“ಮಾರಿ.. ಮಾರಿ.. ಮಾರಿಗೆ ದಾರಿ” – ರಾಜ್‌ ಬಿ ಶೆಟ್ಟಿಯ“ಟೋಬಿ “ ಚಿತ್ರ ರಿಲೀಸ್‌ ಗೆ ಡೇಟ್ ಫಿಕ್ಸ್‌

“ಮಾರಿ.. ಮಾರಿ.. ಮಾರಿಗೆ ದಾರಿ” – ರಾಜ್‌ ಬಿ ಶೆಟ್ಟಿಯ“ಟೋಬಿ “ ಚಿತ್ರ ರಿಲೀಸ್‌ ಗೆ ಡೇಟ್ ಫಿಕ್ಸ್‌

ವಿಭಿನ್ನ ಸಿನಿಮಾಗಳ ಮೂಲಕವೇ ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ನಟ, ನಿರ್ದೇಶಕ ರಾಜ್‌ ಬಿ ಶೆಟ್ಟಿ ಸಿನಿ ಪ್ರಿಯರಿಗೆ ಖುಷಿ ಸುದ್ದಿ ನೀಡಿದ್ದಾರೆ. ‘ಗರುಡ ಗಮನ ವೃಷಭ ವಾಹನ’ಸಿನಿಮಾ ನೋಡಿ ಇಷ್ಟಪಟ್ಟಿದ್ದ ಪ್ರೇಕ್ಷಕರಿಗೆ ರಾಜ್‌ ಬಿ ಶೆಟ್ಟಿ ಕೆಲ ದಿನಗಳ ಹಿಂದೆ ಮುಂದಿನ ಚಿತ್ರದ ಬಗ್ಗೆ ಬಿಗ್ ಅಪ್‌ಡೇಟ್ ತಿಳಿಸೋದಾಗಿ ಹೇಳಿದ್ದರು. ಇದೀಗ ಹೇಳಿಕೊಂಡಂತೆ ನಡೆದಿದ್ದಾರೆ.

ಇದನ್ನೂ ಓದಿ: ಫಹಾದ್ ಫಾಸಿಲ್ ನಟನೆಯ ‘ಧೂಮಂ’ ಟ್ರೇಲರ್ ರಿಲೀಸ್ – ಕ್ರೇಜ್ ಹುಟ್ಟಿಸಿದ ಹೊಂಬಾಳೆಯ ಹೊಸ ಸಿನಿಮಾ

ವಿಭಿನ್ನ ಕಂಟೆಂಟ್‌ ಮೂಲಕ ‘ಗರುಡ ಗಮನ ವೃಷಭ ವಾಹನʼ ಸಿನಿ ರಸಿಕರ ಮನಗೆದ್ದಿತ್ತು. ಕರಾವಳಿಯ ಹುಲಿವೇಷ, ವಾತಾವರಣ ಭಾಷಾ ಸೊಗಡು ಸಿನಿ ಪ್ರೇಕ್ಷಕರಿಗೆ ಇಷ್ಟವಾಗಿತ್ತು. ಇದೇ ತಂಡವನ್ನಿಟ್ಟುಕೊಂಡು ರಾಜ್‌ ಬಿ ಶೆಟ್ಟಿ ಮತ್ತೊಂದು ಸಿನಿಮಾವನ್ನು ಅನೌನ್ಸ್‌ ಮಾಡಿದ್ದಾರೆ. ರಾಜ್‌ ಬಿ ಶೆಟ್ಟಿ ಅವರ ʼ ಲೈಟರ್ಸ್ ಬುದ್ಧ ಫಿಲ್ಮ್ʼ ʼ ಅಗಸ್ತ್ಯ ಫಿಲ್ಮ್ಸ್ʼ ಅವರೊಂದಿಗೆ ಜಂಟಿಯಾಗಿ ಬರುತ್ತಿರುವ ಸಿನಿಮಾಕ್ಕೆ “ಟೋಬಿ “ ಟೈಟಲ್‌ ಇಡಲಾಗಿದೆ. ಅದರ ಜೊತೆಗೆ ಈ ಸಿನಿಮಾ ಇದೇ ಆಗಸ್ಟ್ 25 ರಂದು ರಿಲೀಸ್ ಮಾಡುವುದಾಗಿಯೂ ತಿಳಿಸಿದ್ದಾರೆ.

ಟೋಬಿ ಸಿನಿಮಾದಲ್ಲಿ ರಾಜ್‌ ಬಿ ಶೆಟ್ಟಿ ಅವರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ರಾಜ್‌ ಬಿ ಶೆಟ್ಟಿ ತಮ್ಮ ಸೋಶಿಯಲ್‌ ಮೀಡಿಯಾದಲ್ಲಿ ಟೀಸರ್‌ ಅನ್ನು ಶೇರ್‌ ಮಾಡಿದ್ದಾರೆ. ಈ ಟೀಸರ್‌ ನಲ್ಲಿ ರೋಷದಲ್ಲಿರುವ ಕುರಿಯ ಮುಖವನ್ನು ತೋರಿಸಿ ಹಿನ್ನೆಲ್ಲೆಯಲ್ಲಿ “ಮಾರಿ.. ಮಾರಿ.. ಮಾರಿಗೆ ದಾರಿ” ಹಾಡು ಪ್ಲೇ ಆಗಿದೆ. ಫೋಟೋ ಹಿಂದೆ ಮಿಸ್ಸಿಂಗ್‌ ಎಂದು ಬರೆದಿದ್ದಾರೆ. ಪುಟ್ಟ ಟೀಸರ್‌ ನಲ್ಲಿ ಸಿನಿಮಾ ಆಗಸ್ಟ್‌ 25 ರಂದು ರಿಲೀಸ್‌ ಆಗಲಿದೆ ಎಂದು ಅನೌನ್ಸ್‌ ಮಾಡಿದ್ದಾರೆ.

ಟೀಸರ್‌ ಮೂಲಕ ಸಿನಿಮಾದ ಮೇಲಿನ ಕುತೂಹವನ್ನು ಹೆಚ್ಚಿಸಿದ್ದಾರೆ ಅಂದಹಾಗೆ ಈ ಸಿನಿಮಾವನ್ನು ಬಾಸಿಲ್ ಅಲ್ಚಕ್ಕಲ್ ಅವರು ನಿರ್ದೇಶನ ಮಾಡಿದ್ದಾರೆ. ಸದ್ಯ ರಾಜ್‌ ಬಿ ಶೆಟ್ಟಿ ಅವರು ನಟಿ ರಮ್ಯಾ ಅವರ ಆ್ಯಪರ್‌ ಬಾಕ್ಸ್‌ ನಿರ್ಮಾಣ ಮಾಡುತ್ತಿರುವ ʼಸ್ವಾತಿ ಮುತ್ತಿನ ಮಳೆ ಹನಿಯೇ” , “ರಾಮನ ಅವತಾರ” ಸೇರಿದಂತೆ ಇತರ ಕೆಲ ಪ್ರಾಜೆಕ್ಟ್‌ ನಲ್ಲಿ ಬ್ಯುಸಿಯಾಗಿದ್ದಾರೆ.

 

View this post on Instagram

 

A post shared by Raj B Shetty (@rajbshetty)

suddiyaana