ಪಾಕಿಸ್ತಾನಕ್ಕೆ ವರುಣನ ಶಾಕ್‌ –  ನಿರಂತರ ಮಳೆ.. ಪ್ರವಾಹಕ್ಕೆ ನಲುಗಿ ಹೋದ ಪಾಕ್

ಪಾಕಿಸ್ತಾನಕ್ಕೆ ವರುಣನ ಶಾಕ್‌ –  ನಿರಂತರ ಮಳೆ.. ಪ್ರವಾಹಕ್ಕೆ ನಲುಗಿ ಹೋದ ಪಾಕ್

ಪಾಪಿ ಪಾಕಿಸ್ತಾನಕ್ಕೆ ಕೇಡುಗಾಲ ಶುರುವಾಗಿದೆ. ಆರ್ಥಿಕವಾಗಿ ಪಾತಾಳಕ್ಕೆ ಬಿದ್ದಿರುವ ಪಾಕ್‌ಗೆ ಈಗ ಮಳೆರಾಯ ಕೂಡ ಶಾಕ್‌ ಕೊಟ್ಟಿದ್ದಾನೆ. ಕಳೆದ ನಾಲ್ಕು ದಿನಗಳಿಂದ ಭಾರಿ ಮಳೆ ಸುರಿಯುತ್ತಿದ್ದು, ನೂರಾರು ಮಂದಿ ಪ್ರಾಣ ಕಳೆದುಕೊಂಡಿದೆ.

ಇದನ್ನೂ ಓದಿ: ಜು. 23 ರಿಂದ ಯುಕೆ- ಮಾಲ್ಡೀವ್ಸ್‌ಗೆ ಪ್ರಧಾನಿ ಮೋದಿ ಪ್ರವಾಸ – ಭಾರತದ ರಾಜತಾಂತ್ರಿಕ ಸಂಬಂಧಗಳನ್ನು ಬಲಪಡಿಸುವ ಗುರಿ

ಪಾಪಿ ಪಾಕಿಸ್ತಾನ ಭೀಕರ ಪ್ರವಾಹಕ್ಕೆ ಸಾಕ್ಷಿಯಾಗಿದೆ. ಕಳೆದ 4 ದಿನಗಳಿಂದ ಪಂಜಾಬ್ ಪ್ರಾಂತ್ಯದಲ್ಲಿ ಭಾರಿ ಮಳೆ ಸುರಿಯುತ್ತಿದೆ. ಕಳೆದ ನಾಲ್ಕು ದಿನಗಳಲ್ಲಿ 150ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಭಾರಿ ಮಳೆಯಿಂದಾಗಿ ಸಾಕಷ್ಟು ಅವಾಂತರ ಸೃಷ್ಟಿಯಾಗಿದ್ದು, ಅಲ್ಲಿನ ಸರ್ಕಾರ ‘ಮಳೆ ತುರ್ತುಪರಿಸ್ಥಿತಿ’ ಎಂದು ಘೋಷಿಸಿದೆ ಎಂದು ವರದಿಯಾಗಿದೆ.

ಪಂಜಾಬಿನ ಮುಖ್ಯಮಂತ್ರಿ ಮರಿಯಮ್ ನವಾಜ್ ಅವರು ತುರ್ತು ಪರಿಸ್ಥಿತಿ ಘೋಷಿಸಿದ್ದಾರೆ. ರಾವಲ್ಪಿಂಡಿ ಸೇರಿದಂತೆ ಹಲವು ಪ್ರದೇಶಗಳಲ್ಲಿ ಎಚ್ಚರಿಕೆ ನೀಡಲಾಗಿದೆ. ಎಲ್ಲಾ ಇಲಾಖೆಗಳು ಸನ್ನದ್ಧವಾಗಿವೆ. ಜಿಲ್ಲಾಡಳಿತ, ಪೊಲೀಸ್ ಮತ್ತು ರಕ್ಷಣಾ 1122 ಕಾರ್ಯನಿರ್ವಹಿಸುತ್ತಿವೆ. ಪ್ರವಾಹ ಪರಿಸ್ಥಿತಿಯನ್ನು ಎದುರಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಆಸ್ಪತ್ರೆಗಳನ್ನು ಸನ್ನದ್ಧ ಸ್ಥಿತಿಯಲ್ಲಿ ಇರಿಸಲಾಗಿದೆ. ಕ್ಷೇತ್ರ ಆಸ್ಪತ್ರೆಗಳು ಮತ್ತು ವೈದ್ಯಕೀಯ ಸೌಲಭ್ಯಗಳು ಸಿದ್ಧವಾಗಿವೆ. ಕುಸಿಯುತ್ತಿರುವ ಕಟ್ಟಡಗಳು, ಪ್ರವಾಹ ಮತ್ತು ವಿದ್ಯುತ್ ಅವಘಡಗಳಿಂದ ಹೆಚ್ಚಿನ ಸಾವುಗಳು ಸಂಭವಿಸಿವೆ. ರಕ್ಷಣಾ ಕಾರ್ಯ ಭರದಿಂದ ಸಾಗಿದೆ. ಪ್ರವಾಹದಿಂದಾಗಿ ಪಂಜಾಬ್‌ನ ಹಲವು ಎಕ್ಸ್‌ಪ್ರೆಸ್‌ವೇಗಳಲ್ಲಿ ಸಂಚಾರ ನಿರ್ಬಂಧಿಸಲಾಗಿದೆ. ಹಲವಾರು ವಿಮಾನ ಹಾರಾಟ ರದ್ದುಪಡಿಸಲಾಗಿದೆ. ಹಲವು ಪ್ರದೇಶಗಳಲ್ಲಿ ತುರ್ತು ಪರಿಸ್ಥಿತಿಯನ್ನು ಘೋಷಿಸಿದ್ದಾರೆ ಎಂದು ಎಕ್ಸ್‌ನಲ್ಲಿ ಮರಿಯಮ್‌ ಪೋಸ್ಟ್ ಹಂಚಿಕೊಂಡಿದ್ದಾರೆ.

Shwetha M