ಸು ಫ್ರಮ್‌ ಸೋ ಸಕ್ಸಸ್‌ ಬೆನ್ನಲ್ಲೇ ರಾಜ್‌ ಬಿ ಶೆಟ್ಟಿ ನಟನೆಯ ಮತ್ತೊಂದು ಸಿನಿಮಾ ರಿಲೀಸ್‌ಗೆ ರೆಡಿ!

ಸು ಫ್ರಮ್‌ ಸೋ ಸಕ್ಸಸ್‌ ಬೆನ್ನಲ್ಲೇ ರಾಜ್‌ ಬಿ ಶೆಟ್ಟಿ ನಟನೆಯ ಮತ್ತೊಂದು ಸಿನಿಮಾ ರಿಲೀಸ್‌ಗೆ ರೆಡಿ!

ರಾಜ್‌ ಬಿ ಶೆಟ್ಟಿ ನಿರ್ಮಾಣದ ಸು ಫ್ರಮ್‌ ಸೋ ಸೋ ಸಿನಿಮಾ ಸಕ್ಸಸ್‌ ಕಂಡಿದೆ. ಕಡಿಮೆ ಬಜೆಟ್‌ ನಲ್ಲಿ ನಿರ್ಮಾಣ ಮಾಡಿರೋ ಈ ಸಿನಿಮಾ ಬಾಕ್ಸ್‌ ಆಫೀಸ್‌ನಲ್ಲಿ ದಾಖಲೆ ಬರಿತಾ ಇದೆ. ಈ ಸಿನಿಮಾ ಸಕ್ಸಸ್‌ ನಡುವೆಯೇ ರಾಜ್‌ಬಿ ಶೆಟ್ಟಿ ನಟನೆಯ ಮತ್ತೊಂದು ಸಿನಿಮಾ ತೆರೆ ಮೇಲೆ ಅಬ್ಬರಿಸಲು ರೆಡಿಯಾಗಿದೆ.

ಇದನ್ನೂ ಓದಿ: ಕೆಂಪು ಕೋಟೆಗೆ ಅಕ್ರಮವಾಗಿ ಬಾಂಗ್ಲಾ ಪ್ರಜೆಗಳ ಎಂಟ್ರಿ – ಐವರು ಅರೆಸ್ಟ್ , ತೀವ್ರ ವಿಚಾರಣೆ

ಹೌದು, ಸು ಫ್ರಮ್‌ ಸೋ ಸಿನಿಮಾ ಪ್ರಚಾರವಿಲ್ಲದೆಯೇ ಸಕ್ಸಸ್‌ ಕಂಡಿದೆ. ಈಗಾಗಲೇ ಗಲ್ಲಾಪಟ್ಟಿಗೆಯಲ್ಲಿ ದಾಖಲೆ ಬರಿತಾ ಇದೆ. 40 ಕೋಟಿಗೂ ಅಧಿಕ ಕಲೆಕ್ಷನ್‌ ಮಾಡಿದ್ದು, ಸಿನಿಮಾ 50 ಕೋಟಿ ರೂಪಾಯಿ ಕ್ಲಬ್ ಸೇರುವ ಸಾಧ್ಯತೆ ಇದೆ. ಇದೀಗ ಕನ್ನಡ, ಮಲಯಾಳಂ ಮಾತ್ರವಲ್ಲದೆ, ಪರಭಾಷೆಗಳಿಗೂ ಡಬ್ ಆಗಿ ರಿಲೀಸ್ ಆಗುತ್ತಿದೆ. ಸು ಫ್ರಮ್‌ ಸೋ ಅಬ್ಬರದ ನಡುವೆಯೇ ಈಗ ರಾಜ್ ಬಿ. ಶೆಟ್ಟಿ ನಟನೆಯ ಮತ್ತೊಂದು ಸಿನಿಮಾ   ‘45’ ರಿಲೀಸ್​ಗೆ ರೆಡಿ ಇದೆ.

ಅರ್ಜುನ್ ಜನ್ಯ ಅವರು ಸಂಗೀತ ಸಂಯೋಜಕರಾಗಿ ಇಷ್ಟ ಆಗಿದ್ದಾರೆ. ಇದೇ ಮೊದಲ ಬಾರಿಗೆ ಅವರು ಸಿನಿಮಾ ನಿರ್ದೇಶನಕ್ಕೆ ಇಳಿದಿದ್ದಾರೆ. ಆ ಚಿತ್ರಕ್ಕೆ ‘45’ ಎನ್ನುವ ಶೀರ್ಷಿಕೆ ಕೊಡಲಾಗಿದೆ. ಸಿನಿಮಾದ ಟೀಸರ್ ಗಮನ ಸೆಳೆದಿದೆ. ಈ ಚಿತ್ರದಲ್ಲಿ ರಾಜ್ ಬಿ. ಶೆಟ್ಟಿ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಶಿವರಾಜ್​ಕುಮಾರ್ ಹಾಗೂ ಉಪೇಂದ್ರ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.‘ಸು ಫ್ರಮ್ ಸೋ’ ಇನ್ನೂ ಕೆಲ ವಾರ ಅಬ್ಬರಿಸಲಿದೆ. ಹೀಗಿರುವಾಗಲೇ ‘45’ ಸಿನಿಮಾ ರಿಲೀಸ್ ಆಗುತ್ತಿದೆ. ಆಗಸ್ಟ್ 15ರಂದು ಚಿತ್ರ ಬಿಡುಗಡೆ ಕಾಣಲಿದೆ. ಹಾಗಾದಲ್ಲಿ ಬಾಕ್ಸ್ ಆಫೀಸ್​ನಲ್ಲಿ ‘ರಾಜ್ vs ರಾಜ್’ ಎಂಬ ಪರಿಸ್ಥಿತಿ ಮೂಡಿದರೂ ಅಚ್ಚರಿ ಏನಿಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

Shwetha M