ಝೀರೋದಿಂದ ಹೀರೋ ಆದ ಶ್ರೇಯಸ್ ಅಯ್ಯರ್ – ಒಂದೇ ವರ್ಷದಲ್ಲಿ 5 ಟ್ರೋಫಿ ಗೆಲುವು

ಚಾಂಪಿಯನ್ಸ್ ಟ್ರೋಫಿ ಟೂರ್ನಿಯುದ್ದಕ್ಕೂ ಅದ್ಭುತ ಪ್ರದರ್ಶನದ ಮೂಲಕ ನಂಬಿಕಸ್ಥ ಆಟಗಾರನಾಗಿ ಕಂಡಿದ್ದು ಶ್ರೇಯಸ್ ಅಯ್ಯರ್. ಟೀಂ ಇಂಡಿಯಾದ ಟಾಪ್ ಆರ್ಡರ್ ಕೈಕೊಟ್ಟಾಗಲೆಲ್ಲಾ ಆಪದ್ಭಾಂಧವರಂತೆ ನಿಂತು ಕಾಪಾಡಿದ್ದು ಶ್ರೇಯಸ್ ಅಯ್ಯರ್ ಮತ್ತು ಕೆಎಲ್ ರಾಹುಲ್. ಅಭಿಮಾನಿಗಳು ಕೂಡ ಇವ್ರಿದ್ದಾರಲ್ಲ ಬಿಡು ಎನ್ನುವಷ್ಟರ ಮಟ್ಟಿಗೆ ಪರ್ಫಾಮೆನ್ಸ್ ನೀಡಿದ್ರು. ಅದ್ರಲ್ಲೂ ಟೀಂ ಇಂಡಿಯಾದಿಂದಲೇ ಹೊರಬಿದ್ದಿದ್ದ ಶ್ರೇಯಸ್ ಈಗ ತಂಡಕ್ಕೆ ಬೇಕೇಬೇಕು ಎನ್ನುವಷ್ಟರ ಮಟ್ಟಿಗೆ ಇಂಪ್ಯಾಕ್ಟ್ ಮಾಡಿದ್ದಾರೆ.
ಇದನ್ನೂ ಓದಿ : DC ಕ್ಯಾಪ್ಟನ್ಸಿ ಬೇಡವೆಂದ KL – IPLನಲ್ಲಿ ಜಸ್ಟ್ ಪ್ಲೇಯರ್ ರಾಹುಲ್
ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿ ಮೂಲಕ ಭಾರತ ತಂಡದಲ್ಲಿ ಮತ್ತೊಮ್ಮೆ ಸ್ಥಾನ ಪಡೆದಿದ್ದ ಶ್ರೇಯಸ್ ಅಯ್ಯರ್ ಚಾಂಪಿಯನ್ಸ್ ಟ್ರೋಫಿಯಲ್ಲೂ ಮಿಂಚಿದ್ರು. 2 ಅರ್ಧಶತಕ ಮತ್ತು 2 ಬಾರಿ 40 ಪ್ಲಸ್ ರನ್ ಗಳೊಂದಿಗೆ ಟೂರ್ನಿಯಲ್ಲಿ 243ರನ್ ಗಳಿಸಿದ್ರು. ಈ ಮೂಲಕ ಭಾರತದ ಪರ ಚಾಂಪಿಯನ್ಸ್ ಟ್ರೋಫಿಯಲ್ಲಿ ಗರಿಷ್ಛ ರನ್ ಸಿಡಿಸಿದ ಆಟಗಾರನಾದ್ರು. ಆದ್ರೆ ಕಳೆದ ವರ್ಷ ಶ್ರೇಯಸ್ ಲೈಫ್ ಹೀಗಿರಲಿಲ್ಲ. ಬಿಸಿಸಿಐನ ನಿರ್ದೇಶನದ ಹೊರತಾಗಿಯೂ ದೇಸಿ ಕ್ರಿಕೆಟ್ ಕಡೆಗಣಿಸಿದ್ದ ಶ್ರೇಯಸ್, 1 ವರ್ಷ ಟೀಮ್ ಇಂಡಿಯಾದಿಂದ ದೂರ ಉಳಿದಿದ್ರು. ಬಹುಶಃ ಆವತ್ತು ಶ್ರೇಯಸ್ ಸ್ವಲ್ಪ ಕೇರ್ಲೆಸ್ ಮಾಡಿದ್ರೂ ಇವತ್ತು ಇಂಥಾದ್ದೊಂದು ಚಾನ್ಸ್ ಮತ್ತೆ ಸಿಗ್ತಿರಲಿಲ್ಲ. ತನ್ನ ತಪ್ಪನ್ನ ತಿದ್ದಿಕೊಂಡು ದೇಸಿ ಕ್ರಿಕೆಟ್ ಮತ್ತು ಇಂಟರ್ನ್ಯಾಷನಲ್ ಕ್ರಿಕೆಟ್ನಲ್ಲಿ ಧೂಳೆಬ್ಬಿಸಿದ್ದಾರೆ. ಇಂಗ್ಲೆಂಡ್ ಎದುರು 3 ಏಕದಿನ ಪಂದ್ಯಗಳಲ್ಲಿ ಬ್ಯಾಟ್ ಬೀಸಿದ್ದ ಶ್ರೇಯಸ್, 60ರ ಬ್ಯಾಟಿಂಗ್ ಸರಾಸರಿಯಲ್ಲಿ 181 ರನ್ ಕಲೆಹಾಕಿದ್ದರು. ಹೀಗಾಗಿ ಅಂದು ಬಿಸಿಸಿಐನಿಂದ ಸೆಂಟ್ರಲ್ ಕಾಂಟ್ರಾಕ್ಟ್ ಕಳೆದುಕೊಂಡಿರುವ ಅಯ್ಯರ್ ಇದೇ ಪರ್ಫಾಮೆನ್ಸ್ ಮೂಲಕ ಮರಳಿ ಸೆಂಟ್ರಲ್ ಕಾಂಟ್ರಾಕ್ಟ್ ಪಡೆಯುವ ವಿಶ್ವಾಸದಲ್ಲಿದ್ದಾರೆ.
ಒಂದೇ ವರ್ಷದಲ್ಲಿ 5 ಟ್ರೋಫಿಗಳನ್ನ ಗೆದ್ದ ಶ್ರೇಯಸ್!
ಮಾರ್ಚ್ 14, 2024- ರಣಜಿ ಟ್ರೋಫಿ
ಮೇ 26, 2024 – ಐಪಿಎಲ್ ಟ್ರೋಫಿ
ಆಕ್ಟೋಬರ್ 5, 2024- ಇರಾನಿ ಟ್ರೋಫಿ
ಡಿಸೆಂಬರ್ 15, 2024- ಸೈಯದ್ ಮುಷ್ತಾಕ್ ಅಲಿ ಟ್ರೋಫಿ
ಮಾರ್ಚ್ 9, 2025- ಚಾಂಪಿಯನ್ಸ್ ಟ್ರೋಫಿ
ಹೀಗೆ ಒಂದೇ ವರ್ಷದಲ್ಲಿ ಶ್ರೇಯಸ್ ಅಯ್ಯರ್ ಇಮೇಜ್ ಕಂಪ್ಲೀಟ್ ಚೇಂಜ್ ಆಗಿದೆ. ಬಿಸಿಸಿಐ ಬಾಸ್ಗಳ ಕಣ್ಣನ್ನ ಕೆಂಪಾಗಿಸಿದ್ದ ಅದೇ ಶ್ರೇಯಸ್ ಈಗ ಅವ್ರ ಬಾಯಲ್ಲೇ ಶಹಬ್ಬಾಸ್ ಹೇಳಿಸಿಕೊಳ್ತಿದ್ದಾರೆ. ಇನ್ನೇನಿದ್ರೂ ಬಿಸಿಸಿಐ ಕಾಂಟ್ರ್ಯಾಕ್ಟ್ ಸಿಗೋದಷ್ಟೇ ಬಾಕಿ. ಟೀಂ ಇಂಡಿಯಾದ ನಾಲ್ಕನೇ ಸ್ಲಾಟ್ನ ಬೆಸ್ಟ್ ಬ್ಯಾಟರ್ ಆಗಿರುವ ಶ್ರೇಯಸ್ ಗೆ ಆದಷ್ಟು ಬೇಗ ಭಾರತ ತಂಡದ ಒಪ್ಪಂದದ ಬಾಗಿಲು ತೆರೆಯೋದ್ರಲ್ಲಿ ಅನುಮಾನವೇ ಇಲ್ಲ.