ಹಿಮದ ಮಳೆಯಲ್ಲಿ ಮಕ್ಕಳಾದ ‘ರಾಹುಲ್-ಪ್ರಿಯಾಂಕಾ’ – ಹೇಗಿತ್ತು ಅಣ್ಣ ತಂಗಿ ಸ್ನೋ ಫೈಟ್..!?  

ಹಿಮದ ಮಳೆಯಲ್ಲಿ ಮಕ್ಕಳಾದ ‘ರಾಹುಲ್-ಪ್ರಿಯಾಂಕಾ’ – ಹೇಗಿತ್ತು ಅಣ್ಣ ತಂಗಿ ಸ್ನೋ ಫೈಟ್..!?  

ಎಷ್ಟೇ ದೊಡ್ಡವರಾಗಲಿ, ಎಂಥದ್ದೇ ಅಧಿಕಾರ ಇರಲಿ. ಅಣ್ಣ ತಂಗಿ ನಡುವಿನ ಪ್ರೀತಿ, ಮಮತೆ, ತುಂಟಾಟ, ಕಿತ್ತಾಟ ಕಡಿಮೆಯಾಗಲ್ಲ. ಹೀಗಾಗೇ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ಹಿಮ ಮಳೆಯಲ್ಲಿ ಮಕ್ಕಳಂತೆ ಹೊಡೆದಾಡಿಕೊಂಡಿದ್ದಾರೆ.

ಇದನ್ನೂ ಓದಿ : ಒಡಿಶಾ ಸಚಿವರನ್ನ ಹತ್ಯೆಗೈದ ASI ಮಾನಸಿಕ ಅಸ್ವಸ್ಥ – ರಿವಾಲ್ವರ್ ನೀಡಿದ್ದರ ಹಿಂದೆ ಹಲವು ಅನುಮಾನ! 

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆ ನಿನ್ನೆಗೆ ಮುಗಿದಿದ್ದು, ಇವತ್ತು  ಸಮಾರೋಪ ಸಮಾರಂಭ ನಡೆಯುತ್ತಿದೆ. ಕಾಶ್ಮೀರದ ಶ್ರೀನಗರದಲ್ಲಿ ಕಾರ್ಯಕ್ರಮ ನಡೆಯುತ್ತಿದೆ. ಸದ್ಯ ಕಾಶ್ಮೀರದಲ್ಲಿ ಭಾರೀ ಪ್ರಮಾಣದಲ್ಲಿ ಹಿಮ ಸುರಿಯುತ್ತಿದೆ. ಮಂಜಿನ ಉಂಡೆಗಳನ್ನ ತೆಗೆದುಕೊಂಡು ರಾಹುಲ್ ಹಾಗೂ ಪ್ರಿಯಾಂಕಾ ಎರಚಾಡಿಕೊಂಡಿದ್ದಾರೆ. ಈ ವಿಡಿಯೋ ಈಗ ಸಿಕ್ಕಾಪಟ್ಟೆ ವೈರಲ್ ಆಗಿದೆ.

ರಾಹುಲ್ ಮತ್ತು ಪ್ರಿಯಾಂಕಾ ತಮಾಷೆಯಾಗಿ ಪರಸ್ಪರ ಹಿಮದ ಉಂಡೆಯನ್ನು ಎಸೆದಾಡಿಕೊಂಡಿದ್ದಾರೆ.  ಕಾಂಗ್ರೆಸ್ ಕಾರ್ಯಕರ್ತರು ನೋಡುತ್ತಿರುವಂತೆ ರಾಹುಲ್, ಪ್ರಿಯಾಂಕಾ ಅವರ ತಲೆಯ ಮೇಲೆ ಹಿಮ ಹಾಕಿದ್ದಾರೆ. ಪ್ರಿಯಾಂಕಾ ಕೂಡ ತನ್ನ ಸಹೋದರನೊಂದಿಗೆ ತಮಾಷೆಯಾಗಿ ಜಗಳ ಮಾಡಿದ್ದಾರೆ. ರಾಹುಲ್ ಗಾಂಧಿ ತೋಳುಗಳನ್ನು ಹಿಂದಕ್ಕೆ ಹಿಡಿದುಕೊಂಡು ಅವರ ತಲೆಯ ಮೇಲೆ ಸ್ನೋಬಾಲ್‌ಗಳನ್ನು ಎಸೆದಿದ್ದಾರೆ.

suddiyaana