ಸ್ಯಾಂಡಲ್‌ವುಡ್‌, ಮಾಲಿವುಡ್‌ ಆಯ್ತು.. ಈಗ ಬಾಲಿವುಡ್‌ನತ್ತ ಕರಾವಳಿ ಹೈದ – ಬಾಬಿ ಡಿಯೋಲ್ ಜತೆ ಅಬ್ಬರಿಸಲಿದ್ದಾರೆ ನಟ!

ಸ್ಯಾಂಡಲ್‌ವುಡ್‌, ಮಾಲಿವುಡ್‌ ಆಯ್ತು.. ಈಗ ಬಾಲಿವುಡ್‌ನತ್ತ ಕರಾವಳಿ ಹೈದ – ಬಾಬಿ ಡಿಯೋಲ್ ಜತೆ ಅಬ್ಬರಿಸಲಿದ್ದಾರೆ ನಟ!

ರಾಜ್‌ ಬಿ ಶೆಟ್ಟಿ ಸಾಂಡಲ್‌ವುಡ್‌ನ ಪ್ರತಿಭಾನ್ವಿತ ನಟ. ಹಿಟ್‌ ಸಿನಿಮಾ ನೀಡಿದ ಬಳಿಕ ಶೆಟ್ರಿಗೆ ಡಿಮ್ಯಾಂಡ್‌ ಹೆಚ್ಚಾಗಿದೆ. ಸ್ಯಾಂಡಲ್‌ ವುಡ್‌, ಮಾಲಿವುಡ್‌ ಬಳಿಕ ಈಗ ರಾಜ್‌ ಬಿ ಶೆಟ್ಟಿ ಬಾಲಿವುಡ್‌ನತ್ತ ಮುಖ ಮಾಡಿದ್ದಾರೆ. ಹೌದು ರಾಜ್‌ ಬಿ ಶೆಟ್ಟಿಗೆ ಬಾಲಿವುಡ್‌ನಿಂದ ಬುಲಾವ್‌ ಬಂದಿದ್ದು, ಇನ್ನು ಮುಂದೆ ಬಿಟೌನ್‌ ಅಂಗಳದಲ್ಲೂ ಕಾಣಿಸಿಕೊಳ್ಳಲಿದ್ದಾರೆ.

ಇದನ್ನೂ ಓದಿ: ಬೆಳ್ಳಿ ಪದಕದ ನಿರೀಕ್ಷೆಯಲ್ಲಿದ್ದ ಪೋಗಟ್‌ ಗೆ ನಿರಾಸೆ – ವಿನೇಶ್‌ ಸಲ್ಲಿಸಿದ್ದ ಅರ್ಜಿ ವಜಾ

ರಾಜ್‌ ಬಿ ಶೆಟ್ಟಿಯ ಗರುಡಗಮನ ವೃಷಭ ವಾಹನ, ಟೋಬಿ ಸಿನಿಮಾ ಬಾಕ್ಸ್‌ ಆಫೀಸ್ ನಲ್ಲಿ ಅಬ್ಬರಿಸಿ ಬೊಬ್ಬಿಸಿತ್ತು. ಮಳಯಾಳಂ ನಟ ಮುಮ್ಮಟ್ಟಿ ಜೊತೆ ಟರ್ಬೋ ಸಿನಿಮಾದಲ್ಲೂ ರಾಜ್‌ ಬಿ ಶೆಟ್ಟಿ ಕಮಾಲ್‌ ಮಾಡಿದ್ದಾರೆ. ಇದೀಗ  ಬಾಲಿವುಡ್ ಡೈರೆಕ್ಟರ್ ಅನುರಾಗ್ ಕಶ್ಯಪ್ ನಿರ್ದೇಶನದಲ್ಲಿ ನಟಿಸಲು ರಾಜ್‌ರನ್ನು ಕೇಳಲಾಗಿದೆ. ಅವರ ಸಿನಿಮಾದಲ್ಲಿ ಕ್ಯಾಮಿಯೋ ಪಾತ್ರವಾಗಿದ್ರೂ ಅದಕ್ಕೆ ಪ್ರಾಮುಖ್ಯತೆ ಇದ್ದು, ನಟಿಸಲು ರಾಜ್ ಬಿ ಶೆಟ್ಟಿ ಓಕೆ ಎಂದಿದ್ದಾರೆ ಎನ್ನಲಾಗಿದೆ.

‘ಅನಿಮಲ್‌’ ಖ್ಯಾತಿಯ ನಟ ಬಾಬಿ ಡಿಯೋಲ್ ಜೊತೆ ರಾಜ್‌ ಬಿ ಶೆಟ್ಟಿ ಕಾಣಿಸಿಕೊಳ್ತಿದ್ದಾರೆ. ಸದ್ಯದಲ್ಲೇ ಅನುರಾಗ್ ಕಶ್ಯಪ್ ಸಿನಿಮಾ ಟೈಟಲ್ ಮತ್ತು ತಾರಾಬಳಗದ ಬಗ್ಗೆ ಅವರೇ ಅಧಿಕೃತವಾಗಿ ಘೋಷಣೆ ಮಾಡಲಿದ್ದಾರೆ. ಅಂದಹಾಗೆ, ಅರ್ಜುನ್ ಜನ್ಯ ನಿರ್ದೇಶನದ ’45’ ಎಂಬ ಸಿನಿಮಾದಲ್ಲಿ ಶಿವಣ್ಣ ಮತ್ತು ಉಪೇಂದ್ರ ಜೊತೆ ರಾಜ್ ಬಿ ಶೆಟ್ಟಿ ನಟಿಸಿದ್ದಾರೆ. ಸದ್ಯದಲ್ಲೇ ಈ ಸಿನಿಮಾದ ಬಗ್ಗೆ ಮಾಹಿತಿ ಸಿಗಲಿದೆ.

Shwetha M

Leave a Reply

Your email address will not be published. Required fields are marked *