ಪಿಕೆಗೆ ಜಡ್ಜಸ್ ಕಮೆಂಟ್ ಕೊಡಲ್ಲ ಯಾಕೆ? – ಇವರೇನಾ ರಾಜಾ ರಾಣಿ ವಿನ್ನರ್?

ಪಿಕೆಗೆ ಜಡ್ಜಸ್ ಕಮೆಂಟ್ ಕೊಡಲ್ಲ ಯಾಕೆ? – ಇವರೇನಾ ರಾಜಾ ರಾಣಿ ವಿನ್ನರ್?

ಕಲರ್ಸ್ ಕನ್ನಡ ವಾಹಿನಿ ಮನರಂಜನೆ ಕೊಡೋದ್ರಲ್ಲಿ ಯಾವಾಗ್ಲೂ ಮುಂದಿರುತ್ತೆ. ಅದು ಧಾರಾವಾಹಿ ಆಗಿರಲಿ ಅಥವಾ ರಿಯಾಲಿಟಿ ಶೋಗಳೇ ಆಗಿರಲಿ ಯಾವಾಗ್ಲೂ ಒಂದು ಹೆಜ್ಜೆ ಮುಂದೇನೆ ಇರುತ್ತೆ. ಸದ್ಯ ಕಲರ್ಸ್‌ ಕನ್ನಡದಲ್ಲಿ ರಾಜಾ ರಾಣಿ ರಿಯಾಲಿಟಿ ಶೋ ಭಾರಿ ಸೌಂಡ್‌ ಮಾಡ್ತಾ ಇದೆ.. ವೀಕ್ಷಕರು ಕೂಡ ಈ ಶೋಗೆ ಫುಲ್‌ ಮಾರ್ಕ್ಸ್‌ ಕೊಟ್ಟು ಬಿಟ್ಟಿದ್ದಾರೆ..  ಪ್ರಿಯಾಂಕಾ ಕಾಮತ್ ಹಾಗೂ ಅಮಿತ್‌ ನಾಯಕ್ ಶೋನ ಹೈಲೈಟ್ಸ್‌ ಅಂತಾನೇ ಹೇಳ್ಬೋದು.. ಸದಾ ತರಲೆ ಮಾಡುತ್ತಾ ಎಲ್ಲರನ್ನ ನಗಿಸ್ತಾ ಇರ್ತಾರೆ.. ತುಂಟಾಟ ಜೊತೆ ಜೊತೆಗೆ ಈ ಜೋಡಿ ಒಳ್ಳೆ ಪಾರ್ಫಾಮೆನ್ಸ್‌ ನೀಡ್ತಾ ಬಂದಿದೆ. ಆದ್ರೆ ಎಷ್ಟು ಒಳ್ಳೆ ಪರ್ಫಾಮೆನ್ಸ್‌ ಕೊಟ್ರು ಕೂಡ ಪ್ರಿಯಾಂಕಾಗೆ ಜಡ್ಜಸ್‌ ಕಾಮೆಂಟ್‌ ಮಾತ್ರ ಮಾಡ್ತಿಲ್ಲ.. ಅಷ್ಟಕ್ಕೂ ಪ್ರಿಯಾಂಕಾಗೆ ಜಡ್ಜಸ್‌ ಯಾಕೆ ಕಾಮೆಂಟ್‌ ಮಾಡ್ತಿಲ್ಲ ಅನ್ನೋ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ಬಿಗ್‌ ಬಾಸ್‌ ಪ್ರೋಮೋ ಫೋಟೋ ಲೀಕ್!! – ಸೆಟ್‌ ನಲ್ಲಿ ಸುದೀಪ್ ಸರ್‌ ಪ್ರೈಸ್

ನಿಜವಾದ ಪ್ರೀತಿ ಅಂದ್ರೆ ಏನು ಅಂತಾ ಪ್ರಿಯಾಂಕ‌, ಅಮಿತ್ ಜೋಡಿ.. ಜಗತ್ತಿಗೆ ನಿರೂಪಿಸಿಕೊಟ್ಟಿದೆ.. ಜೀವಕ್ಕೆ ಜೀವ ಕೊಡೋ ಗಂಡ.. ಏನೇ ಆದ್ರೂ ನಿನ್ನನ್ನ ಬಿಡಲ್ಲ ಅನ್ನೋ ಹೆಂಡ್ತಿ.. ಸಂಸಾರ ಬಂಡಿ ಸಾಗಲು ಇಷ್ಟು ಸಾಕಲ್ವಾ.. ಸದ್ಯ ಪ್ರಿಯಾಂಕ ಹಾಗೂ ಅಮಿತ್‌ ಜೋಡಿ ರಾಜಾ ರಾಣಿ ಕಾರ್ಯಕ್ರಮದ ಸೆಂಟರ್ ಆಫ್ ಅಟ್ರ್ಯಾಕ್ಷನ್.. ಮಂಗಳೂರು ಕನ್ನಡ ಮಾತಾಡುತ್ತಾ.. ಸದಾ ಮಕ್ಕಳಂತೆ ತುಂಟಾಟ ಮಾಡ್ತಾ ಈ ಜೋಡಿ ವೀಕ್ಷಕರ ಮನಗೆದ್ದಿದೆ.. ಈ ಜೋಡಿ ಮಾತು ಕೇಳೋಕೆ ಚೆಂದ.. ಶೋನಲ್ಲಿ ಎಷ್ಟೇ ತುಂಟಾಟ ಮಾಡಿದ್ರು ಕೂಡ ಇವರಿಬ್ಬರು.. ಪರ್ಫಾಮೆನ್ಸ್‌ ವಿಚಾರ ಬಂದ್ರೆ ಎತ್ತಿದ ಕೈ.. ಯಾವುದೇ ಕಾರಣಕ್ಕೂ ಕಾಂಪ್ರಮೈಸ್‌ ಇಲ್ಲ.. ಈ ಜೋಡಿ ಎಷ್ಟೇ ಒಳ್ಳೆ ಪಾರ್ಫಾಮೆನ್ಸ್‌ ಕೊಟ್ರೂ ಕೂಡ ಅಮಿತ್‌ ಗೆ ಮಾತ್ರ ಜಡ್ಜಸ್‌ ಕಾಮೆಂಟ್‌ ಮಾಡ್ತಾರೆ.. ಆತನನ್ನೇ ಹಾಡಿ ಹೊಗಳ್ತಾರೆ.. ಆದ್ರೆ ಪ್ರಿಯಾಂಕಗೆ ಕಾಮೆಂಟ್‌ ಮಾಡಲ್ಲ.. ಜಡ್ಜಸ್‌ ಪ್ಲೀಸ್ ಇವತ್ತಾದ್ರೂ ನನ್ನ ಬಗ್ಗೆ ಏನಾದ್ರೂ ಹೇಳಿ ಅಂತಾ ಕ್ಯೂಟ್‌ ಆಗಿ ರಿಕ್ವೆಸ್‌ ಮಾಡಿದ್ರು ಕೂಡ.. ಸೃಜನ್‌ ಲೋಕೆಶ್‌, ಅದಿತಿ ಪ್ರಭುದೇವ, ತಾರಾ ಆಗ್ಲೀ ಕಾಮೆಂಟ್‌ ಮಾಡಲ್ಲ.. ಇದು ಎಲ್ಲರನ್ನ ನಗುವಂತೆ ಮಾಡಿದೆ..

ಇನ್ನು ಪ್ರಿಯಾಂಕ ಹಾಗೂ ಅಮಿತ್‌ ಜೋಡಿ ಟಿಆರ್‌ಪಿ ಕಂಟೆಂಟ್‌ ಅಂತಾ ಹೇಳಿದ್ರೂ ತಪ್ಪಾಗಲ್ಲ.. ಅದ್ರಲ್ಲೂ ಲಾಸ್ಟ್ ವೀಕ್ ಫ್ಯಾಮಿಲಿ ರೌಂಡ್ಸ್ ನಲ್ಲೂ ಪಿಕೆ ಫ್ಯಾಮಿಲಿ ಮತ್ತು ಅಮಿತ್ ಫ್ಯಾಮಿಲಿ ಮಾಡಿರೋ ಡ್ಯಾನ್ಸ್ ಗೆ ಫ್ಯಾನ್ಸ್ ಕೂಡಾ ಫಿದಾ ಆಗಿದ್ರು. ಮನೆಯವರು ಹೀಗೆ ಸಪೋರ್ಟ್ ಮಾಡ್ತಿರೋದನ್ನ ನೋಡೋದೇ ಚೆಂದ. ನಿಜವಾಗ್ಲೂ ಈ ಜೋಡಿ ರೀಲ್ ನಲ್ಲಿ ಅಷ್ಟೇ ಅಲ್ಲ, ರಿಯಲ್ ಲೈಫ್ ನಲ್ಲೂ ರಾಜಾ ರಾಣಿಯೇ ಅಂತಾ ಕಾಮೆಂಟ್ಸ್ ಕೊಟ್ಟಿದ್ರು ಫ್ಯಾನ್ಸ್. ಇದೀಗ ಈ ಜೋಡಿ ರಾಜಾ ರಾಣಿ ಟೈಟಲ್ ಗಾಗಿ ಉಳಿದ ಸ್ಪರ್ಧಿಗಳಿಗೆ ಟಫ್ ಫೈಟ್ ಕೊಡ್ತಿದೆ. ಈ ಮುದ್ದಾದ ಜೋಡಿ ಪರ್ಫಾಮೆನ್ಸ್‌ ವೀಕ್ಷಕರಿಗೂ ಇಷ್ಟವಾಗ್ತಿದೆ. ಈ ಕ್ಯೂಟ್ ಜೋಡಿಯೇ ಈ ಸೀಸನ್‌ನ ವಿನ್ನರ್‌ ಅಂತಾ ಅನೇಕರು ಗೆಸ್ ಕೂಡ ಮಾಡ್ತಿದ್ದಾರೆ.

Shwetha M

Leave a Reply

Your email address will not be published. Required fields are marked *