ಹಳ್ಳಿಹೈದನಾದ ರಾಹುಲ್‌ ಗಾಂಧಿ! – ಟ್ರ್ಯಾಕ್ಟರ್‌ನಲ್ಲಿ ಗದ್ದೆ ಉಳುಮೆ ಮಾಡಿ ಭತ್ತ ನಾಟಿ

ಹಳ್ಳಿಹೈದನಾದ ರಾಹುಲ್‌ ಗಾಂಧಿ! – ಟ್ರ್ಯಾಕ್ಟರ್‌ನಲ್ಲಿ ಗದ್ದೆ ಉಳುಮೆ ಮಾಡಿ ಭತ್ತ ನಾಟಿ

ಚಂಡೀಗಢ: ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಬೆಳ್ಳಂಬೆಳಗ್ಗೆ ಹಳ್ಳಿಹೈದನಾಗಿ ಕಾಣಿಸಿಕೊಂಡಿದ್ದಾರೆ. ಹರಿಯಾಣದ ಸೋನಿಪತ್‌ನ ಮದೀನಾ ಗ್ರಾಮಕ್ಕೆ ಭೇಟಿ ನೀಡಿದ್ದ ರಾಹುಲ್‌ ಗಾಂಧಿ ರೈತರೊಂದಿಗೆ ಗದ್ದೆಗಿಳಿದು ಭತ್ತದ ನಾಟಿ ಮಾಡಿದ್ದಾರೆ. ರಾಹುಲ್‌ ಗಾಂಧಿಯ ಸರಳ ವ್ಯಕ್ತಿತ್ವಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಇದನ್ನೂ ಓದಿ: ಪಿಜ್ಜಾ, ಬರ್ಗರ್‌ ಪ್ರಿಯರಿಗೆ ಕಹಿ ಸುದ್ದಿ – ಮೆಕ್‌ಡೊನಾಲ್ಡ್ಸ್ ಇನ್ನು ಮುಂದೆ ಈ ತರಕಾರಿ ಬಳಸಲ್ಲ!

ದೇಶದ ಹಲವು ಭಾಗಗಳಲ್ಲಿ ಈಗಾಗಲೇ ಮಳೆಗಾಲ ಆರಂಭವಾಗಿದ್ದು, ಕೃಷಿ ಚಟುವಟಿಕೆ ಗರಿಗೆದರಿದೆ. ರೈತರು ಪ್ರಾದೇಶಿಕ ಬೆಳೆಗಳನ್ನ ಬೆಳೆಯಲು ಶುರು ಮಾಡಿದ್ದಾರೆ. ಶನಿವಾರ ಬೆಳ್ಳಂಬೆಳಗ್ಗೆ ರಾಹುಲ್‌ ಗಾಂಧಿ ಹಿಮಾಚಲ ಪ್ರದೇಶಕ್ಕೆ ಹೋಗುತ್ತಿದ್ದ ವೇಳೆ ಭತ್ತದ ಗದ್ದೆಯಲ್ಲಿ ರೈತರು ನಾಟಿ ಮಾಡುತ್ತಿರುವುದನ್ನು ಕಂಡಿದ್ದಾರೆ. ಈ ವೇಳೆ ಕಾರು ನಿಲ್ಲಿಸಿ, ಹಳ್ಳಿ ಹುಡುಗನಂತೆ ಮೊಣಕಾಲುದ್ದಕ್ಕೆ ಪ್ಯಾಂಟ್‌ ಮಡಿಸಿಕೊಂಡು ರೈತರೊಂದಿಗೆ ಗದ್ದೆಗಿಳಿದು ಅವರಿಗೆ ನಾಟಿ ಮಾಡಲು ಸಹಾಯ ಮಾಡಿದ್ದಾರೆ.

ರಾಹುಲ್‌ ಗಾಂಧಿ ಗದ್ದೆಯಲ್ಲಿ ನಾಟಿ ಮಾಡಲು ಪ್ರಾರಂಭಿಸುತ್ತಿದ್ದಂತೆ ಕಾಂಗ್ರೆಸ್‌ ಮುಖಂಡರೂ ಸಹ ರೈತರೊಂದಿಗೆ ಸೇರಿಕೊಂಡು ಟ್ರ್ಯಾಕ್ಟರ್‌ ಮೂಲಕ ಗದ್ದೆ ಉಳುಮೆ ಮಾಡಿ ಭತ್ತದ ನಾಟಿಗೆ ಸಹಕರಿಸಿದ್ದಾರೆ. ಬಳಿಕ ರೈತರೊಂದಿಗೆ ಸಂವಾದ ನಡೆಸಿ, ಕಷ್ಟ ಸುಖಗಳನ್ನ ವಿಚಾರಿಸಿದ್ದಾರೆ.

2024ರ ಲೋಕಸಭೆ ಚುನಾವಣೆ ಹಿನ್ನೆಲೆಯ ಭರ್ಜರಿ ಚುನಾವಣಾ ಪ್ರಚಾರ ಕಾರ್ಯದಲ್ಲಿ ತೊಡಗಿರುವ ರಾಹುಲ್‌ ಗಾಂಧಿ ಸಮಾಜದ ಎಲ್ಲ ಹಂತದ ಜನರನ್ನ ಭೇಟಿಯಾಗುತ್ತಿದ್ದಾರೆ. ಇತ್ತೀಚೆಗಷ್ಟೇ ದೆಹಲಿಯ ಕರೋಲ್ ಬಾಗ್ ಪ್ರದೇಶದಲ್ಲಿ ಬೈಕ್ ಮೆಕ್ಯಾನಿಕ್ ಕಾರ್ಯಾಗಾರಕ್ಕೆ ಭೇಟಿ ನೀಡಿದ್ದರು. ವರ್ಕ್‌ಶಾಪ್‌ನಲ್ಲಿ ಮೆಕ್ಯಾನಿಕ್‌ಗಳೊಂದಿಗೆ ಸಂಭಾಷಣೆ ನಡೆಸಿದ್ದರು. ಈ ವೇಳೆ ಮೋಟಾರ್‌ ಸೈಕಲ್‌ಗಳನ್ನು ರಿಪೇರಿ ಮಾಡೋದನ್ನ ಪ್ರಯತ್ನಿಸಿದ್ದರು. ಕರ್ನಾಟಕದಲ್ಲೂ ರಾಹುಲ್‌ ಗಾಂಧಿ ಬಸ್ಸಿನಲ್ಲಿ ಕುಳಿತು ಮಹಿಳಾ ಪ್ರಯಾಣಿಕರೊಂದಿಗೆ, ವಿದ್ಯಾರ್ಥಿಗಳೊಂದಿಗೆ ಹಾಗೂ ಸ್ವಿಗ್ಗಿ ಡೆಲಿವರಿ ಬಾಯ್ಸ್‌ಗಳೊಂದಿಗೆ ಸಂವಾದ ನಡೆಸಿ ವಿವಿಧ ವಿಷಯಗಳ ಬಗ್ಗೆ ಚರ್ಚಿಸಿದ್ದರು.

suddiyaana