ತಾಯಿಗೆ ಸರ್ಪ್ರೈಸ್ ಗಿಫ್ಟ್‌ ನೀಡಿದ ರಾಹುಲ್‌ ಗಾಂಧಿ! – ಮಗ ಕೊಟ್ಟ ಉಡುಗೊರೆ ನೋಡಿ ಸೋನಿಯಾ ಗಾಂಧಿ ಭಾವುಕ!  

ತಾಯಿಗೆ ಸರ್ಪ್ರೈಸ್ ಗಿಫ್ಟ್‌ ನೀಡಿದ ರಾಹುಲ್‌ ಗಾಂಧಿ! – ಮಗ ಕೊಟ್ಟ ಉಡುಗೊರೆ ನೋಡಿ ಸೋನಿಯಾ ಗಾಂಧಿ ಭಾವುಕ!  

ನವದೆಹಲಿ: ಕಾಂಗ್ರೆಸ್‌ ನಾಯಕ, ಸಂಸದ ರಾಹುಲ್‌ ಗಾಂಧಿ ಅವರು ತಮ್ಮ ತಾಯಿ ಸೋನಿಯಾ ಗಾಂಧಿಗೆ ಸರ್ಪ್ರೈಸ್ ಉಡುಗೊರೆ ನೀಡಿದ್ದಾರೆ. ಸೋನಿಯಾ ಗಾಂಧಿಗೆ ಮುದ್ದಾದ ನಾಯಿಮರಿಯನ್ನು ರಾಗಾ ಉಡುಗೊರೆಯಾಗಿ ಕೊಟ್ಟಿದ್ದಾರೆ.

ರಾಹುಲ್​ ಗೋವಾ ಪ್ರವಾಸವು ಆಗಸ್ಟ್‌ನಲ್ಲಿ ನಡೆದಿತ್ತು. ಆಗ ಕುಟುಂಬವೊಂದನ್ನು ಭೇಟಿಯಾಗಿದ್ದರು. ಜ್ಯಾಕ್ ರಸೆಲ್ ಟೆರಿಯರ್‌ ತಳಿಯ ನಾಯಿ ಅವರ ಬಳಿ ಇದ್ದುದು ಗೊತ್ತಾಗಿ ಅದರ ಮರಿಯನ್ನು ದೆಹಲಿಗೆ ತರಿಸಿಕೊಂಡಿದ್ದಾರೆ. ಇದೀಗ ಈ ನಾಯಿ ಮರಿಯನ್ನು ತಾಯಿ ಸೋನಿಯಾ ಗಾಂಧಿಗೆ ಉಡುಗೊರೆಯಾಗಿ ನೀಡಿದ್ದಾರೆ. ರಾಹುಲ್ ಗಾಂಧಿ ಉಡುಗೊರೆ ಪಡೆದ ಸೋನಿಯಾ ಗಾಂಧಿ ಭಾವುಕರಾಗಿದ್ದಾರೆ.

ಇದನ್ನೂ ಓದಿ: ಏಷ್ಯನ್ ಗೇಮ್ಸ್ ನಲ್ಲಿ 71 ಪದಕ ಗೆದ್ದ ಭಾರತ – 2018ರ ದಾಖಲೆ ಮುರಿದು ಭಾರತೀಯ ಸ್ಪರ್ಧಿಗಳ ನಾಗಾಲೋಟ

ರಾಹುಲ್‌ ಗಾಂಧಿ ತಮ್ಮ ಮನೆಯ ಹೊಸ ಸದಸ್ಯ ನೂರಿಯನ್ನು ಜಗತ್ತಿಗೆ ಪರಿಚಯಿಸಿದ್ದಾರೆ. ಸೋನಿಯಾಗಾಂಧಿ ನೂರಿಯನ್ನು ಮಗುವಿನಂತೆ ಎತ್ತಿಕೊಂಡಿರುವುದು ವೀಡಿಯೋದಲ್ಲಿ ಕಂಡುಬಂದಿದೆ. ಗೋವಾ ಮೂಲದ ನಾಯಿ ಸಾಕಣೆದಾರರಾದ ಶರ್ವಾಣಿ ಪಿತ್ರೆ ಮತ್ತು ಪತಿ ಸ್ಟಾನ್ಲಿ ಬ್ರಗಾಂಕಾ ಅವರಿಂದ ಈ ನಾಯಿಮರಿಯನ್ನು ರಾಹುಲ್​ ಪಡೆದುಕೊಂಡಿದ್ದಾರೆ.

Shwetha M