ಎಲ್ಲರಂತಲ್ಲ Black Caps! – 2ನೇ ಮ್ಯಾಚ್ ಗೆಲ್ಲಲು ಅಭಿ ಟಾರ್ಗೆಟ್
ರಾಯ್ಪುರದಲ್ಲಿ ಯಾರ ದರ್ಬಾರ್?

ಭಾರತ ಮತ್ತು ನ್ಯೂಜಿಲೆಂಡ್ ನಡುವಿನ 2ನೇ ಟಿ-20ಐ ಪಂದ್ಯಕ್ಕೆ ಕೌಂಟ್ಡೌನ್ ಸ್ಟಾರ್ಟ್ ಆಗಿದೆ. ನಾಗ್ಪುರದಲ್ಲಿ ನಡೆದ ಫಸ್ಟ್ ಮ್ಯಾಚಲ್ಲಿ ಭರ್ಜರಿಯಾಗಿ ಗೆದ್ದಿರೋ ಭಾರತ ಈಗ ರಾಯ್ಪುರದಲ್ಲೂ ದರ್ಬಾರ್ ಮಾಡೋಕೆ ರೆಡಿ ಆಗಿದೆ. ಆದ್ರೆ ಕಿವೀಸ್ ಪಡೆ ಅಷ್ಟು ಈಸಿಯಾಗಿ ಈ ಮ್ಯಾಚ್ ಬಿಟ್ಕೊಡುತ್ತಾ ಅಂದ್ರೆ ಚಾನ್ಸೇ ಇಲ್ಲ. ಟೆಸ್ಟ್ನಲ್ಲಿ ಭಾರತವನ್ನ ಕ್ಲೀನ್ ಸ್ವೀಪ್ ಮಾಡಿ, ಓಡಿಐನಲ್ಲೂ ಸೋಲಿಸಿ ಟಿ-20ಐನಲ್ಲೂ ಶಾಕ್ ಕೊಡೋಕೆ ಕಾಯ್ತಿದ್ದಾರೆ. ಌಂಡ್ ಭಾರತದ ಬ್ಯಾಟಿಂಗ್ ಬ್ರಹ್ಮಾಸ್ತ್ರವಾಗಿರೋ ಅಭಿಷೇಕ್ ಶರ್ಮಾರನ್ನೇ ಟಾರ್ಗೆಟ್ ಮಾಡಿದ್ದಾರೆ.
ಇದನ್ನೂ ಓದಿ : T-20 ವಿಶ್ವಕಪ್ ಆಡಲ್ವಾ ಪಾಕ್? – ಬಾಂಗ್ಲಾ ಬೆನ್ನಿಗೆ ನಿಂತು ಬ್ಲ್ಯಾಕ್ ಮೇಲ್
2ನೇ ಟಿ-20ಐ ಪಂದ್ಯವನ್ನೂ ಗೆದ್ದು ಸರಣಿ ಗೆಲುವಿಗೆ ಹತ್ತಿರವಾಗೋಕೆ ಭಾರತ ಎದುರು ನೋಡ್ತಿದೆ. ಮತ್ತೊಂದ್ಕಡೆ ನ್ಯೂಜಿಲೆಂಡ್ ತಂಡ 2ನೇ ಪಂದ್ಯದಲ್ಲಿ ವಿನ್ ಆಗಿ ಸರಣಿ ಟೈ ಮಾಡಿಕೊಳ್ಳೋಕೆ ಭರ್ಜರಿಯಾಗೇ ರೆಡಿಯಾಗಿದೆ. ಮೊದಲ ಪಂದ್ಯದಲ್ಲಿ 48 ರನ್ಗಳ ಅಂತರದಿಂದ ಗೆದ್ದಿರೋದ್ರಿಂದ ಭಾರತದ ಕಾನ್ಫಿಡೆನ್ಸ್ ಲೆವೆಲ್ ಸ್ವಲ್ಪ ಜಾಸ್ತಿನೇ ಇರುತ್ತೆ. ಹಾಗೇ ಭಾರತದ ಸ್ಟ್ರೆಂಥ್ ಮತ್ತು ವೀಕ್ನೆಸ್ ಬಗ್ಗೆ ಚೆನ್ನಾಗೇ ಗ್ರೌಂಡ್ ವರ್ಕ್ ಮಾಡಿರೋ ನ್ಯೂಜಿಲೆಂಡ್ ಕಂ ಬ್ಯಾಕ್ ಮಾಡೋ ನಿರೀಕ್ಷೆಯಲ್ಲಿದೆ. ಹಾಗೇ ಈ ಪಂದ್ಯಕ್ಕೆ ಭಾರತ ಅದೇ ಕಾನ್ಫಿಡೆನ್ಸ್ನಲ್ಲೇ ಕಣಕ್ಕಿಳಿಯುತ್ತೆ. ಸೇಮ್ ಪ್ಲ್ಯಾನ್ ಎಕ್ಸಿಕ್ಯೂಟ್ ಮಾಡುತ್ತೆ. ಆದ್ರೆ ನ್ಯೂಜಿಲೆಂಡ್ಗೆ ಮಾತ್ರ ಅಭಿಷೇಕ್ ಶರ್ಮಾನೇ ಮೇನ್ ಟಾರ್ಗೆಟ್.
ಅಭಿಷೇಕ್ ಶರ್ಮಾ ವಿಕೆಟ್ ಮೇಲೆ ಕಣ್ಣಿಟ್ಟ ನ್ಯೂಜಿಲೆಂಡ್!
ಟೀಂ ಇಂಡಿಯಾ ಬ್ಯಾಟಿಂಗ್ ಬ್ರಹ್ಮಾಸ್ತ್ರವೇ ಅಭಿಷೇಕ್ ಶರ್ಮಾ. ಅವ್ರು ಕ್ರೀಸ್ನಲ್ಲಿ ಇರೋವರ್ಗೂ ರನ್ರೇಟ್ ನೆಕ್ಸ್ ಲೆವೆಲ್ನಲ್ಲಿರುತ್ತೆ. ಌಂಡ್ ಅವ್ರು ಫೇಸ್ ಮಾಡೋ ಪ್ರತೀ 9 ಬಾಲ್ಗಳಿಗಲ್ಲಿ 1 ಸಿಕ್ಸ್ ಬಾರಿಸ್ತಾರೆ ಅಂದ್ರೆ ಅವ್ರ ಸ್ಟ್ರೆಂಥ್ ಏನು ಅನ್ನೋದು ಎಲ್ರಿಗೂ ಗೊತ್ತಾಗುತ್ತೆ. ಸಿಕ್ಸರ್ ಕಿಂಗ್ ಅಂತಾನೇ ಕರೆಸಿಕೊಳ್ತಿರೋ ಅಭಿಷೇಕ್ 2024ರ ಟಿ-20 ವಿಶ್ವಕಪ್ ಆದ್ಮೇಲೆ ಇಂಟರ್ ನ್ಯಾಷನಲ್ ಕ್ರಿಕೆಟ್ನಲ್ಲಿ ಅತೀ ಹೆಚ್ಚು ಸಿಕ್ಸರ್ ಬಾರಿಸಿದ ಬ್ಯಾಟರ್ ಆಗಿದ್ದಾರೆ. 33 ಇನ್ನಿಂಗ್ಸ್ ಗಳಿಂದ 81 ಸಿಕ್ಸರ್ಸ್ ಬಂದಿದೆ. ಮೊದಲ ಮ್ಯಾಚಲ್ಲೂ 238 ರನ್ಸ್ ಬರೋಕೆ ಕಾರಣ ಕೂಡ ಅಭಿಷೇಕ್ ಸ್ಫೋಟಕ ಬ್ಯಾಟಿಂಗ್. ಅವ್ರು ಕ್ರೀಸ್ನಲ್ಲಿ ಇರೋದವರೆಗೂ ರನ್ ರೇಟ್ ಏರ್ತಾನೇ ಇರುತ್ತೆ. ಒಂದ್ಸಲ ಅಭಿಷೇಕ್ ವಿಕೆಟ್ ಬಿದ್ರೆ ಆ ನಂತ್ರ ಬರೋ ಬ್ಯಾಟರ್ಗಳ ಸ್ಟ್ರೈಕ್ರೇಟ್ ಕೂಡ ಝರ್ ಅಂತಾ ಇಳ್ದೋಗಿದೆ. ಕಳೆದ ಒಂದೂವರೆ ವರ್ಷಗಳ ರೆಕಾರ್ಡ್ಸ್ ನೋಡಿದ್ರೇನೇ ಗೊತ್ತಾಗುತ್ತೆ. ಅಭಿಷೇಕ್ ಇರೋವರ್ಗೂ ಭಾರತ ತಂಡ 150, 160 ಪ್ಲಸ್ ಸ್ಟ್ರೈಕ್ನಲ್ಲಿ ಬ್ಯಾಟ್ ಬೀಸಿದೆ. ಬಟ್ ಅಭಿ ಔಟಾದ್ರೆ 120ಪ್ಲಸ್ಗೆ ಇಳಿದಿದೆ. ಹೀಗಾಗಿ ಫಸ್ಟ್ ಅಭಿಷೇಕ್ ಶರ್ಮಾ ಅವ್ರ ವಿಕೆಟ್ ತೆಗೆಯೋಕೆ ಟಾರ್ಗೆಟ್ ಇಟ್ಕೊಂಡಿದ್ದಾರೆ. ಅವ್ರ ವೀಕ್ನೆಸ್ ಏನು ಎಲ್ಲಿ ಬಾಲ್ ಹಾಕಿದ್ರೆ ಬಿಗ್ ಹಿಟ್ ಬಾರಿಸಿದ್ರೆ ಎಲ್ಲಿ ಹಾಕಿದ್ರೆ ಸ್ಟ್ರಗಲ್ ಪಡ್ತಾರೆ ಌಂಡ್ ಯಾವ ಬಾಲ್ಗೆ ವಿಕೆಟ್ ಕೊಟ್ಟಿದ್ದಾರೆ ಅನ್ನೋದನ್ನೂ ಅನಾಲಿಸಿಸ್ ಮಾಡಿದ್ದಾರೆ. ಕಳೆದ ಏಕದಿನ ಸರಣಿಯಲ್ಲೂ ರೋಹಿತ್ ಶರ್ಮಾ ವಿಚಾರದಲ್ಲೂ ಗ್ರೌಂಡ್ ವರ್ಕ್ ಮಾಡಿಯೇ ವಿಕೆಟ್ ತೆಗೆದಿದ್ದಾಗಿ ನಾಯಕ ಮೈಕೆಲ್ ಬ್ರೇಸ್ವೆಲ್ ಹೇಳಿಕೊಂಡಿದ್ರು.
ಟೆಸ್ಟ್ ಮತ್ತು ಏಕದಿನದಲ್ಲೂ ಭಾರತವನ್ನ ಸೋಲಿಸಿರುವ ನ್ಯೂಜಿಲೆಂಡ್!
ಇತ್ತೀಚಿನ ಸರಣಿಗಳಲ್ಲಿ ನ್ಯೂಜಿಲೆಂಡ್ ತಂಡ ಭಾರತಕ್ಕೆ ಅಕ್ಷರಶಃ ವಿಲನ್ ಆಗಿದೆ. 2024ರ ಕೊನೆಯಲ್ಲಿ ಟೆಸ್ಟ್ ಮಾದರಿಯಲ್ಲಿ ಮೂರಕ್ಕೆ ಮೂರೂ ಪಂದ್ಯಗಳನ್ನ ಗೆದ್ದು ಕ್ಲೀನ್ ಸ್ವೀಪ್ ಮಾಡಿತ್ತು. ಹಾಗೇ ಇತ್ತೀಚೆಗೆ ಭಾರತದಲ್ಲೇ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಭಾರತವನ್ನ 2-1ರ ಅಂತರದಿಂದ ಸೋಲಿಸಿ ಏಕದಿನ ಸರಣಿಯನ್ನ ಗೆದ್ದು ಬೀಗಿತ್ತು. ಇತಿಹಾಸದಲ್ಲೇ ಮೊದಲ ಬಾರಿಗೆ ಸಾಧಿಸಿದ್ದ ಗೆಲುವು ಇದು. ಈಗ ಟಿ-20ಐನಲ್ಲೂ ಭಾರತಕ್ಕೆ ಸೋಲಿನ ಶಾಕ್ ಕೊಡೋಕೆ ಎದುರು ನೋಡ್ತಿದ್ದಾರೆ. ಹೀಗಾಗಿ ಬ್ಲ್ಯಾಕ್ ಕ್ಯಾಪ್ಸ್ಗಳನ್ನ ಎಲ್ಲರಂತೆ ಪರಿಗಣಿಸೋಕೆ ಸಾದ್ಯ ಇಲ್ಲ. ಫಸ್ಟ್ ಮ್ಯಾಚ್ ಗೆದ್ದಿದ್ರೂ ಎಲ್ಲೂ ಕೂಡ ಓವರ್ ಕಾನ್ಫಿಡೆನ್ಸ್ ಇಲ್ಲದಂತೆ ಭಾರತ ಕಣಕ್ಕಿಳಿಯಬೇಕು. 2ನೇ ಪಂದ್ಯವನ್ನೂ ಗೆದ್ದು ಸರಣಿ ವಶಕ್ಕೆ ಹತ್ತಿರವಾಗ್ಬೇಕು. ಇನ್ನು ಪಂದ್ಯ ನಡೆಯಲಿರುವ ರಾಯ್‌ಪುರದ ಮೈದಾನದಲ್ಲಿ ಭಾರತ ತಂಡ ಕೇವಲ ಒಂದು ಟಿ20 ಪಂದ್ಯವನ್ನು ಆಡಿದ್ದು, 2023 ರಲ್ಲಿ ಆಸ್ಟ್ರೇಲಿಯಾವನ್ನು 20 ರನ್‌ಗಳಿಂದ ಸೋಲಿಸಿತ್ತು. ಪಿಚ್ ಸ್ಪಿನ್ನರ್‌ಗಳಿಗೆ ಅನುಕೂಲಕರವಾಗಿತ್ತು. ಹೀಗಾಗಿ ಈ ಪಂದ್ಯ ಕೂಡ ಸಾಕಷ್ಟು ಕುತೂಹಲ ಕೆರಳಿಸಿದೆ.

ನೋಡಿರಿ

