ನೀನೇ ನನ್ನ ಪ್ರಾಣ ಎಂದು ಗರ್ಭಿಣಿ ಮಾಡಿ ಕೈಕೊಟ್ಟ! – 2ನೇ ಮದುವೆಯಾಗಲು ಹೊರಟವನಿಗೆ ಶಾಕ್ ಕೊಟ್ಟ ಸಂತ್ರಸ್ತೆ!

ಈಗೀಗ ಪ್ರೀತಿಗೆ ಬೆಲೆ ಇಲ್ಲ ಅನ್ನೋತರ ಆಗಿದೆ. ನೀನೇ ನನ್ನ ಪ್ರಾಣ.. ನೀನೇ ನನ್ನ ಚಿನ್ನ ಅಂತ ಹೇಳ್ತಿದ್ದವರೇ ಕೈಕೊಟ್ಟು ಹೋಗ್ತಾರೆ. ಇದೀಗ ಇಲ್ಲೂ ಕೂಡ ಇಂತಹದ್ದೇ ಘಟನೆ ನಡೆದಿದೆ. ಪ್ರೀತಿಸಿ, ದೈಹಿಕ ಸಂಪರ್ಕ ಬೆಳೆಸಿ ನಂತರ ಮೋಸ ಮಾಡಿದ ಪಾಪಿಗೆ ಈಗ ಯುವತಿ ಸರಿಯಾಗೇ ಪಾಠ ಕಲಿಸಿದ್ದಾಳೆ.
ಇದನ್ನೂ ಓದಿ: ದರ್ಶನ್ ಜೈಲಿನಲ್ಲಿದ್ರೂ ರೈಫಲ್ ಸೀಜ್ ಮಾಡಿಲ್ಲ ಯಾಕೆ? – ಪೊಲೀಸರ ಮೇಲೆಯೇ ಶುರುವಾಯ್ತು ಡೌಟ್!
ಈ ಘಟನೆ ರಾಯಚೂರಿನಲ್ಲಿ ನಡೆದಿದೆ. ರಿಷಬ್ ಎಂಬಾತನಿಗೆ ಬಳ್ಳಾರಿಯಲ್ಲಿ ಓದುತ್ತಿದ್ದ ವೇಳೆ ಕೊಪ್ಪಳ ಮೂಲದ ಯುವತಿಯ ಪರಿಚಯವಾಗಿದೆ. ಡಿಗ್ರಿ ಓದುವಾಗಲೇ ಇಬ್ಬರ ನಡುವೆ ಪ್ರೀತಿ ಚಿಗುರಿತ್ತು. ಆ ಬಳಿಕ ಪ್ರೀತಿಯ ಹೆಸರಿನಲ್ಲಿ ಯುವಕ ರಿಷಬ್ ಯುವತಿಯೊಂದಿಗೆ ದೈಹಿಕ ಸಂಪರ್ಕ ಬೆಳೆಸಿದ್ದಾನೆ. ಈ ನಡುವೆ ಯುವತಿ ಗರ್ಭಿಣಿಯಾಗಿದ್ದು, ಮದುವೆಯಾಗುವ ಭರವಸೆ ನೀಡಿ ಬಲವಂತವಾಗಿ ಗರ್ಭಪಾತ ಮಾಡಿಸಿರುವ ಗಂಭೀರ ಆರೋಪ ಸಂತ್ರಸ್ತೆಯಿಂದ ಕೇಳಿ ಬಂದಿದೆ. ಬಳಿಕ ಆರೋಪಿ ರಿಷಬ್ ದೇವಸ್ಥಾನವೊಂದರಲ್ಲಿ ಯುವತಿಯನ್ನು ಮದುವೆಯಾಗಿದ್ದಾನೆ. ಆದರೆ, ನಂತರ ಆಕೆಯನ್ನು ಸಂಪೂರ್ಣವಾಗಿ ಕಡೆಗಣಿಸಿ ಬೇರೊಂದು ಯುವತಿ ಜೊತೆ ಮದುವೆಯಾಗಲು ಸಿದ್ಧತೆ ನಡೆಸಿದ್ದಾನೆ.
ಇಂದು ರಿಷಬ್ ಮತ್ತೊಂದು ಯುವತಿಯೊಂದಿಗೆ ಮದುವೆಯಾಗಲು ಸಿದ್ಧತೆ ಮಾಡಿಕೊಂಡಿದ್ದ. ಈತನ ಮೋಸದ ಜಾಲಕ್ಕೆ ಸಿಲುಕಿದ್ದ ಸಂತ್ರಸ್ತೆಗೆ ತನ್ನ ಪ್ರಿಯಕರನ ಮದುವೆಯ ಆಮಂತ್ರಣ ಪತ್ರಿಕೆಯು ಇನ್‌ಸ್ಟಾಗ್ರಾಂ ಮೂಲಕ ತಲುಪಿದೆ. ತಕ್ಷಣವೇ ಎಚ್ಚೆತ್ತ ಯುವತಿ, ಕೊಪ್ಪಳದಿಂದ ನೇರವಾಗಿ ರಾಯಚೂರಿಗೆ ಓಡೋಡಿ ಬಂದಿದ್ದಾಳೆ. ನೇರವಾಗಿ ಮದುವೆ ನಡೆಯುವ ಸ್ಥಳಕ್ಕೆ ಆಗಮಿಸಿದ ಸಂತ್ರಸ್ತೆ, ತನಗೆ ಆದ ಅನ್ಯಾಯವನ್ನು ಕುಟುಂಬದ ಸದಸ್ಯರು ಹಾಗೂ ನೆರೆದಿದ್ದ ಅತಿಥಿಗಳ ಮುಂದೆ ಬಿಚ್ಚಿಟ್ಟಿದ್ದಾಳೆ. ಈ ಕಾರಣದಿಂದ ಮದುವೆಗೆ ತಾತ್ಕಾಲಿಕವಾಗಿ ಬ್ರೇಕ್ ಬಿದ್ದಿದೆ. ಕೂಡಲೇ ಮಧ್ಯ ಪ್ರವೇಶಿಸಿದ ಸ್ಥಳೀಯರು ಮತ್ತು ಪೊಲೀಸರು ಪ್ರಕರಣವನ್ನು ಮಹಿಳಾ ಪೊಲೀಸ್ ಠಾಣೆಗೆ ಕೊಂಡೊಯ್ದಿದ್ದಾರೆ.
ಸಂತ್ರಸ್ತ ಯುವತಿಯ ದೂರಿನ ಅನ್ವಯ, ರಾಯಚೂರು ಮೂಲದ ಯುವಕ ರಿಷಬ್ ವಿರುದ್ಧ ಲವ್, ಸೆಕ್ಸ್, ಮ್ಯಾರೇಜ್ ದೋಖಾ ಆರೋಪದ ಮೇಲೆ ರಾಯಚೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ನಂಬಿಸಿ, ಮೋಸ ಮಾಡಿದ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುವ ಸಾಧ್ಯತೆ ಇದೆ. ಈ ಘಟನೆ ರಾಯಚೂರು ನಗರದಲ್ಲಿ ತೀವ್ರ ಸಂಚಲನ ಮೂಡಿಸಿದೆ.

ನೋಡಿರಿ

