ರಾಹುಲ್‌ ಗಾಂಧಿ ಮದುವೆ ಯಾವಾಗ? – ಕೊನೆಗೂ ಸಿಕ್ಕೇ ಬಿಡ್ತು ಉತ್ತರ!

ರಾಹುಲ್‌ ಗಾಂಧಿ ಮದುವೆ ಯಾವಾಗ? – ಕೊನೆಗೂ ಸಿಕ್ಕೇ ಬಿಡ್ತು ಉತ್ತರ!

ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಉತ್ತರ ಪ್ರದೇಶದ ರಾಯ್‌ ಬರೇಲಿ ಕ್ಷೇತ್ರದಿಂದ ಲೋಕಸಭೆ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ. ಸದ್ಯ ಪ್ರಚಾರದಲ್ಲಿ ರಾಹುಲ್‌ ಗಾಂಧಿ ಬ್ಯೂಸಿಯಾಗಿದ್ದು, ತಮ್ಮ ಕ್ಷೇತ್ರಲ್ಲಿ ರ್ಯಾಲಿ, ಸಭೆಗಳನ್ನು ನಡೆಸುತ್ತಿದ್ದಾರೆ. ಸೋಮವಾರ ತಮ್ಮ ಕ್ಷೇತ್ರದಲ್ಲಿ ರಾಹುಲ್‌ ಗಾಂಧಿ ಪ್ರಚಾರ ನಡೆಸಿದ್ದು, ತಮ್ಮ ಮದುವೆ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ಓದಿ: ಎಲೆಕ್ಷನ್ ಬಳಿಕ ರಾಜ್ಯ ಸರ್ಕಾರ ಪತನ? – ಕರ್ನಾಟಕದಲ್ಲಿ ನಡೆಯುತ್ತಾ ಮಹಾರಾಷ್ಟ್ರ ಮಾದರಿಯ ಆಪರೇಷನ್‌ ನಾಥ?

ರಾಯ್‌ ಬರೇಲಿ ಕ್ಷೇತ್ರದಲ್ಲಿ ರಾಹುಲ್‌ ಗಾಂಧಿ ಭರ್ಜರಿ ಪ್ರಚಾರ ನಡೆಸುತ್ತಿದ್ದಾರೆ. ಸೋಮವಾರ ರ್ಯಾಲಿಯಲ್ಲಿ ಭಾವನಾತ್ಮಕ ಭಾಷಣ ಮಾಡಿದರು. ಈ ವೇಳೆ ಕೆಲವೊಂದು ವಿಚಾರದ ಬಗ್ಗೆ ಗಂಭೀರವಾಗಿ ಧ್ವನಿಯೆತ್ತಿದ್ದಾರೆ. ಅವರ ಭಾಷಣದ ಕೊನೆಯಲ್ಲಿ ಸಾರ್ವಜನಿಕರು ಅವರ ವೈವಾಹಿಕ ಜೀವನದ ಬಗ್ಗೆ ಕೇಳಿದ್ದಾರೆ. ನೀವು ಯಾವಾಗ ಮದುವೆಯಾಗುತ್ತೀರಿ ಎಂದು ನೆರೆದಿದ್ದ ಜನ ಕೇಳಿದ್ದಾರೆ. ಇದಕ್ಕೆ ನಗುತ್ತಲೇ ಪ್ರತಿಕ್ರಿಯಿಸಿದ ರಾಗಾ, ಈಗ ನಾನು ಶೀಘ್ರದಲ್ಲೇ ಮದುವೆಯಾಗಬೇಕಾಗಿದೆ ಎಂದು ಹೇಳಿ ವೇದಿಕೆಯಿಂದ ತೆರಳಿದರು.

ರಾಯ್ ಬರೇಲಿಯಲ್ಲಿ ನಡೆದ ರ್‍ಯಾಲಿಯಲ್ಲಿ ಸಹೋದರಿ ಮತ್ತು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಕೂಡ ಉಪಸ್ಥಿತರಿದ್ದರು . ಮೇ 3 ರಂದು ರಾಯ್ ಬರೇಲಿಯಿಂದ ರಾಹುಲ್ ಗಾಂಧಿ ಮತ್ತು ಅಮೇಥಿಯಿಂದ ಕೆಎಲ್ ಶರ್ಮಾ ಅಭ್ಯರ್ಥಿ ಎಂದು ಕಾಂಗ್ರೆಸ್‌ ಘೋಷಣೆ ಮಾಡಿತ್ತು. ಈ ಮೂಲಕ ಪ್ರಿಯಾಂಕಾ ಗಾಂಧಿ ಮತ್ತು ರಾಬರ್ಟ್ ವಾದ್ರಾ ಅವರನ್ನು ಪಕ್ಷ ಚುನಾವಣಾ ಸ್ಪರ್ಧೆಯಿಂದ ದೂರವಿಟ್ಟಿತು.

Shwetha M

Leave a Reply

Your email address will not be published. Required fields are marked *