ಚಾಲಕರ ಸಮಸ್ಯೆ ಆಲಿಸಲು ಟ್ರಕ್‌ನಲ್ಲಿ ಪ್ರಯಾಣಿಸಿದ ರಾಹುಲ್‌ ಗಾಂಧಿ  
ಜನರ ಜೊತೆ ಬೆರೆತ ರಾಹುಲ್‌ಗಾಂಧಿಗೆ ವ್ಯಾಪಕ ಮೆಚ್ಚುಗೆ

ಚಾಲಕರ ಸಮಸ್ಯೆ ಆಲಿಸಲು ಟ್ರಕ್‌ನಲ್ಲಿ ಪ್ರಯಾಣಿಸಿದ ರಾಹುಲ್‌ ಗಾಂಧಿ  ಜನರ ಜೊತೆ ಬೆರೆತ ರಾಹುಲ್‌ಗಾಂಧಿಗೆ ವ್ಯಾಪಕ ಮೆಚ್ಚುಗೆ

ನವದೆಹಲಿ: ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಸರಳ ಸಜ್ಜನಿಕೆಯ ವ್ಯಕ್ತಿ. ಆಗಾಗ ಸಾರ್ವಜನಿಕ ಪ್ರದೇಶಗಳಲ್ಲಿ ಜನಸಾಮಾನ್ಯರಂತೆ ಕಾಣಿಸಿಕೊಳ್ಳುತ್ತಾರೆ. ಇದೀಗ ಅವರು ಸೆಕ್ಯುರಿಟಿ ಬಿಟ್ಟು ಹರ್ಯಾಣದ ಮುರ್ತಾಲ್ ನಿಂದ ಅಂಬಾಲದವರೆಗೆ ಟ್ರಕ್ ನಲ್ಲಿ ಪ್ರಯಾಣ ಮಾಡಿದರು. ಇದರ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದೆ.

ಇದನ್ನೂ ಓದಿ: ಸ್ಕೂಟರ್‌ನಲ್ಲಿ ಡೆಲಿವರಿ ಬಾಯ್ ಜೊತೆ ಸಂಚಾರ – ಗ್ರಾಹಕರ ಜೊತೆ ಕುಳಿತು ಕಾಫಿ ಕುಡಿದ ರಾಹುಲ್ ಗಾಂಧಿ

ಹರ್ಯಾಣದ ಮುರ್ತಾಲ್‌ ಗೆ ಸೋಮವಾರ ರಾತ್ರಿ 11 ಗಂಟೆ ಸುಮಾರಿಗೆ ರಾಹುಲ್ ಆಗಮಿಸಿದರು. ಮುರ್ತಾಲ್‌ ನಿಂದ ಮಧ್ಯರಾತ್ರಿ 12ರ ಸುಮಾರಿಗೆ ಟ್ರಕ್‌ ಏರಿ ಅಂಬಾಲ ತಲುಪಿದ್ದಾರೆ. ಮುರ್ತಾಲ್‌ ನಿಂದ ಅಂಬಾಲಾಗೆ ಪ್ರಯಾಣಿಸುವಾಗ ರಾಹುಲ್ ಗಾಂಧಿ ಟ್ರಕ್ ಚಾಲಕರೊಂದಿಗೆ ಅವರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಮಾತನಾಡಿದ್ದಾರೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.

ಟ್ರಕ್‌ ಡ್ರೈವರ್‌ಗಳಿಗೆ ಹೆಚ್ಚು ಕಾಡುವ ಇತರ ಸಮಸ್ಯೆಗಳ ಬಗ್ಗೆ ಮತ್ತು ಅವುಗಳನ್ನು ಹೇಗೆ ಬಗೆಹರಿಸಬಹುದು ಎಂಬುದರ ಕುರಿತು ರಾಹುಲ್ ಚಾಲಕರೊಂದಿಗೆ ಮಾತನಾಡಿದ್ದಾರೆ. ಅಂಬಾಲ ತಲುಪಿದ ನಂತರ ರಾಹುಲ್ ಗಾಂಧಿ ರಸ್ತೆ ಮಾರ್ಗವಾಗಿ ಹಿಮಾಚಲ ಪ್ರದೇಶದ ಶಿಮ್ಲಾ ಕಡೆಗೆ ತೆರಳಿದರು. ಆದರೆ, ರಾಹುಲ್ ಗಾಂಧಿಯವರ ತಡರಾತ್ರಿ ಪ್ರಯಾಣದ ಬಗ್ಗೆ ಪಕ್ಷದ ನಾಯಕತ್ವ ಯಾವುದೇ ಮಾಹಿತಿ ನೀಡಿರಲಿಲ್ಲ ಎಂದು ವರದಿಯಾಗಿದೆ.

ಕರ್ನಾಟಕ ವಿಧಾನಸಭಾ ಚುನಾವಣೆಯ ಪ್ರಚಾರದ ಸಂದರ್ಭದಲ್ಲಿ, ರಾಹುಲ್, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಬಸ್ ನಿಲ್ದಾಣದಲ್ಲಿ ಕಾಲೇಜು ವಿದ್ಯಾರ್ಥಿಗಳು ಮತ್ತು ಮಹಿಳೆಯರೊಂದಿಗೆ ಸಂವಾದ ನಡೆಸಿದರು. ಬಳಿಕ ಬಿಎಂಟಿಸಿ ಬಸ್‌ ನಲ್ಲಿ ಪ್ರಯಾಣಿಸಿದರು. ನಂತರ ಬೆಂಗಳೂರಿನಲ್ಲಿ ಬಾಡಿಗೆ ಟ್ಯಾಕ್ಸಿ ಚಾಲಕರು ಮತ್ತು ಆಹಾರ ವಿತರಣೆ ಮಾಡುವ ವ್ಯಕ್ತಿಗಳೊಂದಿಗೆ ಮಾತುಕತೆ ನಡೆಸಿದ್ದರು.

suddiyaana