ಭಾರತ್ ಜೋಡೋ ಯಾತ್ರೆ – ಕೊರೆಯುವ ಚಳಿ ಮಧ್ಯೆ ರಾಹುಲ್ ಗಾಂಧಿ ಹೆಜ್ಜೆ

ಭಾರತ್ ಜೋಡೋ ಯಾತ್ರೆ – ಕೊರೆಯುವ ಚಳಿ ಮಧ್ಯೆ ರಾಹುಲ್ ಗಾಂಧಿ ಹೆಜ್ಜೆ

ನವದೆಹಲಿ: ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆ ಶನಿವಾರ ಬೆಳಗ್ಗೆ ಹರಿಯಾಣದ ಕರ್ನಾಲ್‌ನ ಘರೋಂಡಾದಿಂದ ಪುನರಾರಂಭವಾಗಿದೆ.

ಮೈ ಕೊರೆಯುವ ಚಳಿಯ ನಡುವೆಯೂ ತ್ರಿವರ್ಣ ಧ್ವಜವನ್ನು ಹೊತ್ತ ನೂರಾರು ಜನರು ರಾಹುಲ್ ಗಾಂಧಿ ಜೊತೆಗೆ ಹೆಜ್ಜೆ ಹಾಕುತ್ತಿದ್ದಾರೆ. ಇಂದು ಯಾತ್ರೆಯು ಘರೋಂಡಾ, ಮಧುಬನ್ ಮೂಲಕ ಹಾದು ಹೋಗಿ, ಜಿಲ್ಲೆಯ ಉಚ್ಚಾನಾದಲ್ಲಿ ಅಂತ್ಯವಾಗಲಿದೆ.

ಇದನ್ನೂ ಓದಿ: ಅಮೆರಿಕ ಕನಸಿಗೆ ಕತ್ತರಿ ಹಾಕುತ್ತಾ ಬೈಡನ್ ಸರ್ಕಾರ? – ಹೆಚ್ – 1 ಬಿ ವೀಸಾ ಶುಲ್ಕ ದಿಢೀರ್ ಏರಿಕೆ

ಸೆಪ್ಟೆಂಬರ್ 7 ರಂದು ಕನ್ಯಾಕುಮಾರಿಯಿಂದ ಆರಂಭವಾದ ಭಾರತ್ ಜೋಡೋ ಯಾತ್ರೆ ಇಂದು ಹರಿಯಾಣದ ಕರ್ನಾಲ್‌ನ ಘರೋಂಡಾದಿಂದ ಪುನಾರಾಂಭವಾಗಿದೆ. ಅಲ್ಲದೇ ಈ ಯಾತ್ರೆ ಜನವರಿ 10 ರಂದು ಪಂಜಾಬ್‌ನತ್ತ ಸಾಗಲಿದೆ. ಜನವರಿ 30 ರಂದು ಶ್ರೀನಗರದಲ್ಲಿ ಗಾಂಧಿ ರಾಷ್ಟ್ರಧ್ವಜಾರೋಹಣದೊಂದಿಗೆ ಮುಕ್ತಾಯಗೊಳ್ಳಲಿದೆ.

ದಕ್ಷಿಣದ ರಾಜ್ಯದಿಂದ ಪ್ರಾರಂಭವಾದ ಪಾದಯಾತ್ರೆ ಸೆಪ್ಟೆಂಬರ್ 7 ರಂದು ಕನ್ಯಾಕುಮಾರಿಯಿಂದ ಹೊರಟು ತಮಿಳುನಾಡು, ಕೇರಳ, ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ, ಮಧ್ಯಪ್ರದೇಶ, ರಾಜಸ್ಥಾನ, ಮಹಾರಾಷ್ಟ್ರ ಹಾಗೂ ಹರಿಯಾಣದಲ್ಲಿ ಸಂಚರಿಸಿದ್ದು, ಜಮ್ಮು ಕಾಶ್ಮೀರದಲ್ಲಿ ಯಾತ್ರೆ ಅಂತ್ಯಗೊಳ್ಳಲಿದೆ.

suddiyaana