ಮದುವೆಗೆ ತೆರಳಿದ್ದ ಒಂದೇ ಕುಟುಂಬದ ನಾಲ್ವರು ತುಂಗಭದ್ರಾ ನದಿಯಲ್ಲಿ ಮುಳುಗಿ ಸಾವು!

ಕರ್ನೂಲ್ ಜಿಲ್ಲೆಯ ಕೋಸಗಿ ಮಂಡಲದ ಕಂದಕೂರ ಬಳಿಯ ತುಂಗಭದ್ರಾ ನದಿಯಲ್ಲಿ ಸ್ನಾನ ಮಾಡಲೆಂದು ತೆರಳಿದ್ದ ನಾಲ್ವರು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಮೃತರು ಕರ್ನಾಕಟದ ಮೂಲದವರೆಂದು ತಿಳಿದು ಬಂದಿದೆ.
ಕರ್ನಾಟಕದ ಮಾನ್ವಿ ತಾಲೂಕಿನ ಕುರಿಡಿ ಗ್ರಾಮದ 15 ಜನರು ಎರಡು ದಿನಗಳ ಹಿಂದೆ ಮದುವೆಯಲ್ಲಿ ಭಾಗವಹಿಸಲು ಕಂದುಕುರು ಗ್ರಾಮಕ್ಕೆ ಬಂದಿದ್ದರು. ಅವರೆಲ್ಲರೂ ಹತ್ತಿರದ ತುಂಗಭದ್ರಾ ನದಿಯಲ್ಲಿ ಸ್ನಾನ ಮಾಡಲು ಹೋಗಿದ್ದರು. ನದಿಗೆ ಇಳಿದ ನಾಲ್ವರು ಜನರು ಈಜಲು ಬಾರದ ಕಾರಣ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಇದನ್ನೂ ಓದಿ: ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ IPLಗೆ ಅದ್ದೂರಿ ಚಾಲನೆ – RCB VS SRH ಪಂದ್ಯಕ್ಕೆ ಇದ್ಯಾ ಮಳೆ ಕಾಟ
ಕುರಿಡಿ ಗ್ರಾಮದ ನಿವಾಸಿಗಳಾದ ರತ್ನಾ ಮಹಾಂತೇಶ(24), ಮಹಾಂತೇಶ ಪೀತಾಂಬರ(28), ಉಮಾವತಿ ಗೋಂವಿದ(35) ಮತ್ತು ಶಿವಾನಂದ ಹನುಮಂತರಾಯ(24) ಮೃತ ದುರ್ದೈವಿಗಳು. ಘಟನೆಯಿಂದ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ. ಮೃತಪಟ್ಟ ನಾಲ್ವರಲ್ಲಿ ರತ್ನಾ ಹಾಗೂ ಮಹಾಂತೇಶ ಪತಿ-ಪತ್ನಿಯಾಗಿದ್ದಾರೆ. .

ನೋಡಿರಿ

