ಅಪಾರ್ಟ್‌ಮೆಂಟ್‌ನಲ್ಲಿ ಸಗಣಿ ವಾಸನೆ.. ದನಗಳು ಕೂಗುವ ಶಬ್ದ! – ಅಪಾರ್ಟ್‌ಮೆಂಟ್‌ನ ಒಳಹೊಕ್ಕ ಅಧಿಕಾರಿಗಳಿಗೆ ಕಾದಿತ್ತು ಶಾಕ್‌

ಅಪಾರ್ಟ್‌ಮೆಂಟ್‌ನಲ್ಲಿ ಸಗಣಿ ವಾಸನೆ.. ದನಗಳು ಕೂಗುವ ಶಬ್ದ! – ಅಪಾರ್ಟ್‌ಮೆಂಟ್‌ನ ಒಳಹೊಕ್ಕ ಅಧಿಕಾರಿಗಳಿಗೆ ಕಾದಿತ್ತು ಶಾಕ್‌

ಟೆರಸ್‌ನಲ್ಲಿ ಕೃಷಿ ಬೆಳೆಯುತ್ತಾರೆ..  ಬಾಲ್ಕನಿಯಲ್ಲಿ ಹೂವಿನ ಗಿಡಗಳನ್ನು ನೆಡುವುದು ಸಾಮಾನ್ಯ. ಇತ್ತೀಚೆಗೆ ಅಪಾರ್ಟ್‌ಮೆಂಟ್‌ನಲ್ಲಿ ಗಾಂಜಾ ಬೆಳೆಯಲಾಗಿದೆ ಎಂದು ಸುದ್ದಿಯಾಗಿದೆ. ಆದರೆ ಎಲ್ಲಾದರೂ ಅಪಾರ್ಟ್ ಮೆಂಟ್ ನ ಬಾಲ್ಕನಿಯಲ್ಲಿ ಹಸುಗಳನ್ನು ಸಾಕುವುದನ್ನು ಕೇಳಿದ್ದೀರಾ? ಹಳ್ಳಿಯಿಂದ ಬಂದ ಕುಟುಂಬವೊಂದು ಅಪಾರ್ಟ್‌ಮೆಂಟ್‌ನ ಬಾಲ್ಕನಿಯಲ್ಲಿ ಹಸುಗಳನ್ನು ಸಾಕಿದ್ದಾರೆ!

ಹಳ್ಳಿಗರು ಏಕಾಏಕಿ ನಗರಕ್ಕೆ ಬಂದಾಗ ಅಲ್ಲಿನ ಜೀವನಕ್ಕೆ ಒಗ್ಗಿಕೊಳ್ಳಲು ಕಷ್ಟವಾಗುತ್ತದೆ. ಇಲ್ಲೂ ಆಗಿದ್ದು ಇದೇ.. ಇಲ್ಲೊಂದು ಕುಟುಂಬ ಏಕಾಏಕಿ ನಗರಕ್ಕೆ ಬಂದಿದೆ. ನಗರಕ್ಕೆ ಸ್ಥಳಾಂತರಗೊಳ್ಳುವ ವೇಳೆ ತಮ್ಮೊಂದಿಗೆ ತಮ್ಮ ಸಾಕುಪ್ರಾಣಿಗಳನ್ನು ಕರೆತಂದಿದ್ದಾರೆ. ಈ ಕುಟುಂಬ ಅಪಾರ್ಟ್‌ಮೆಂಟ್‌ ನ ಬಾಲ್ಕನಿಯಲ್ಲಿ ಹಸುಗಳನ್ನು ಸಾಕುತ್ತಿದ್ದಾರೆ. ಅವರು ತಮ್ಮ ಪ್ಲಾಟ್ ಅಪಾರ್ಟ್ ಮೆಂಟ್ ನಲ್ಲಿ ಒಂದಲ್ಲ ಎರಡಲ್ಲ ಏಳು ಹಸುಗಳನ್ನು ಸಾಕುತ್ತಿದ್ದಾರೆ.

ಇದನ್ನೂ ಓದಿ: ದೇಶಾದ್ಯಂತ ಭಾರಿ ಮಳೆ ಬೆನ್ನಲ್ಲೇ ಅಪ್ಪಳಿಸಲಿದೆ 3 ಸೈಕ್ಲೋನ್! – ಹೈ ಅಲರ್ಟ್ ಘೋಷಿಸಿದ ಐಎಂಡಿ!

ಚೀನಾದ ಸಿಚುವಾನ್ ಪ್ರಾಂತ್ಯದ ರೈತ ಕುಟುಂಬವೊಂದು ತನ್ನ ಅಪಾರ್ಟ್‌ಮೆಂಟ್‌ನ ಐದನೇ ಮಹಡಿಯ ಬಾಲ್ಕನಿಯಲ್ಲಿ ಏಳು ಹಸುಗಳನ್ನು ಸಾಕಿದ್ದಾನೆ. ಇದು ಸಾಕಷ್ಟು ವಿವಾದಕ್ಕೆ ಕಾರಣವಾಗಿದೆ. ಅಪಾರ್ಟ್‌ಮೆಂಟ್‌ನ ಸುತ್ತಲಿನ ಫ್ಲಾಟ್‌ಗಳಲ್ಲಿ ವಾಸಿಸುವ ಜನರು ಹಸುವಿನ ಕಿರುಚಾಟ ಮತ್ತು ಸಗಣಿ ವಾಸನೆಯಿಂದ ಕಂಗಾಲಾಗಿದ್ದಾರೆ. ಈ ಕಟುವಾದ ವಾಸನೆ ಎಲ್ಲಿಂದ ಬರುತ್ತಿದೆ? ಅವರಿಗೆ ಆಶ್ಚರ್ಯವಾಯಿತು. ದಿನದಿಂದ ದಿನಕ್ಕೆ ವಾಸನೆ ಹೆಚ್ಚಾಗುತ್ತಿದ್ದಂತೆ ಸುತ್ತಮುತ್ತಲಿನ ಅಪಾರ್ಟ್‌ಮೆಂಟ್ ನಿವಾಸಿಗಳು ನಗರಸಭೆ ಅಧಿಕಾರಿಗಳಿಗೆ ದೂರು ಸಲ್ಲಿಸಿದ್ದಾರೆ.

ಅಧಿಕಾರಿಗಳು ಅಪಾರ್ಟ್‌ಮೆಂಟ್‌ಗೆ ಬಂದು ಪರಿಶೀಲನೆ ನಡೆಸಿದರು. ಅಸಲಿ ವಿಷಯ ಗೊತ್ತಾಗಿದೆ. ಸಹ ನಿವಾಸಿಗಳಿಗೆ ತೊಂದರೆಯಾಗದಂತೆ ಹಸುಗಳನ್ನು ಅಲ್ಲಿಂದ ಸ್ಥಳಾಂತರಿಸಬೇಕು ಎಂದು ಅಧಿಕಾರಿಗಳು ಹೇಳಿದ್ದಾರೆ. ಇದರಿಂದ ರೈತ ಕುಟುಂಬ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಾವು ಹಳ್ಳಿಗಳಲ್ಲಿ ವಾಸಿಸುತ್ತಿದ್ದೆವು. ಆದರೆ ನಮ್ಮನ್ನು ಇಲ್ಲಿಗೆ ಕರೆತರಲಾಯಿತು. ನಮ್ಮ ಜಾನುವಾರುಗಳೂ ನಮ್ಮೊಂದಿಗೆ ಇರುತ್ತವೆ ಎಂದು ವಾಗ್ದಾಳಿ ನಡೆಸಿದ್ದಾರೆ. ಇಲ್ಲಿ ಕೆಲವರು ಕೋಳಿ ಸಾಕುತ್ತಿದ್ದಾರೆ? ದನ ಸಾಕಿದರೆ ತಪ್ಪೇನು..? ಎಂದು ವಾದಿಸಿದ್ದಾರೆ. ಆದರೆ ಅಪಾರ್ಟ್‌ಮೆಂಟ್‌ಗೆ ಜಾನುವಾರುಗಳನ್ನು ಬಿಡಬಾರದು ಎಂದು ಅಧಿಕಾರಿಗಳು ಸೂಚಿಸಿದ್ದಾರೆ.

ಈ ನಡುವೆ ಗ್ರಾಮೀಣ ಪ್ರದೇಶದಲ್ಲಿ ವಾಸಿಸುತ್ತಿರುವವರನ್ನು ಪುನರ್ವಸತಿ ಹೆಸರಿನಲ್ಲಿ ಇತ್ತೀಚೆಗೆ ಅಪಾರ್ಟ್‌ಮೆಂಟ್‌ಗಳಿಗೆ ಸ್ಥಳಾಂತರಿಸಲಾಗಿದೆ. ಅದುವೇ ಈ ಸಮಸ್ಯೆಗೆ ಕಾರಣವಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಇನ್ನು ಲವರು ಕೋಳಿ ಸಾಕಣೆಯನ್ನೂ ಮಾಡುತ್ತಿದ್ದಾರೆ ಎನ್ನುತ್ತಾರೆ ಅಪಾರ್ಟ್ ಮೆಂಟ್ ನಿವಾಸಿಗಳು.

suddiyaana