ರೈಲ್ವೇ ಹಳಿಯನ್ನೇ ಎಗರಿಸಿದ ಕಳ್ಳರು – ಎರಡು ಕಿಲೋಮೀಟರ್ ರೈಲು ಮಾರ್ಗ ಮಾಯ..!

ರೈಲ್ವೇ ಹಳಿಯನ್ನೇ ಎಗರಿಸಿದ ಕಳ್ಳರು – ಎರಡು ಕಿಲೋಮೀಟರ್ ರೈಲು ಮಾರ್ಗ ಮಾಯ..!

ಮೊಬೈಲ್ ಟವರ್ ಎಗರಿಸಿದ್ದು ಆಯ್ತು. ರೈಲ್ವೇ ಇಂಜಿನ್ ಕದ್ದು ಪರಾರಿಯಾಗಿದ್ದೂ ಆಯ್ತು. ಕಬ್ಬಿಣದ ಸೇತುವೆಯನ್ನು ಪೀಸ್ ಪೀಸ್ ಮಾಡಿ ಗುಜರಿಗೆ ಹಾಕಿದ್ದೂ ಆಯ್ತು. ಈಗ ಬರೋಬ್ಬರಿ ಎರಡು ಕಿಲೋಮೀಟರ್ ರೈಲ್ವೇ ಹಳಿಯನ್ನೇ ಕದ್ದು ಬಿಹಾರದ ಕಳ್ಳರು ಹೀಗೆಲ್ಲಾ ಕಳ್ಳತನ ಮಾಡಬಹುದು ಎಂದು ತೋರಿಸಿಕೊಟ್ಟಿದ್ದಾರೆ. ಬಿಹಾರದ ಸಮಸ್ತಿಪುರ್ ರೈಲ್ವೇ ವಿಭಾಗದಲ್ಲಿ ಈ ಘಟನೆ ನಡೆದಿದ್ದು, ಇದೀಗ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ರೈಲ್ವೇ ರಕ್ಷಣಾ ಪಡೆ ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿದೆ.

ಇದನ್ನೂ ಓದಿ:  ಕನ್ನಡ ಅಕ್ಷರಗಳ ಮೋಡಿಗೆ ಪ್ರಧಾನಿ ಮೆಚ್ಚುಗೆ – ಬಾದಲ್ ನಂಜುಂಡಸ್ವಾಮಿ ಕೈಚಳಕಕ್ಕೆ ಶಹಬ್ಬಾಸ್!

ಬಿಹಾರದ ಸಮಸ್ತಿಪುರ್ ಜಿಲ್ಲೆಯಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಹಳಿಯನ್ನು ಕದ್ದು ಗುಜರಿ ಅಂಗಡಿಗೆ ಮಾರಲಾಗಿದೆ. ಈ ಬಗ್ಗೆ ಆರ್‌ಪಿಎಫ್ ಮತ್ತು ರೈಲ್ವೇ ವಿಚಕ್ಷಣಾ ದಳ ತನಿಖೆ ನಡೆಸುತ್ತಿದೆ. ಆರ್ ಪಿಎಫ್ ಸಿಬ್ಬಂದಿ ಸಹಾಯದಿಂದಲೇ ಈ ಕಳ್ಳತನ ನಡೆದಿದೆ ಎಂಬ ಮಾಹಿತಿ ತನಿಖಾಧಿಕಾರಿಗಳಿಗೆ ಸಿಕ್ಕಿದೆ. ಈ ಬಗ್ಗೆ ಮಾಹಿತಿ ನೀಡಿದ ಸಮಸ್ತಿಪುರ್ ರೈಲ್ವೇ ವಿಭಾಗದ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಅಶೋಕ್ ಅಗರ್ವಾಲ್, “ತನಿಖೆಗೆ ಇಲಾಖಾ ಮಟ್ಟದ ತನಿಖಾ ಸಮಿತಿಯನ್ನು ರಚಿಸಲಾಗಿದೆ. ಪ್ರಕರಣದ ಬಗ್ಗೆ ಇಲಾಖೆಗೆ ಸರಿಯಾದ ಸಮಯಕ್ಕೆ ಮಾಹಿತಿದ ನೀಡದೇ ಇದ್ದ ಕಾರಣಕ್ಕೆ ಝಂಜರ್‌ಪುರ ಆರ್‌ಪಿಎಫ್ ಹೊರಠಾಣೆ ಉಸ್ತುವಾರಿ ಶ್ರೀನಿವಾಸ್ ಮತ್ತು ರೈಲ್ವೆ ವಿಭಾಗದ ಜಮಾದಾರ್ ಮುಖೇಶ್ ಕುಮಾರ್ ಸಿಂಗ್ ಸೇರಿದಂತೆ ಇಬ್ಬರು ಸಿಬ್ಬಂದಿಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಲಾಗಿದೆ” ಎಂದಿದ್ದಾರೆ.

ಕೋಟ್ಯಂತರ ಮೌಲ್ಯದ ರೈಲ್ವೆ ಹಳಿಯನ್ನು ಅಕ್ರಮವಾಗಿ ಸ್ಕ್ರ್ಯಾಪ್ ಡೀಲರ್‌ಗೆ ಮಾರಾಟ ಮಾಡಲಾಗಿದೆ . ಪಂಡೌಲ್ ನಿಲ್ದಾಣದಿಂದ ಲೋಹತ್ ಶುಗರ್ ಮಿಲ್ ವರೆಗೆ ರೈಲು ಮಾರ್ಗವನ್ನು ಹಾಕಲಾಗಿತ್ತು. ಈಗ ಅದೇ ರೈಲು ಮಾರ್ಗದ ಹಳಿಯನ್ನೇ ಕದ್ದು ಮಾರಾಟ ಮಾಡಿದ್ದಾರೆ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು, ದರ್ಬಂಗಾ ಆರ್‌ಪಿಎಫ್ ಪೋಸ್ಟ್ ಮತ್ತು ರೈಲ್ವೆ ವಿಜಿಲೆನ್ಸ್ ತಂಡವು ತನಿಖೆ ನಡೆಸುತ್ತಿದೆ.

suddiyaana