ಚುನಾವಣಾ ಕಣಕ್ಕಿಳಿಯಲು ವಿನೇಶ್ ಪೋಗಟ್ಗಿಲ್ಲ ಅಡ್ಡಿ – ರಾಜೀನಾಮೆ ಅಂಗೀಕರಿಸಿದ ರೈಲ್ವೇ!

ಒಲಿಂಪಿಕ್ ಕುಸ್ತಿಪಟುಗಳಾದ ವಿನೇಶ್ ಪೋಗಟ್ ಹಾಗೂ ಬಜರಂಗ್ ಪುನಿಯಾ ಕಾಂಗ್ರೆಸ್ ಗೆ ಸೇರ್ಪಡೆಗೊಂಡಿದ್ದಾರೆ. ಈ ಬೆನ್ನಲ್ಲೇ ಪೋಗಟ್ ಹಾಗೂ ಬಜರಂಗ್ ಪುನಿಯಾ ಅವರ ರಾಜೀನಾಮೆಯನ್ನು ಭಾರತೀಯ ರೈಲ್ವೇ ಅಂಗೀಕರಿಸಿದೆ.
ಇದನ್ನೂ ಓದಿ: ನಾಗಚೈನತ್ಯ ಮದುವೆಗೆ ಅಪಶಕುನ.. ಪ್ರಭಾಸ್ ಮದುವೆ ಆದ್ರೆ ಕಂಟಕ! -ಸ್ಪೋಟಕ ಭವಿಷ್ಯ ಜ್ಯೋತಿಷಿ ಯಾರು?
ವಿನೇಶ್ ಫೋಗಟ್ ಹಾಗೂ ಬಜರಂಗ್ ಪುನಿಯಾ ಇತ್ತೀಚೆಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭೇಟಿಯಾಗಿದ್ದರು. ಈ ಬೆನ್ನಲ್ಲೇ ಇವರು ಕಾಂಗ್ರೆಸ್ ಗೆ ಸೇರ್ಪಡೆಗೊಳ್ಳುತ್ತಾರೆ ಎಂಬ ಮಾತು ಹೇಳಿಬಂದಿತ್ತು. ಬಳಿಕ ಕಾಂಗ್ರೆಸ್ ಸೇರ್ಪಡೆಗೂ ಮುನ್ನ ಭಾರತೀಯ ರೈಲ್ವೆಯಲ್ಲಿನ ತಮ್ಮ ಹುದ್ದೆಗಳಿಗೆ ರಾಜೀನಾಮೆ ಸಲ್ಲಿಸಿದ್ದರು. ಕಾಂಗ್ರೆಸ್ ಸೇರ್ಪಡೆ ಬೆನ್ನಲ್ಲೇ ಕುಸ್ತಿಪಟು ವಿನೇಶ್ ಫೋಗಟ್‌ಗೆ ಹರಿಯಾಣ ಚುನಾವಣೆಯಲ್ಲಿ ಸ್ಪರ್ಧಿಸಲು ಕಾಂಗ್ರೆಸ್ ಟಿಕೆಟ್ ನೀಡಿದೆ. ಹೀಗಾಗಿ ಇವರ ರಾಜೀನಾಮೆ ಅಂಗೀಕಾರಗೊಂಡಿದೆ.
ಪಕ್ಷ ಸೇರ್ಪಡೆಗೂ ಮುನ್ನ ವಿನೇಶ್ ಫೋಗಟ್ ಹಾಗೂ ಬಜರಂಗ್ ಪುನಿಯಾ ಭಾರತೀಯ ರೈಲ್ವೆಯಲ್ಲಿರುವ ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದರು. ಭಾರತೀಯ ರೈಲ್ವೆಗೆ ಸೇವೆ ಸಲ್ಲಿಸುವುದು ನನ್ನ ಜೀವನದ ಸ್ಮರಣೀಯ ಮತ್ತು ಹೆಮ್ಮೆಯ ಸಮಯ. ನನ್ನ ಜೀವನದ ಈ ಹಂತದಲ್ಲಿ ನಾನು ರೈಲ್ವೆ ಸೇವೆಯಿಂದ ಹೊರಬರಲು ನಿರ್ಧರಿಸಿದೆ. ನನ್ನ ರಾಜೀನಾಮೆಯನ್ನು ಭಾರತೀಯ ರೈಲ್ವೆಯ ಸಮರ್ಥ ಅಧಿಕಾರಿಗಳಿಗೆ ಸಲ್ಲಿಸಿದ್ದೇನೆ. ರಾಷ್ಟ್ರದ ಸೇವೆಯಲ್ಲಿ ರೈಲ್ವೆ ನನಗೆ ನೀಡಿದ ಈ ಅವಕಾಶಕ್ಕಾಗಿ ನಾನು ಭಾರತೀಯ ರೈಲ್ವೆ ಕುಟುಂಬಕ್ಕೆ ಯಾವಾಗಲೂ ಕೃತಜ್ಞಳಾಗಿದ್ದೇನೆ ಎಂದು ಎಕ್ಸ್‌ನಲ್ಲಿ ಫೋಗಟ್ ಪೋಸ್ಟ್ ಹಾಕಿದ್ದರು.
ಹರಿಯಾಣದ ಜುಲಾನಾ ಕ್ಷೇತ್ರದಿಂದ ವಿನೇಶ್ ಫೋಗಟ್ ಕಣಕ್ಕಿಳಿಯಲಿದ್ದಾರೆ. ಬಜರಂಗ್ ಪುನಿಯಾ ಅವರನ್ನು ಅಖಿಲ ಭಾರತ ಕಿಸಾನ್ ಕಾಂಗ್ರೆಸ್‌ನ ಕಾರ್ಯಾಧ್ಯಕ್ಷರನ್ನಾಗಿ ನೇಮಿಸಲಾಗಿದೆ.