸುತ್ತಿದೆ ಎಂದು ಹೇಳಿದ್ದಾರೆ. ಜೊತೆಗೆ ಸಿನಿಮಾದ ಅವಧಿ ಮೂರು ಗಂಟೆಗೂ ಅಧಿಕವಾಗಿದೆ. ಇದು ಸಿನಿಮಾಗೆ ನೆಗೆಟಿವ್ ಶೇಡ್ ನೀಡುತ್ತಿದೆ ಅಂತಾನೂ ಹೇಳಿದ್ದಾರೆ.
ದಿ ರಾಜಾಸಾಬ್ ಸಿನಿಮಾ ನಿರ್ದೇಶನ ಮಾಡಿರುವುದು ಮಾರುತಿ. ಇದು ಸಂಪೂರ್ಣ ಹಾರರ್ ಫ್ಯಾಂಟಸಿ ಡ್ರಾಮಾ. ಮೇನ್ ಕಾನ್ಸೆಪ್ಟ್ ಕುತೂಹಲಕಾರಿಯಾಗಿದೆ. ಬಹಳ ದಿನಗಳ ನಂತರ ತೆರೆಮೇಲೆ ಪ್ರಭಾಸ್ ಅವರ ಎನರ್ಜಿಟಿಕ್ ಆಕ್ಟಿಂಗ್ ಸೂಪರ್ ಅಂತಿದ್ದಾರೆ ಫ್ಯಾನ್ಸ್.

ನೋಡಿರಿ

