ಮಳೆ ಅಲರ್ಟ್.. 2ನೇ ಮ್ಯಾಚ್ ರದ್ದು? – 5 ಪಂದ್ಯಗಳ T-20I ಸರಣಿಗೇ ಟ್ವಿಸ್ಟ್
ರಾಣಾಗಾಗಿ ಅರ್ಶದೀಪ್ ಬಲಿಪಶುವಾದ್ರಾ?

ಮಳೆ ಅಲರ್ಟ್.. 2ನೇ ಮ್ಯಾಚ್ ರದ್ದು? – 5 ಪಂದ್ಯಗಳ T-20I ಸರಣಿಗೇ ಟ್ವಿಸ್ಟ್ರಾಣಾಗಾಗಿ ಅರ್ಶದೀಪ್ ಬಲಿಪಶುವಾದ್ರಾ?

ಭಾರತ ವರ್ಸಸ್ ಆಸ್ಟ್ರೇಲಿಯಾ ನಡುವಿನ ಫಸ್ಟ್ ಟಿ-20ಐ ಮ್ಯಾಚ್ ಮಳೆಯಿಂದಾಗಿ ವಾಶ್ ಔಟ್ ಆಯ್ತು. ಈಗ ಎರಡನೇ ಪಂದ್ಯ ನಾಳೆ ಅಂದ್ರೆ ಶುಕ್ರವಾರ ಮೆಲ್ಬೊರ್ನ್ ಕ್ರಿಕೆಟ್ ಮೈದಾನದಲ್ಲಿ ಫಿಕ್ಸ್ ಆಗಿದೆ. ಆದ್ರೆ ವೆದರ್ ರಿಪೋರ್ಟ್ ನೋಡ್ತಿದ್ರೆ ಈ ಮ್ಯಾಚ್ ಕೂಡ ಕಂಪ್ಲೀಟ್ ಆಗೋದು ಡೌಟ್ ಇದೆ. ಇಲ್ಲೂ ಕೂಡ ರೇನ್ ಅಲರ್ಟ್ ಇದೆ. ಹಾಗೇನಾದ್ರೂ ಈ ಮ್ಯಾಚ್ ಕ್ಯಾನ್ಸಲ್ ಆದ್ರೆ ಇಡೀ ಸರಣಿಯೇ ಟ್ವಿಸ್ಟ್ ಪಡ್ಕೊಳ್ಳುತ್ತೆ.  ಆಸ್ಟ್ರೇಲಿಯಾ ವಿರುದ್ಧ ಏಕದಿನ ಸರಣಿ ಸೋತಿರೋ ಭಾರತ ಸದ್ಯ ಐದು ಪಂದ್ಯಗಳ ಟಿ-20ಐ ಸರಣಿ ಆಡ್ತಿದೆ. ಮೊದಲ ಪಂದ್ಯ ಮಳೆ ಕಾರಣಕ್ಕೆ ರದ್ದಾಗಿರೋದ್ರಿಂದ ಉಳಿದ ನಾಲ್ಕು ಪಂದ್ಯಗಳೇ ಗೇಮ್ ಡಿಸೈಡರ್ ಆಗುತ್ತೆ. ಯಾವುದೇ ತಂಡ ಸರಣಿ ಕೈವಶ ಮಾಡಿಕೊಳ್ಬೇಕು ಅಂದ್ರೆ ಮೂರು ಮ್ಯಾಚಂತೂ ಗೆಲ್ಲೇಬೇಕು. ಅಥವಾ ತಲಾ ಎರಡೆರಡು ಗೆದ್ರು ಅಂದ್ರೆ ಸರಣಿ ಸಮಬಲ ಆಗುತ್ತೆ. ಸೋ ನಾಳಿನ ಮ್ಯಾಚಲ್ಲಿ ಗೆದ್ದು ಸರಣಿ ಲೀಡ್ ಪಡೆಯೋಕೆ ಎರಡೂ ಟೀಮ್​ಗಳು ಲೆಕ್ಕಾಚಾರದಲ್ಲಿವೆ. ಆದ್ರೆ ನಾಳಿನ ಪಂದ್ಯಕ್ಕೂ ಮಳೆ ರಗಳೆಯಾಗೋ ಮುನ್ಸೂಚನೆ ಇದೆ.

ಇದನ್ನೂ ಓದಿ : ಉಗ್ರರೊಂದಿಗಿನ ಘರ್ಷಣೆಯಲ್ಲಿ ಪಾಕಿಸ್ತಾನಿ ಸೇನಾ ಕ್ಯಾಪ್ಟನ್  ಸೇರಿ 7 ಸೈನಿಕರು ಸಾ*ವು

ಮೆಲ್ಬೊರ್ನ್ ಪಂದ್ಯಕ್ಕೂ ಮಳೆ ಭೀತಿ!

ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಎರಡನೇ ಪಂದ್ಯದ ವೇಳೆಯೂ ಮಳೆಯಾಗೋ ಮುನ್ಸೂಚನೆ ಇದೆ.  ಅಕ್ಯೂವೆದರ್‌ನ ಹವಾಮಾನ ಮುನ್ಸೂಚನೆ ವರದಿಯ ಪ್ರಕಾರ ಶುಕ್ರವಾರ ಮೆಲ್ಬೋರ್ನ್‌ನಲ್ಲಿ ಒಟ್ಟಾರೆಯಾಗಿ ಮಳೆಯಾಗುವ ಸಾಧ್ಯತೆ 93% ಆಗಿದೆ. ಹೀಗಿದ್ರೂ ಮೆಲ್ಬೋರ್ನ್‌ನಲ್ಲಿ ಆ ದಿನ ಸಂಜೆ ಮಳೆಯಾಗುವ ಸಾಧ್ಯತೆ ಶೇಕಡಾ 25ಕ್ಕೆ ಇಳಿಯುತ್ತೆ. ಸೋ ಇದು ಭಾರತ ಮತ್ತು ಆಸ್ಟ್ರೇಲಿಯಾ ಟಿ20 ಪಂದ್ಯ ನಡೆಯುವ ಸಮಯ. ಹೀಗಾಗಿ ಪಂದ್ಯದ ವೇಳೆಗೆ ಮಳೆ ಬಿಡುವು ಕೊಡ್ಬೋದು. ಅಥವಾ ಮಳೆಯನ್ನೂ ನಿರೀಕ್ಷೆ ಮಾಡ್ಬೋದು. ಬಟ್ ಫೈನಲ್ಲಾಗಿ ಹೀಗೇ ಅಂತಾ ಯಾವುದನ್ನೂ ಜಡ್ಜ್ ಮಾಡೋಕೆ ಆಗಲ್ಲ. ಹೀಗಾಗಿ ನಾಳಿನ ಮ್ಯಾಚ್ ನಡೆಯುತ್ತೋ ಇಲ್ವೋ ಅನ್ನೋ ಡೌಟ್ ಅಂತೂ ಇದೆ. ಮತ್ತೊಂದೆಡೆ ಮೆಲ್ಬೋರ್ನ್​ನಲ್ಲಿ ಭಾರತದ ರೆಕಾರ್ಡ್ಸ್ ಕೂಡ ಅಷ್ಟಕ್ಕಷ್ಟೇ ಇದೆ.

14 ಪಂದ್ಯಗಳಲ್ಲಿ ಭಾರತ ಗೆದ್ದಿರೋದೇ 4 ಮ್ಯಾಚ್!

ಇನ್ನು ಎರಡನೇ ಪಂದ್ಯ ನಡೆಯಲಿಯೋ ಗ್ರೌಂಡ್​ನಲ್ಲಿ ಮೆನ್ ಇನ್ ಬ್ಲ್ಯೂ ತಂಡ ಟೋಟಲ್ಲಾಗಿ ಅಂದ್ರೆ ಎಲ್ಲಾ ಫಾರ್ಮೆಟ್​ಗಳಲ್ಲೂ ಸೇರಿ 14 ಪಂದ್ಯಗಳನ್ನ ಆಡಿದ್ದಾರೆ. ಇದ್ರಲ್ಲಿ ಕೇವಲ ನಾಲ್ಕು ಬಾರಿ ಮಾತ್ರ ಗೆದ್ದಿದ್ದಾರೆ. ಆಸ್ಟ್ರೇಲಿಯಾ ಏಳು ಬಾರಿ ಗೆದ್ದಿದ್ದು, ಮೂರು ಪಂದ್ಯಗಳು ಡ್ರಾ ಆಗಿವೆ. ಇನ್ನು ಟಿ-20ಐ ಮ್ಯಾಚ್​ಗಳ ಬಗ್ಗೆ ಮಾತ್ರ ನೋಡೋದಾದ್ರೆ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು MCGಯಲ್ಲಿ ನಾಲ್ಕು ಬಾರಿ ಮುಖಾಮುಖಿಯಾಗಿವೆ, 2008 ರಿಂದ ಇದುವರೆಗೆ ಭಾರತ ಎರಡರಲ್ಲಿ ಗೆದ್ದಿದೆ. ಆಸ್ಟ್ರೇಲಿಯಾ ಒಂದು ಮ್ಯಾಚ್ ವಿನ್ ಆಗಿದೆ. ಇನ್ನು 2018 ರಲ್ಲಿ ಕೊನೇ ಬಾರಿಗೆ ಈ ಗ್ರೌಂಡಲ್ಲಿ ಟಿ-20ಐ ಮ್ಯಾಚ್ ಆಡಿದ್ದು ಯಾವುದೇ ಫಲಿತಾಂಶವಿಲ್ಲದೆ ಪಂದ್ಯ ಕೊನೆಗೊಂಡಿತ್ತು. ಹೀಗೆ ಮಳೆ, ಪಿಚ್ ಅಂತಾ ಒಂದಷ್ಟು ಚರ್ಚೆಗಳಾಗ್ತಿದ್ರೆ ಭಾರತದ ಪ್ಲೇಯಿಂಗ್ 11 ಬಗ್ಗೆಯೂ ಪ್ರಶ್ನೆಗಳು ಎದ್ದಿವೆ.

ಅರ್ಶದೀಪ್ ಸಿಂಗ್ ಬಿಟ್ಟು ರಾಣಾ ಇಳಿಸಿದ್ದಕ್ಕೆ ಆಕ್ರೋಶ!

ಭಾರತ ವರ್ಸಸ್ ಆಸ್ಟ್ರೇಲಿಯಾ ಮೊದಲ ಟಿ20ಐ ಪಂದ್ಯಕ್ಕೆ ಟೀಂ ಇಂಡಿಯಾ ಪರ ಅತಿ ಹೆಚ್ಚು ಟಿ20 ವಿಕೆಟ್ ಪಡೆದ ಬೌಲರ್ ಅರ್ಶ್‌ದೀಪ್ ಸಿಂಗ್ ಅವರನ್ನು ಕೈಬಿಟ್ಟಿರುವ ಭಾರತೀಯ ಕ್ರಿಕೆಟ್ ತಂಡದ ಆಡಳಿತ ಮಂಡಳಿ ನಿರ್ಧಾರ ಆಕ್ರೋಶಕ್ಕೆ ಕಾರಣವಾಗಿದೆ. ಎಡಗೈ ವೇಗಿ ಅರ್ಶ್‌ದೀಪ್ ಟಿ20ಐಗಳಲ್ಲಿ 100ಕ್ಕೂ ಹೆಚ್ಚು ವಿಕೆಟ್ ಪಡೆದ ಏಕೈಕ ಭಾರತೀಯ ಬೌಲರ್. 65 ಪಂದ್ಯಗಳಲ್ಲಿ 101 ವಿಕೆಟ್. ಹೀಗಿದ್ರೂ ಮೊದಲ ಟಿ20ಐ ಪಂದ್ಯಕ್ಕೆ ಭಾರತ ತಂಡವು ಹರ್ಷಿತ್ ರಾಣಾ ಮತ್ತು ಜಸ್ಪ್ರೀತ್ ಬುಮ್ರಾ ಅವರನ್ನು ಸ್ಪೆಷಲಿಸ್ಟ್ ವೇಗಿಗಳಾಗಿ ಕಣಕ್ಕಿಳಿಸಿತ್ತು. ಅರ್ಶದೀಪ್ ಅವರನ್ನು ಕೈಬಿಟ್ಟಿರೋದಕ್ಕೆ ಭಾರತದ ಮಾಜಿ ಆರಂಭಿಕ ಆಟಗಾರ ಆಕಾಶ್ ಚೋಪ್ರಾ  ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ರೀತಿಯ ನಿರ್ಧಾರಗಳಿಂದ ಅರ್ಶದೀಪ್​ರನ್ನ 2026ರ ಟಿ-20 ವಿಶ್ವಕಪ್​ನಿಂದ ಹೊರಗಿಡೋ ಹುನ್ನಾರವೇ ಎಂದು ಪ್ರಶ್ನಿಸಿದ್ದಾರೆ. ಒಟ್ನಲ್ಲಿ ಇಲ್ಲಿ ಯಾರು ಏನೇ ಪ್ರಶ್ನೆಗಳನ್ನ ಮಾಡಿದ್ರೂ ಎರಡನೇ ಪಂದ್ಯಕ್ಕೂ ಪ್ಲೇಯಿಂಗ್ 11ನಲ್ಲಿ ಯಾವುದೇ ಬದಲಾವಣೆಗಳಾಗೋ ಸಾಧ್ಯತೆಗಳಿಲ್ಲ. ಮೊದಲ ಪಂದ್ಯಕ್ಕಿದ್ದ ಪ್ಲೇಯರ್​ಗಳೇ ಚಾನ್ಸ್ ಗಿಟ್ಟಿಸಿಕೊಳ್ತಾರೆ. ಇನ್ನು ಈ ಸರಣಿಯಲ್ಲಿ ಭಾರತದ ಪರ ಅಭಿಷೇಕ್ ಶರ್ಮಾ ಮತ್ತು ಆಸ್ಟ್ರೇಲಿಯಾ ಪರ ಜೋಶ್ ಹೇಜಲ್​ವುಡ್ ಮೇಲೆ ಎಲ್ಲರ ಕಣ್ಣಿರುತ್ತೆ. ಯಾಕಂದ್ರೆ ಅಭಿಷೇಕ್ ಬ್ಯಾಟಿಂಗ್​ನಲ್ಲಿ ಗೇಮ್ ಚೇಂಜಿಂಗ್ ಪರ್ಫಾಮೆನ್ಸ್ ನೀಡಿದ್ರೆ ಹೇಜಲ್​ವುಡ್ ಬಿಗ್ ಬ್ರೇಕ್ ಥ್ರ್ಯೂಗಳನ್ನ ತಂದುಕೊಡೋ ಮೂಲಕ ಇಡೀ ಪಂದ್ಯದ ದಿಕ್ಕನ್ನೇ ಬದಲಿಸಿಬಿಡ್ತಾರೆ.

Shantha Kumari