‘ಟೋಬಿ’ ಚಿತ್ರದಲ್ಲಿ ರಾಜ್ ಬಿ ಶೆಟ್ಟಿ ರಗಡ್ ಲುಕ್..! – ನಟನ ಅವತಾರ ನೋಡಿ ಅಭಿಮಾನಿಗಳಿಗೆ ಅಚ್ಚರಿ..!

‘ಟೋಬಿ’ ಚಿತ್ರದಲ್ಲಿ ರಾಜ್ ಬಿ ಶೆಟ್ಟಿ ರಗಡ್ ಲುಕ್..! – ನಟನ ಅವತಾರ ನೋಡಿ ಅಭಿಮಾನಿಗಳಿಗೆ ಅಚ್ಚರಿ..!

ಗರುಡ ಗಮನ, ವೃಷಭ ವಾಹನ ಸಿನಿಮಾದಲ್ಲಿ ರಾಜ್ ಬಿ ಶೆಟ್ಟಿಯನ್ನು ನೋಡಿದ ಅಭಿಮಾನಿಗಳು ಅವರ ನಟನೆಗೆ ಬೆರಗಾಗಿದ್ದರು. ರಾಜ್ ಬಿ ಶೆಟ್ಟಿಯವರು ಈ ರೀತಿಯೂ ನಟಿಸುತ್ತಾರಾ ಎಂದು ಅಚ್ಚರಿ ಪಟ್ಟಿದ್ದರು. ಇದೀಗ ರಾಜ್ ಬಿ ಶೆಟ್ಟಿ ಮತ್ತೊಮ್ಮೆ ಉಗ್ರ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಇದಕ್ಕೆ ಸಾಕ್ಷಿ ‘ಟೋಬಿ’ ಸಿನಿಮಾದ ಪೋಸ್ಟರ್‌ಗಳು. ಸದ್ಯ ಈ ಚಿತ್ರದ ಫಸ್ಟ್ ಲುಕ್ ಬಿಡುಗಡೆಯಾಗಿದೆ. ಈ ಪೋಸ್ಟರ್ ಸಿನಿಮಾ ಪ್ರೇಮಿಗಳಿಗೆ ನಿಜಕ್ಕೂ ಸರ್‌ಪ್ರೈಸ್ ಕೊಟ್ಟಿದೆ.

ಇದನ್ನೂ ಓದಿ: “ಮಾರಿ.. ಮಾರಿ.. ಮಾರಿಗೆ ದಾರಿ” – ರಾಜ್‌ ಬಿ ಶೆಟ್ಟಿಯ“ಟೋಬಿ “ ಚಿತ್ರ ರಿಲೀಸ್‌ ಗೆ ಡೇಟ್ ಫಿಕ್ಸ್‌

ಪೋಸ್ಟರ್‌ನಲ್ಲಿ ಬಳೆಯಾಕಾರದ ದೊಡ್ಡದೊಂದು ಮೂಗುತಿ ಧರಿಸಿರುವ ರಾಜ್ ಬಿ ಶೆಟ್ಟಿ ಕಣ್ಣಲ್ಲಿ ಬೆಂಕಿಯುಗುಳುವಂತೆ ಕಾಣಿಸಿಕೊಂಡಿದ್ದಾರೆ. ಅವರ ಮುಖದಲ್ಲಿ ಗಾಯಗಳಿವೆ. ಎದೆಯಲ್ಲಿ ಬೆಂಕಿಯುರಿಯುವಂತೆ ಪೋಸ್ಟರ್ ರಿಲೀಸ್ ಆಗಿದೆ. ಟೋಬಿ ಸಿನಿಮಾ ಟಿಕೆ ದಯಾನಂದ ಅವರ ಕತೆ ಆಧರಿಸಿದ ಸಿನಿಮಾ. ದಯಾನಂದರ ಕತೆಯನ್ನು ಚಿತ್ರಕತೆ ರೂಪಕ್ಕೆ ತಂದಿದ್ದು ಖುದ್ದು ರಾಜ್ ಬಿ ಶೆಟ್ಟಿ. ಆ ಚಿತ್ರಕತೆಯನ್ನಿಟ್ಟುಕೊಂಡು ಬಾಸಿಲ್ ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ರಾಜ್ ಬಿ ಶೆಟ್ಟಿ ತಂಡ ಕಡಿಮೆ ದಿನದಲ್ಲಿ, ಕಡಿಮೆ ಬಜೆಟ್‌ನಲ್ಲಿ ಈ ಸಿನಿಮಾವನ್ನು ಅಚ್ಚುಕಟ್ಟಾಗಿ ಮುಗಿಸಿದೆ. ಹೆಚ್ಚು ಸದ್ದು ಮಾಡದೆ ಮಂಗಳೂರಿನ ಆಸುಪಾಸಲ್ಲೇ ಈ ಸಿನಿಮಾ ರೂಪಿಸಿರುವುದು ಸಿನಿಮಾದ ವಿಶೇಷ. ಈ ಸಿನಿಮಾ ಆಗಸ್ಟ್ 25ರಂದು ಬಿಡುಗಡೆಯಾಗುತ್ತಿದ್ದು, ಸಿನಿಮಾದ ಪ್ರಚಾರ ಕಾರ್ಯ ಎರಡು ತಿಂಗಳು ಮೊದಲೇ ಆರಂಭವಾಗಿದೆ. ಈ ಚಿತ್ರದಲ್ಲಿ ರಾಜ್ ಬಿ ಶೆಟ್ಟಿಯವರ ಜೊತೆಗೆ ಸಂಯುಕ್ತಾ ಹೊರನಾಡು ಕೂಡ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ.

suddiyaana