ಸಿಲಿಕಾನ್ ಸಿಟಿಯಲ್ಲಿ ಮಳೆ ಜೊತೆಗೆ ಆರೋಗ್ಯಕ್ಕೂ ಎಚ್ಚರಿಕೆ! – ಬೆಂಗಳೂರನ್ನು ಕಾಡಲಿದ್ಯಾ ವೈರಲ್ ಫಿವರ್?
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕಳೆದೊಂದು ವಾರದಿಂದ ನಿರಂತರವಾಗಿ ಮಳೆ ಸುರಿಯುತ್ತಿದೆ.. ಭಾರಿ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತವಾಗಿದೆ.. ಇದೀಗ ಮಳೆಯ ಜೊತೆ ಜೊತೆಗೆ ರೋಗಗಳ ಎಂಟ್ರಿ ಆಗಿದೆ ಆಗುತ್ತಿದ್ದು, ಜನರು ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕಾಗಿದೆ.
ಇದನ್ನೂ ಓದಿ: ಕಬಡ್ಡಿಯಲ್ಲೂ ಪಸ್ಟ್ ಮ್ಯಾಚ್ ದೇವ್ರಿಗೆ! – ಪವನ್ FIRE.. ಪರ್ದೀಪ್ FAIL
ಮಹಾನಗರಿ ಬೆಂಗಳೂರಿನಲ್ಲಿ ಬೆಳಗ್ಗೆ ಮೋಡ ಕವಿದ ವಾತವರಣ ಇದ್ರೆ, ಮಧ್ಯಾಹ್ನದ ಹೊತ್ತಿಗೆ ಭಾರಿ ಮಳೆ, ಸಂಜೆ ವೇಳೆ ಚಳಿಯ ವಾತಾವರಣ ಇರುತ್ತದೆ. ಇದೀಗ ವಾತಾವರಣ ಬದಲಾವಣೆಯಿಂದಾಗಿ ಜನರ ಆರೋಗ್ಯ ಕೂಡ ಹದಗೆಡುತ್ತಿದೆ.
ಹೌದು, ಮಳೆ ಎಫೆಕ್ಟ್‌ನಿಂದ ಜನರಿಗೆ ಕಾಯಿಲೆಗಳು ವಕ್ಕರಿಸುವ ಆತಂಕ ಇದೆ. ವೈರಲ್ ಫೀವರ್ ಹರಡುವ ಮತ್ತು ಏರಿಕೆಯಾಗುವ ಎಚ್ಚರಿಕೆಯನ್ನು ವೈದ್ಯರು ನೀಡಿದ್ದಾರೆ. ನಗರದಲ್ಲಿ ಕಳೆದ ಒಂದು ವಾರದಿಂದ ಬಿಟ್ಟು ಬಿಟ್ಟು ಮಳೆ ಸುರಿಯುತ್ತಿದೆ. ಸೊಳ್ಳೆ ಕಾಟ ಶುರುವಾಗಿ ಕೆಮ್ಮು, ನೆಗಡಿ, ವೈರಲ್ ಫೀವರ್ ಜಾಸ್ತಿ ಆಗುವ ಆತಂಕ ಇದೆ. ನಗರದಲ್ಲಿ ಶೀತ, ಜ್ವರದ ಪ್ರಕರಣಗಳು ಕೂಡ ಹೆಚ್ಚಳಗೊಂಡಿದೆ. ಕುಡಿಯುವ ನೀರಿಗೆ ಕಲುಷಿತ ನೀರು ಮಿಕ್ಸ್ ಆಗಿ ಮಕ್ಕಳಲ್ಲಿ ಆರೋಗ್ಯ ಸಮಸ್ಯೆ ಜಾಸ್ತಿ ಆಗುವ ಆತಂಕ ಇದೆ. ಹೀಗಾಗಿ ಆರೋಗ್ಯದ ಬಗ್ಗೆ ಎಚ್ಚರ ವಹಿಸುವಂತೆ ವೈದ್ಯರು ಸಲಹೆ ನೀಡಿದ್ದಾರೆ.