ಅಣ್ಣ ತಂಗಿಯ ಸ್ನೋಮೊಬೈಲ್ ಸವಾರಿ – ‘ರಾಹುಲ್ – ಪ್ರಿಯಾಂಕ’ ಜಾಲಿಮೂಡ್

ಅಣ್ಣ ತಂಗಿಯ ಸ್ನೋಮೊಬೈಲ್ ಸವಾರಿ – ‘ರಾಹುಲ್ – ಪ್ರಿಯಾಂಕ’ ಜಾಲಿಮೂಡ್

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಸಹೋದರಿ ಪ್ರಿಯಾಂಕ ಗಾಂಧಿಯೆಂದ್ರೆ ಅಚ್ಚುಮೆಚ್ಚು. ತಂಗಿಗೂ ಅಣ್ಣನೆಂದರೆ ಅಷ್ಟೇ ಪ್ರೀತಿ. ಈ ಅಣ್ಣತಂಗಿ ಜೋಡಿಯನ್ನ ನೋಡೋದೇ ಖುಷಿ. ಅದೆಷ್ಟೋ ಜನ ಸಹೋದರ ಸಹೋದರಿಯೆಂದ್ರೆ ಹೀಗೆ ಇರಬೇಕು ಅಂತಾ ಆಸೆಪಟ್ಟಿದ್ದೂ ಇದೆ. ಇತ್ತೀಚೆಗಷ್ಟೇ ಮಂಜುಗಡ್ಡೆ ಪರಸ್ಪರ ಎರಚಿಕೊಂಡು ಖುಷಿಪಡ್ತಿದ್ದ ಅಣ್ಣತಂಗಿಯ ವಿಡೀಯೋ ವೈರಲ್ ಆಗಿತ್ತು. ಇದೀಗ ರಾಹುಲ್ ಮತ್ತು ಪ್ರಿಯಾಂಕ ಸ್ನೋಮೊಬೈಲ್ ಸವಾರಿ ಮಾಡಿರುವ ವೀಡಿಯೋ ವೈರಲ್ ಆಗಿದ್ದು, ಅಣ್ಣತಂಗಿ ಬಾಂಧವ್ಯ ನೋಡಿ ಮೆಚ್ಚುಗೆಯ ಮಹಾಪೂರವೇ ಹರಿದುಬಂದಿದೆ.

ಇದನ್ನೂ ಓದಿ:  ಡಿ.ರೂಪಾ ವಿರುದ್ಧ ರೊಚ್ಚಿಗೆದ್ದ ರೋಹಿಣಿ ಪತಿ & ಫ್ಯಾನ್ಸ್ – IAS Vs IPS ಕಾಳಗ ಮತ್ತಷ್ಟು ಹೆಚ್ಚಿದ್ದೇಕೆ..!?   

ಜಮ್ಮು ಮತ್ತು ಕಾಶ್ಮೀರದ ಗುಲ್ಮಾರ್ಗ್‌ನಲ್ಲಿ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಅವರು ತಮ್ಮ ಸಹೋದರಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರೊಂದಿಗೆ ಸ್ನೋಮೊಬೈಲ್‌ ನಲ್ಲಿ ಸವಾರಿ ಮಾಡಿದ್ದಾರೆ. ಸ್ನೋಮೊಬೈಲ್‌ ಸ್ಕೀಯರ್‌ನಲ್ಲಿ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಸವಾರಿ ಮಾಡುತ್ತಾ ಸಂಭ್ರಮಿಸಿದ್ದಾರೆ. ರಾಹುಲ್ ಗಾಂಧಿ, ಸ್ಕೀ ಕನ್ನಡಕ ಮತ್ತು ಪ್ರಿಯಾಂಕಾ ಗಾಂಧಿ ಬಿಳಿಯ ಸ್ನೋಮೊಬೈಲ್​ ವಾಹನವನ್ನು ಸವಾರಿ ಮಾಡುತ್ತಿರುವುದನ್ನು ವಿಡೀಯೋದಲ್ಲಿ ಕಾಣಬಹುದು., ಭಾರತ್ ಜೋಡೋ ಯಾತ್ರೆಯ ನಂತರದ ವಿಶ್ರಾಂತಿಯ ಕ್ಷಣವನ್ನು ಇಲ್ಲಿ ಕಳೆದಿದ್ದಾರೆ.

suddiyaana