116 ನೇ ದಿನ ಪೂರೈಸಿದ ಭಾರತ್ ಜೋಡೋ ಯಾತ್ರೆ – ಹರಿಯಾಣದಲ್ಲಿ ರಾಹುಲ್ ಗಾಂಧಿ ಹವಾ

116 ನೇ ದಿನ ಪೂರೈಸಿದ ಭಾರತ್ ಜೋಡೋ ಯಾತ್ರೆ – ಹರಿಯಾಣದಲ್ಲಿ ರಾಹುಲ್ ಗಾಂಧಿ ಹವಾ

ನವದೆಹಲಿ: ದಟ್ಟ ಮಂಜು ಕವಿದು ಕತ್ತಲೆಯ ವಾತಾವರಣವಿದ್ದರೂ ಕೂಡ ಭಾರತ್ ಜೋಡೋ ಯಾತ್ರೆ ಮುಂದುವರಿದಿದೆ. ಇಂದು ಹರಿಯಾಣದ ಅಂಬಾಲದಲ್ಲಿ ಯಾತ್ರೆ ಬೆಳಗ್ಗೆಯೇ ಆರಂಭವಾಗಿದೆ.

ಇದನ್ನೂ ಓದಿ: ಚಳಿಗೆ ಉತ್ತರ ಭಾರತ ತತ್ತರ – ಹೇಗಿದೆ ಇಂದು ದೆಹಲಿಯ ಪರಿಸ್ಥಿತಿ?

ಈ ಕುರಿತು ಪಕ್ಷದ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಅವರು ಟ್ವೀಟ್ ಮಾಡಿದ್ದು, ‘116ನೇ ದಿನ ಪೂರೈಸಿರುವ ಭಾರತ್ ಜೋಡೋ ಯಾತ್ರೆಯು ಅಂಬಾಲಾದಲ್ಲಿ ಹರಿಯಾಣದ ಯಾತ್ರೆಯನ್ನು ಪೂರ್ಣಗೊಳಿಸಲಿದೆ. ನಾಳೆ ಬೆಳಿಗ್ಗೆ ಪಂಜಾಬ್ ಅನ್ನು ಪ್ರವೇಶಿಸಲಿದೆ. ಪಂಜಾಬ್ ನಲ್ಲಿ ಯಾತ್ರೆ ನಡೆಸುವ ಮುನ್ನ ಪವಿತ್ರ ಗೋಲ್ಡನ್ ಟೆಂಪಲ್‌ಗೆ ರಾಹುಲ್ ಗಾಂಧಿ ಭೇಟಿ ನೀಡಲಿದ್ದಾರೆ ಎಂದು ಹೇಳಿದ್ದಾರೆ.

ಪವಿತ್ರ ಗೋಲ್ಡನ್ ಟೆಂಪಲ್‌ ನಲ್ಲಿ, ಪೂಜೆ ಸಲ್ಲಿಸಿದ ನಂತರ ರಾಹುಲ್ ಗಾಂಧಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಎಂದು ಜೈರಾಮ್ ರಮೇಶ್ ಹೇಳಿದರು.

ಸೆಪ್ಟೆಂಬರ್ 7 ರಂದು ತಮಿಳುನಾಡಿನ ಕನ್ಯಾಕುಮಾರಿಯಿಂದ ಪ್ರಾರಂಭವಾದ ಯಾತ್ರೆಯು ಜನವರಿ 30 ರಂದು ಶ್ರೀನಗರದಲ್ಲಿ ರಾಷ್ಟ್ರಧ್ವಜಾರೋಹಣದೊಂದಿಗೆ ಕೊನೆಗೊಳ್ಳಲಿದೆ.

suddiyaana