ರೈಲು ನಿಲ್ದಾಣದಲ್ಲಿ ಹಮಾಲಿಗಳ ಸಮಸ್ಯೆ ಆಲಿಸಿದ ರಾಹುಲ್ ಗಾಂಧಿ – ಕೆಂಪು ಅಂಗಿ ಧರಿಸಿ ಸೂಟ್‌ಕೇಸ್ ಹೊತ್ತು ಸಾಗಿದ್ದಕ್ಕೆ ಬಿಜೆಪಿಯಿಂದ ಟ್ರೋಲ್

ರೈಲು ನಿಲ್ದಾಣದಲ್ಲಿ ಹಮಾಲಿಗಳ ಸಮಸ್ಯೆ ಆಲಿಸಿದ ರಾಹುಲ್ ಗಾಂಧಿ – ಕೆಂಪು ಅಂಗಿ ಧರಿಸಿ ಸೂಟ್‌ಕೇಸ್ ಹೊತ್ತು ಸಾಗಿದ್ದಕ್ಕೆ ಬಿಜೆಪಿಯಿಂದ ಟ್ರೋಲ್

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಗುರುವಾರ ನವದೆಹಲಿಯ ಆನಂದ್ ವಿಹಾರ್ ರೈಲು ನಿಲ್ದಾಣಕ್ಕೆ ಆಗಮಿಸಿ ಹಮಾಲರನ್ನು ಭೇಟಿ ಮಾಡಿದರು. ರೈಲ್ವೇ ನಿಲ್ದಾಣದಲ್ಲಿ ಕೂಲಿಗಳಂತೆ ಕೆಂಪು ಬಟ್ಟೆ ಧರಿಸಿ ಅವರ ಸಮಸ್ಯೆಗಳನ್ನು ಆಲಿಸಿದರು. ಜೊತೆಗೆ ತಲೆ ಮೇಲೆ ಸೂಟ್‌ಕೇಸ್ ಹೊತ್ತು ನಡೆದಿದ್ದಾರೆ. ಇಲ್ಲಿ ರಾಹುಲ್ ಗಾಂಧಿ ಹೋಗಿದ್ದು ರೈಲ್ವೇ ನಿಲ್ದಾಣದಲ್ಲಿರುವ ಕೂಲಿಗಳನ್ನು ಮಾತನಾಡಿಸಲು. ಆದರೆ, ಇದನ್ನೇ ಕೆಲವರು ಟ್ರೋಲ್ ಮಾಡಿದ್ದಾರೆ.

ಇದನ್ನೂ ಓದಿ: ಕಾವೇರಿ ನದಿ ನೀರು ವಿಚಾರವಾಗಿ ಕರ್ನಾಟಕಕ್ಕೆ ಬಿಗ್ ಶಾಕ್ – 15 ದಿನ 5 ಸಾವಿರ ಕ್ಯೂಸೆಕ್ ನೀರು ಹರಿಸುವಂತೆ ಆದೇಶ

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ರೈಲ್ವೇ ನಿಲ್ದಾಣದಲ್ಲಿ ಹಮಾಲಿಗಳ ಜೊತೆ ಕೆಲಹೊತ್ತು ಮಾತುಕತೆ ನಡೆಸಿದರು. ಈ ಸಂದರ್ಭದಲ್ಲಿ ಹಮಾಲಿಗಳ ಸಮಸ್ಯೆಗಳನ್ನು ಆಲಿಸಿದರು. ರೈಲ್ವೇ ನಿಲ್ದಾಣದ ಸ್ಥಿತಿಗತಿಗಳ ಬಗ್ಗೆ ಕೂಲಿ ಮಾಡುತ್ತಿರುವ ಒಬ್ಬರು ನೋವು ಹಂಚಿಕೊಂಡಿದ್ದರು. ಜೊತೆಗೆ ರಾಹುಲ್ ಗಾಂಧಿಯವರನ್ನು ಭೇಟಿ ಮಾಡುವ ಇಂಗಿತ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿ, ಆನಂದ್ ವಿಹಾರ್ ರೈಲೇ ನಿಲ್ದಾಣದಲ್ಲಿ ಅವರನ್ನು ಭೇಟಿ ಮಾಡಿ ಅವರ ಸಮಸ್ಯೆಯನ್ನು ಆಲಿಸಿದ್ದರು. ಜೊತೆಗೆ ತಾನೂ ಕೂಡಾ ಕೆಂಪು ಬಣ್ಣದ ಅಂಗಿ ಧರಿಸಿ ಕೂಲಿಯಾಗಿ ಕೆಲಸ ಮಾಡಿ ಗಮನ ಸೆಳೆದಿದ್ದಾರೆ. ಹಮಾಲಿ ಕಾರ್ಮಿಕರಂತೆ ಕೆಂಪು ಉಡುಪು ಧರಿಸಿ ಸೂಟ್‌ಕೇಸ್ ಹೊತ್ತು ರಾಹುಲ್ ಗಾಂಧಿ ನಡೆದಿದ್ದಾರೆ.

ಆದರೆ. ರಾಹುಲ್ ಗಾಂಧಿ ಸೂಟ್ ಕೇಸ್ ಹೊತ್ತು ಸಾಗುವ ಫೋಟೋ ಒಂದನ್ನು ಇಟ್ಟುಕೊಂಡು ಕೆಲವರು ಟ್ರೋಲ್ ಮಾಡುತ್ತಿದ್ದಾರೆ. ಸೂಟ್‌ಕೇಸ್‌ಗೆ ಚಕ್ರಗಳಿವೆ. ಎಳೆದುಕೊಂಡೇ ಹೊಗಬಹುದಲ್ವಾ ಎಂಬ ಪ್ರಶ್ನೆ ಟ್ರೆಂಡ್ ಆಗುತ್ತಿದೆ.

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸಾಮಾನ್ಯ ಜನರ ಜೊತೆ ಬೆರೆಯುವುದು ಇದೇ ಮೊದಲಲ್ಲ. ಈ ಹಿಂದೆ ಟ್ರಕ್ ಚಾಲಕರ ಜೊತೆ ತೆರಳಿ ಅವರ ಸಮಸ್ಯೆಗಳನ್ನು ಆಲಿಸಿದ್ದರು. ಡೆಲಿವರಿ ಬಾಯ್‌ಗಳ ಜೊತೆಯೂ ಚರ್ಚೆ ಮಾಡಿದ್ದರು. ಇದೀಗ ರೈಲು ನಿಲ್ದಾಣದಲ್ಲಿ ಕೆಲಸ ಮಾಡುವ ಹಮಾಲಿ ಕಾರ್ಮಿಕರ ಬಳಿ ತೆರಳಿ ಅವರಂತೆ ಉಡುಪು ಧರಿಸಿ ಸೂಟ್ ಕೇಸ್ ಹೊತ್ತೊಯ್ಯುವ ಮೂಲಕ ಅವರ ಸಮಸ್ಯೆಯನ್ನೂ ಆಲಿಸಿದ್ದಾರೆ. ಆದರೆ, ಬಿಜೆಪಿ ಮಾತ್ರ ರೈಲ್ವೇ ನಿಲ್ದಾಣದಲ್ಲಿರುವ ಸೂಟ್‌ಕೇಸ್ ಹೊತ್ತು ಸಾಗುತ್ತಿರುವ ರಾಹುಲ್ ಗಾಂಧಿ ಫೋಟೋವನ್ನು ಟ್ರೋಲ್ ಮಾಡುತ್ತಾ ತಿರುಗೇಟು ನೀಡಿದೆ. ಸೂಟ್‌ಕೇಸ್‌ನಲ್ಲಿ ಚಕ್ರವಿದೆ. ಆದರೂ ಹೊತ್ತು ಯಾಕೆ ನಡೆಯುತ್ತಿದ್ದೀರಿ. ನೈಜತೆ ಇಲ್ಲ, ಇದು ಕೇವಲ ನಾಟಕ ಎಂದು ಹಲವರು ಕಮೆಂಟ್ ಮಾಡಿದ್ದಾರೆ. ಹೋರಾಟ, ಕಾರ್ಯಕ್ರಮದಲ್ಲಿ ಭಿನ್ನತೆಗಿಂತ ನೈಜತೆ ಇರಲಿ ಎಂದು ಹಲವರು ಕಮೆಂಟ್ ಮಾಡಿದ್ದಾರೆ.

Sulekha