ಜೂ. 1 ರಿಂದಲೇ ಮಳೆಗಾಲ ಶುರು! – ಹವಾಮಾನ ಇಲಾಖೆ ಹೇಳಿದ್ದೇನು?

ಜೂ. 1 ರಿಂದಲೇ ಮಳೆಗಾಲ ಶುರು! – ಹವಾಮಾನ ಇಲಾಖೆ ಹೇಳಿದ್ದೇನು?

ನವದೆಹಲಿ: ಕರ್ನಾಟಕ ಸೇರಿದಂತೆ ದೇಶದ ಹಲವು ರಾಜ್ಯಗಳಲ್ಲಿ ಪ್ರಸಕ್ತ ಸಾಲಿನ ಮುಂಗಾರು ಮಳೆ ಸ್ವಲ್ಪ ವಿಳಂಬವಾಗಿ ಆರಂಭವಾಗಲಿದೆ ಎಂದು ಹೇಳಿದ್ದ ಭಾರತೀಯ ಹವಾಮಾನ ಇಲಾಖೆ ಈಗ ಮತ್ತೊಂದು ಮುನ್ನೆಚ್ಚರಿಕೆಯನ್ನು ನೀಡಿದೆ.

ಇದನ್ನೂ ಓದಿ:ಮೋಚಾ ಚಂಡಮಾರುತ ಎಫೆಕ್ಟ್‌ – ರಾಜ್ಯದಲಿ ದೂರವಾಯ್ತು ಕಡಿಮೆ ಮಳೆಯ ಆತಂಕ! 

ಮುಂಗಾರು ಮಳೆಗೆ ಕಾರಣವಾಗುವ ನೈಋತ್ಯ ಮಾರುತಗಳು ಬಂಗಾಲ ಕೊಲ್ಲಿಯ ಆಗ್ನೇಯ ಭಾಗ, ದಕ್ಷಿಣ ಅಂಡಮಾನ್‌ ಸಮುದ್ರದ ಭಾಗದಲ್ಲಿ ಏಳಲು ಶುರುವಾಗಿವೆ. ಇದರಿಂದಾಗಿ ನಿರೀಕ್ಷೆಯಂತೆಯೇ ಜೂ.1ರಿಂದಲೇ ಮಳೆಗಾಲ ಶುರುವಾಗುವ ಸಾಧ್ಯತೆ ಇದೆ. ಅದಕ್ಕೆ ಪೂರಕವಾಗಿ ಮುಂದಿನ ಐದು ದಿನಗಳಲ್ಲಿ ಕೇರಳದಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಮುಂದಿನ ಮೂರರಿಂದ ನಾಲ್ಕು ದಿನಗಳ ಒಳಗೆ ಮುಂಗಾರು ಮಳೆಯ ಸೂಚನೆಗಳು ಮತ್ತಷ್ಟು ಪ್ರಬಲವಾಗುವ ಸಾಧ್ಯತೆಗಳು ಇವೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

ವಾಡಿಕೆಯಂತೆ ದೇವರ ನಾಡು ಕೇರಳ ರಾಜ್ಯಕ್ಕೆ ಮೊದಲು ಮುಂಗಾರು ಪ್ರವೇಶವಾಗುತ್ತದೆ. ಜೂನ್‌ ಮೊದಲ ವಾರದಲ್ಲಿ ಕರ್ನಾಟಕ ಸೇರಿದಂತೆ ದೇಶದ ಹಲವು ಭಾಗಗಳಲ್ಲಿ ಮುಂಗಾರು ಆರಂಭವಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಕಳೆದ ವರ್ಷ ಮೇ 29ರಂದು ಕೇರಳಕ್ಕೆ ಮುಂಗಾರು ಪ್ರವೇಶ ಮಾಡಿತ್ತು. 2021ರಲ್ಲಿ ಜೂ.3 ರಂದು ಮಳೆಗಾಲ ಶುರುವಾಗಿತ್ತು. 2020ರಲ್ಲಿ ಜೂ.1 ರಂದು ಮಳೆಗಾಲ ಆರಂಭವಾಗಿತ್ತು. ಇನ್ನು 2019ರಲ್ಲಿ  ಜೂ.8, 2018ರಲ್ಲಿ ಮೇ 29ರಂದು ಕೇರಳಕ್ಕೆ ಮುಂಗಾರು ಪ್ರವೇಶಿಸಿತ್ತು ಎಂದು ಐಎಂಡಿ ಹೇಳಿದೆ.

suddiyaana