ರೈಲ್ವೆಗೆ ದಾಖಲೆ ಪ್ರಮಾಣದ ಅನುದಾನ ಘೋಷಣೆ – 400 ವಂದೇ ಭಾರತ್ ಹೊಸ ರೈಲುಗಳ ಪರಿಚಯ!
ಮೋದಿ ಬಜೆಟ್ನಲ್ಲಿ ಈಗ ರೈಲ್ವೆಗೆ ದಾಖಲೆ ಪ್ರಮಾಣದ ಭರ್ಜರಿ ಕೊಡುಗೆ ಸಿಕ್ಕಿದೆ. ಬರೋಬ್ಬರಿ 2.40 ಲಕ್ಷ ಕೋಟಿ ರೂಪಾಯಿಯನ್ನ ರೈಲ್ವೆಗೆ ಮೀಸಲಿಡಲಾಗಿದೆ. ಇದು 2013-14ರ ಬಜೆಟ್ಗೆ ಹೋಲಿಕೆ ಮಾಡಿದ್ರೆ 9 ಪಟ್ಟು ಅಧಿಕವಾಗಿದೆ. ರೈಲ್ವೆಗೆ ದಾಖಲೆ ಮಟ್ಟದ ಹಣ ಘೋಷಣೆಯಾದ ಬೆನ್ನಲ್ಲೇ ರೈಲ್ವೆ ಮೂಲಸೌಕರ್ಯದ ಷೇರುಗಳು ಮಾರುಕಟ್ಟೆಯಲ್ಲಿ ಏರಿಕೆ ಕಂಡಿದೆ.
ಇದನ್ನೂ ಓದಿ : ಕೃಷಿಗೆ ಡಿಜಿಟಲ್ ಟಚ್.. ಸಾಲದ ಮೂಲಕ ಸಪೋರ್ಟ್ – ಮೋದಿ ಬಜೆಟ್ ನಲ್ಲಿ ರೈತರಿಗೆ ಬಂಪರ್!
ಈ ವರ್ಷದ ರೈಲ್ವೆ ಬಜೆಟ್ನಲ್ಲಿ ಅಪೂರ್ಣ ಯೋಜನೆಗಳನ್ನ ಪೂರ್ಣಗೊಳಿಸುವಿಕೆ ಮತ್ತು ಮೂಲಸೌಕರ್ಯಗಳ ಅಭಿವೃದ್ಧಿಯ ಮೇಲೆ ಕೇಂದ್ರೀಕರಿಸುವ ಉದ್ದೇಶ ಹೊಂದಲಾಗಿದೆ. ಹಾಗೇ ಶೀಘ್ರದಲ್ಲೇ ಹೈಸ್ಪೀಡ್ ರೈಲುಗಳ ಸಂಚಾರಕ್ಕೆ ಒತ್ತು ನೀಡಲಾಗುವುದು ಎಂದು ಕೇಂದ್ರ ವಿತ್ತ ಸಚಿವೆ ಘೋಷಣೆ ಮಾಡಿದ್ದಾರೆ. ಹಾಗಾದ್ರೆ ಈ ಸಲ ರೈಲ್ವೆ ಪ್ರಯಾಣಿಕರಿಗಾಗಿ ಏನೆಲ್ಲಾ ಯೋಜನೆಗಳನ್ನ ಜಾರಿಗೆ ತರಲಾಗಿದೆ ಅನ್ನೋ ಮಾಹಿತಿ ಇಲ್ಲಿದೆ.
– ರೈಲ್ವೆಗೆ ಒಟ್ಟಾರೆ 2.40 ಲಕ್ಷ ಕೋಟಿ ರೂಪಾಯಿ ಮೀಸಲು
– ಮುಂದಿನ ಮೂರು ವರ್ಷಗಳಲ್ಲಿ 100 ಹೊಸ ಕಾರ್ಗೋ ಟರ್ಮಿನಲ್ಗಳ ನಿರ್ಮಾಣ
– ಮುಂದಿನ ಮೂರು ವರ್ಷಗಳಲ್ಲಿ ಅಭಿವೃದ್ಧಿ
– 400 ಹೊಸ ವಂದೇ ಭಾರತ್ ರೈಲುಗಳ ಪರಿಚಯ
– ಈ ರೈಲುಗಳನ್ನ ಮುಂದಿನ ಮೂರು ವರ್ಷಗಳಲ್ಲಿ ನಿರ್ಮಾಣ
– ಹೊಸ ಮೆಟ್ರೋ ರೈಲು ವ್ಯವಸ್ಥೆಗೆ ಹೊಸ ಹೂಡಿಕೆಗೆ ಪ್ರೋತ್ಸಾಹ