ಆಪರೇಷನ್‌ ಟ್ರಾಶಿ-1 ಸಕ್ಸಸ್ – 7 ಪಾಕ್ ಉಗ್ರರು ಫಿನಿಶ್

ಆಪರೇಷನ್‌ ಟ್ರಾಶಿ-1 ಸಕ್ಸಸ್ – 7 ಪಾಕ್ ಉಗ್ರರು ಫಿನಿಶ್

 ಕಳೆದ ವರ್ಷ ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯ ಬಳಿಕ ಉಗ್ರವಾದವನ್ನು ಬೇರು ಸಮೇತ ಕಿತ್ತು ಹಾಕಲು ಪಣ ತೊಟ್ಟಿರುವ ಕೇಂದ್ರ ಸರ್ಕಾರ  ಆಪರೇಷನ್‌ ಟ್ರಾಶಿ-1    ಕಾರ್ಯಾಚರಣೆ ನಡೆಸುತ್ತಿದ್ದು, ನಮ್ಮ ಭದ್ರತಾ ಪಡೆಗಳು ಮೇಲುಗೈ ಸಾಧಿಸಿವೆ.  ಜಮ್ಮು ಕಾಶ್ಮೀರದಲ್ಲಿ 7 ಉಗ್ರರನ್ನು ಹೊಡೆದುರುಳಿಸಲಾಗಿದೆ. ಭಾರತೀಯ ಸೇನೆ, ಪೊಲೀಸ್‌ ವಿಶೇಷ ಪಡೆ ಮತ್ತು ಕೇಂದ್ರ ಮೀಸಲು ಪೊಲೀಸ್ ಪಡೆ   ಜಂಟಿಯಾಗಿ ಜಮ್ಮು ಮತ್ತು ಕಾಶ್ಮೀರದಾದ್ಯಂತ  ಕಾರ್ಯಾಚರಣೆ ನಡೆಸಿದೆ.   ಕಾಡು, ಬೆಟ್ಟ, ಗುಡ್ಡಗಳಲ್ಲಿ ಮಳೆ, ಚಳಿ, ಗಾಳಿ ಎನ್ನದೆ ಭದ್ರತಾ ಪಡೆಗಳು ನಿರಂತರವಾಗಿ ಕಾರ್ಯ ನಿರ್ವಹಿಸುತ್ತಿದ್ದು,  8 ಪಾಕ್ ಉಗ್ರರ ಕಥೆಯನ್ನ ಭಾರತೀಯ ಸೇನೆ ಮುಗಿಸಿದೆ.

ಇದನ್ನೂ ಓದಿ: 19 ವರ್ಷ ಅಂತರದ ಗೆಳೆಯನ ಜೊತೆ ಡೇಟಿಂಗ್ – ಮಲೈಕಾ ಅರೋರಾ ಹೊಸ ಬಾಯ್‌ಫ್ರೆಂಡ್ ಯಾರು?

326 ದಿನಗಳ ಈ ಕಾರ್ಯಾಚರಣೆಯಲ್ಲಿ ಈಗಾಗಲೇ ಜಮ್ಮು ಮತ್ತು ಕಾಶ್ಮೀರದ ಕಿಶ್‌ತ್ವಾರ್‌ನಲ್ಲಿ 7 ಉಗ್ರರನ್ನು ಹೊಡೆದುರುಳಿಸಲಾಗಿದೆ. ಪಾಕಿಸ್ತಾನದ ಸೇನೆಯಿಂದ ತರಬೇತಿ ಪಡೆದ ಉಗ್ರರು ಕಡಿದಾದ ಬೆಟ್ಟ ಮತ್ತು ದಟ್ಟ ಅರಣ್ಯವನ್ನು ಅಡಗುತಾಣವನ್ನಾಗಿಸಿಕೊಂಡಿದ್ದಾರೆ. ಹೀಗಾಗಿ ಸುಮಾರು 1 ವರ್ಷದಿಂದ ಭದ್ರತಾ ಪಡೆ ಬೆಟ್ಟದ ತಪ್ಪಲಿನಲ್ಲಿ ಬೀಡು ಬಿಟ್ಟಿದೆ. ಈ ಪ್ರದೇಶದಲ್ಲಿ ಎನ್‌ಕೌಂಟರ್‌, ಗುಂಡಿನ ಮೊರೆತ ಆಗಾಗ ಕೇಳಿ ಬರುತ್ತಲೇ ಇದೆ. ಉಗ್ರರು ನಮ್ಮ ಸೇನೆಯ ಮೇಲೆ ದಾಳಿ ನಡೆಸಿ ಮತ್ತೆ ದಟ್ಟ ಅರಣ್ಯದಲ್ಲಿ ಬಟ್ಟಿಟ್ಟುಕೊಳ್ಳುತ್ತಿದ್ದಾರೆ. ಸಮರ್ಪಕ ರಸ್ತೆ ಬಿಡಿ, ಓಡಾಡಲು ದಾರಿಯೂ ಇಲ್ಲದಿರುವುದು ಕಾರ್ಯಾಚರಣೆಗೆ ಬಹುದೊಡ್ಡ ಸವಾಲು ಎನಿಸಿಕೊಂಡಿದೆ.

Kishor KV