ರೈಲಿನಲ್ಲಿ ಪ್ರಯಾಣಿಕರ ಹಣ ಕಳುವಾದರೆ ರೈಲ್ವೆ ಇಲಾಖೆ ಹೊಣೆಯಲ್ಲ! – ಸುಪ್ರೀಂಕೋರ್ಟ್

ರೈಲಿನಲ್ಲಿ ಪ್ರಯಾಣಿಕರ ಹಣ ಕಳುವಾದರೆ ರೈಲ್ವೆ ಇಲಾಖೆ ಹೊಣೆಯಲ್ಲ! – ಸುಪ್ರೀಂಕೋರ್ಟ್

ನವದೆಹಲಿ: ನೀವೆಲ್ಲಾ ರೈಲಿನಲ್ಲಿ ಪ್ರಯಾಣ ಮಾಡುತ್ತೀರಾ ಅಂದ್ರೆ ಈ ಸುದ್ದಿಯನ್ನ ಗಮನದಲ್ಲಿಟ್ಟು ಓದಿ. ಇಲ್ಲಿ ನಿಮಗೊಂದು ಪ್ರಮುಖ ಸೂಚನೆ ಇದೆ. ರೈಲಿನಲ್ಲಿ ಪ್ರಯಾಣಿಕರ ಹಣ ಕಳುವಾದರೆ ಅದಕ್ಕೆ ರೈಲ್ವೆ ಇಲಾಖೆಯನ್ನ ಹೊಣೆಗಾರನನ್ನಾಗಿ ಮಾಡಲು ಸಾಧ್ಯವಿಲ್ಲ ಅಂತಾ ಸುಪ್ರೀಂಕೋರ್ಟ್ ಹೇಳಿದೆ.

ಇದನ್ನೂ ಓದಿ: ಆಸ್ಕರ್ ಪ್ರಶಸ್ತಿ ಮೂಲಕ ವಿಶ್ವದಾದ್ಯಂತ ಗಮನಸೆಳೆದ ಜೋಡಿ – ಸೂರಿಗಾಗಿ ನೆರವಿಗೆ ಕಾಯುತ್ತಿದ್ದಾರೆ ಬೆಳ್ಳಿ ಬೊಮ್ಮನ್

ಯಾರೋ ಹಣವನ್ನು ಕದ್ರು ಅಂತಾ ರೈಲು ಸೇವೆಯಲ್ಲಿ ದೋಷ ಅಂತಾ ಪರಿಗಣಿಸೋಕೆ ಸಾಧ್ಯವಿಲ್ಲ. ಪ್ರಯಾಣಿಕ ತನ್ನ ಹಣವನ್ನಾಗಲಿ ಅಥವಾ ಇತರೆ ಸ್ವತ್ತುಗಳನ್ನ ಭದ್ರವಾಗಿ ಇಟ್ಟುಕೊಂಡಿಲ್ಲ ಅಂದ್ರೆ. ರೈಲಿನಲ್ಲಿ ತೆರಳುವಾಗ ಕಳುವಾದ್ರೆ ಅದಕ್ಕೆ ಪ್ರಯಾಣಿಕರೇ ಜವಾಬ್ದಾರಿ ಹೊರತು ರೈಲ್ವೆ ಇಲಾಖೆ ಅಲ್ಲ ಅಂತಾ ಸುಪ್ರೀಂಕೋರ್ಟ್ ಆದೇಶ ನೀಡಿದೆ.

2005ರಲ್ಲಿ ಬಟ್ಟೆ ವ್ಯಾಪಾರಿಯೊಬ್ಬರು ರೈಲಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ತಮ್ಮ ಸ್ವತ್ತುಗಳನ್ನ ಕಳೆದುಕೊಂಡಿದ್ರು. ಹೀಗಾಗಿ ರೈಲ್ವೆ ಇಲಾಖೆ 1 ಲಕ್ಷ ರೂಪಾಯಿ ಪರಿಹಾರ ನೀಡಬೇಕು ಅಂತಾ ಆಗ್ರಹಿಸಿ ಕೋರ್ಟ್​ ಮೆಟ್ಟಿಲೇರಿದ್ರು. ಅದ್ರೀಗ ಕೋರ್ಟ್ ನಿಮ್ಮ ವಸ್ತು ಕಳುವಾಗಿದ್ದಕ್ಕೆ ರೈಲ್ವೆ ಇಲಾಖೆ ಹೊಣೆಗಾರ ಆಗಲ್ಲ ಅಂತಾ ಸ್ಪಷ್ಟವಾಗಿ ಹೇಳಿದೆ. ಹೀಗಾಗಿ ರೈಲಿನಲ್ಲಿ ಪ್ರಯಾಣ ಮಾಡುವಾಗ ನಿಮ್ಮ ಸ್ವತ್ತುಗಳ ಬಗ್ಗೆ ನಿಗಾ ಇಟ್ಟುಕೊಳ್ಳಲ್ಲಿ. ನಾಳೆ ಕಳುವಾದ್ರೆ ಅದಕ್ಕೆ ನೀವೇ ಜವಾಬ್ದಾರರಾಗಿರುತ್ತೀರಾ. ಯಾರು ಕೂಡ ಒಂದು ರೂಪಾಯಿ ಪರಿಹಾರ ಕೊಡೋದಿಲ್ಲ.

suddiyaana