ಸ್ಕ್ರೂ, ಸ್ಪ್ಯಾನರ್ ಹಿಡಿದು ಬೈಕ್​ ರಿಪೇರಿ ಮಾಡಿದ ರಾಹುಲ್‌ ಗಾಂಧಿ! – ಸಂಬಂಧಗಳ ಬಗ್ಗೆ ಬಿಜೆಪಿಗೆ ರಾಗಾ ಪಾಠ

ಸ್ಕ್ರೂ, ಸ್ಪ್ಯಾನರ್ ಹಿಡಿದು ಬೈಕ್​ ರಿಪೇರಿ ಮಾಡಿದ ರಾಹುಲ್‌ ಗಾಂಧಿ! – ಸಂಬಂಧಗಳ ಬಗ್ಗೆ ಬಿಜೆಪಿಗೆ ರಾಗಾ ಪಾಠ

ಕಾಂಗ್ರೆಸ್ ನಾಯಕ ರಾಹುಲ್​ ಗಾಂಧಿ ವಿವಿಧ ಕ್ಷೇತ್ರಗಳಲ್ಲಿ ದುಡಿಯುತ್ತಿರುವ ಜನರ ಕಷ್ಟ-ನಷ್ಟಗಳನ್ನ ಅರ್ಥ ಮಾಡಿಕೊಳ್ಳೋಕೆ ನಾನಾ ಪ್ರಯತ್ನಗಳನ್ನ ಮಾಡುತ್ತಲೇ ಇದ್ದಾರೆ. ಟ್ರಕ್​ ಡ್ರೈವರ್​​ಗಳ ಜೊತೆ, ಫುಡ್‌ ಡೆಲಿವರಿ  ಬಾಯ್‌ಗಳ ಜೊತೆ ಓಡಾಡಿದ ಬಳಿಕ ಇದೀಗ ಬೈಕ್​ ರಿಪೇರಿ ಮಾಡುವ ಮೆಕ್ಯಾನಿಕ್​​ಗಳ ಜೊತೆ ಕಾಲ ಕಳೆದಿದ್ದಾರೆ.

ಇದನ್ನೂ ಓದಿ: ವಿಶ್ವಕಪ್‌ಗೂ ಮುನ್ನ ಟೀಮ್ ಇಂಡಿಯಾಕ್ಕೆ ಟಿ20 ಪಂದ್ಯ- ಆಗಸ್ಟ್‌ನಲ್ಲಿ ವೆಸ್ಟ್ಇಂಡೀಸ್ ವಿರುದ್ಧ ಕಣಕ್ಕಿಳಿಯಲಿದೆ ಭಾರತ

ದೆಹಲಿಯಲ್ಲಿರುವ ಬೈಕ್​ ಮೆಕ್ಯಾನಿಕಲ್ ಶಾಪ್​ಗೆ ಭೇಟಿ ನೀಡಿದ ರಾಹುಲ್​, ಅಲ್ಲಿನ ಸಿಬ್ಬಂದಿಯೊಂದಿಗೆ ಮಾತುಕತೆ ನಡೆಸಿದ್ದಾರೆ. ಇದೇ ವೇಳೆ ಸ್ಕ್ರೂ ಡ್ರೈವರ್, ಸ್ಪ್ಯಾನರ್ ಹಿಡಿದು ಬೈಕ್​ ರಿಪೇರಿ ಮಾಡುವುದು ಹೇಗೆ ಎಂಬುದನ್ನು ಕಲಿತಿದ್ದಾರೆ.

ರಾಹುಲ್ ಗಾಂಧಿ ಫೋಟೋವನ್ನ ಟ್ವೀಟ್​ ಮಾಡಿರುವ ಕಾಂಗ್ರೆಸ್, ನಮಗೆ ಜನಸಾಮಾನ್ಯರ ಜೊತೆಗೆ ಒಳ್ಳೆಯ ಸಂಬಂಧವಿದೆ. ಆ ಸಂಬಂಧವನ್ನ ಹೇಗೆ ಉಳಿಸಿಕೊಳ್ಳುಬೇಕು ಅನ್ನೋದು ಕೂಡ ಗೊತ್ತಿದೆ ಅಂತಾ ಬಿಜೆಪಿಗೆ ಟಾಂಗ್ ಕೊಟ್ಟಿದೆ.

ರಾಹುಲ್ ಗಾಂಧಿ ಸ್ಥಳೀಯರನ್ನು ಭೇಟಿಯಾಗುತ್ತಿರುವುದು ಇದೇ ಮೊದಲಲ್ಲ. ಭಾರತ್ ಜೋಡೋ ಯಾತ್ರೆ ಸಂದರ್ಭದಲ್ಲಿ ಮೇ 23 ರಂದು ಟ್ರಕ್​ನಲ್ಲಿ ಚಲಿಸಿ ಅವರ ಸಮಸ್ಯೆಗಳನ್ನು ಆಲಿಸಿದ್ದರು. ಅವರು ಈ ಹಿಂದೆ ಕರ್ನಾಟಕ ಚುನಾವಣೆ ಸಂದರ್ಭದಲ್ಲಿ ಬೆಂಗಳೂರಿನಲ್ಲಿ ಡೆಲಿವರಿ ಬಾಯ್ ಜತೆ ಸ್ಕೂಟರ್​ನಲ್ಲಿ ಕುಳಿತಿದ್ದರು. ಆ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.

suddiyaana