ಸ್ಕೂಟರ್‌ನಲ್ಲಿ ಡೆಲಿವರಿ ಬಾಯ್ ಜೊತೆ ಸಂಚಾರ – ಗ್ರಾಹಕರ ಜೊತೆ ಕುಳಿತು ಕಾಫಿ ಕುಡಿದ ರಾಹುಲ್ ಗಾಂಧಿ
ಬೆಂಗಳೂರಲ್ಲಿ ಜನರ ಜೊತೆ ಬೆರೆತ ರಾಹುಲ್‌ಗಾಂಧಿಗೆ ವ್ಯಾಪಕ ಮೆಚ್ಚುಗೆ

ಸ್ಕೂಟರ್‌ನಲ್ಲಿ ಡೆಲಿವರಿ ಬಾಯ್ ಜೊತೆ ಸಂಚಾರ – ಗ್ರಾಹಕರ ಜೊತೆ ಕುಳಿತು ಕಾಫಿ ಕುಡಿದ ರಾಹುಲ್ ಗಾಂಧಿಬೆಂಗಳೂರಲ್ಲಿ ಜನರ ಜೊತೆ ಬೆರೆತ ರಾಹುಲ್‌ಗಾಂಧಿಗೆ ವ್ಯಾಪಕ ಮೆಚ್ಚುಗೆ

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಜನರ ನಡುವೆ ಬೆರೆತು ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಬೆಂಗಳೂರಿನಲ್ಲಿ ಕಾಂಗ್ರೆಸ್ ಪರ ಪ್ರಚಾರಕ್ಕೆ ಆಗಮಿಸಿರುವು ರಾಹುಲ್ ಗಾಂಧಿ ಕನ್ನಿಂಗ್ಹ್ಯಾಮ್ ರಸ್ತೆಯ ಕೆಫೆಯಲ್ಲಿ ಗ್ರಾಹಕರ ಜೊತೆ ಕಾಫಿ ಕುಡಿದಿದ್ದಾರೆ. ಸಾಮಾನ್ಯರ ಜೊತೆ ಬೆರೆತು, ಅವರ ಜೊತೆ ಮಾತಾಡುತ್ತಾ, ಅವರ ಸಮಸ್ಯೆಗಳನ್ನು ಕೇಳುತ್ತಾ ಕುಳಿತಿರುವ ರಾಹುಲ್ ಗಾಂಧಿಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.

ಇದನ್ನೂ ಓದಿ:  ಪ್ರಿಯಾಂಕಾ ಗಾಂಧಿಗೆ ಮಲ್ಲಿಗೆ ಹೂವು ಮತ್ತು ಸೀರೆ ಉಡುಗೊರೆ..! – ಕನಕಗಿರಿ ಜನತೆಯ ಪ್ರೀತಿಗೆ ಕರಗಿದ ‘ಕೈ’ ನಾಯಕಿ

ಕರ್ನಾಟಕ ವಿಧಾನಸಭೆ ಚುನಾವಣೆ ಹಿನ್ನೆಲೆ ಕಾಂಗ್ರೆಸ್ನ ಕೇಂದ್ರ ನಾಯಕರು ರಾಜ್ಯದಲ್ಲಿ ಅಬ್ಬರದ ಪ್ರಚಾರ ಕೆಫೆಯಲ್ಲಿ ಗ್ರಾಹಕರ ಜೊತೆ ಕಾಫಿ ಕುಡಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ನಂತರ ಬಿಎಂಟಿಸಿ ಬಸ್‌ನಲ್ಲಿ ಪ್ರಯಾಣ ಮಾಡಿದ್ದಾರೆ. ಅದಕ್ಕೂ ಮುನ್ನ ಸ್ಕೂಟರ್‌ನಲ್ಲಿ ಡೆಲಿವರಿ ಬಾಯ್ ಜೊತೆಗೆ ರಾಹುಲ್ ಗಾಂಧಿ ಸಂಚಾರ ಮಾಡಿದ್ದಾರೆ. ಏರ್ಲೈನ್ಸ್ ಹೊಟೇಲ್‌ನಿಂದ ಶಾಂಗ್ರಿಲಾ ಹೊಟೇಲ್ ತನಕ ರಾಹುಲ್ ಗಾಂಧಿ ಸ್ಕೂಟರ್‌ನಲ್ಲೇ ಸಾಗಿದ್ದಾರೆ. ಹೆಲ್ಮೆಟ್ ಧರಿಸಿ ಸಾಮಾನ್ಯ ವ್ಯಕ್ತಿಯಂತೆ ಬೈಕ್‌ನಲ್ಲಿ ಓಡಾಟ ಮಾಡಿದ್ದಾರೆ. ಸವಾರನ ಜೊತೆಗೆ ಹಿಂಬದಿ ಕುಳಿತು ಮಾತುಕತೆ ಮಾಡುತ್ತ ರಾಹುಲ್ ಗಾಂಧಿ ಸಾಗಿದ್ದಾರೆ. ಈ ವೇಳೆ ರಾಹುಲ್ ಗಾಂಧಿ ಭದ್ರತಾ ಪಡೆಯಿಲ್ಲದೆ ಬೈಕ್‌ನಲ್ಲಿ ಸಂಚಾರ ಮಾಡಿದ್ದಾರೆ.

ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ನಗರದಲ್ಲಿ ಸೋಮವಾರ ಸಂಜೆ ರೋಡ್‌ ಶೋ ನಡೆಸಲಿದ್ದಾರೆ.

suddiyaana