ಕಾಮನ್ ಸೆನ್ಸ್ ಇಲ್ಲ, ಯಾರೋ ಹೇಳಿದ್ದು ಕೇಳ್ತಾರೆ – ರಾಹುಲ್ ಗಾಂಧಿ ಮತಕಳ್ಳತನ ಆರೋಪಕ್ಕೆ ಆರ್.ಅಶೋಕ್ ತಿರುಗೇಟು –

ಕಾಮನ್ ಸೆನ್ಸ್ ಇಲ್ಲ, ಯಾರೋ ಹೇಳಿದ್ದು ಕೇಳ್ತಾರೆ –  ರಾಹುಲ್ ಗಾಂಧಿ ಮತಕಳ್ಳತನ ಆರೋಪಕ್ಕೆ ಆರ್.ಅಶೋಕ್ ತಿರುಗೇಟು –

ಕಲಬುರಗಿ ಜಿಲ್ಲೆಯ ಆಳಂದದಲ್ಲಿ ಮತಕಳ್ಳತನದ ಬಗ್ಗೆ ಲೋಕಸಭೆ ವಿರೋಧ ಪಕ್ಷದ ನಾಯಕ ಆರ್ ಆಶೋಕ್ ಮಾತನಾಡಿದ್ದಾರೆ.  ರಾಹುಲ್ ಗಾಂಧಿ ಮಾಡಿರುವ ಆರೋಪದಲ್ಲಿ ಹುರಳಿಲ್ಲ. ಯಾರೋ ಬರೆದುಕೊಟ್ಟಿದ್ದನ್ನು ರಾಹುಲ್ ಗಾಂಧಿ ಓದಿದ್ದಾರೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್ ಅಶೋಕ್ ವಾಗ್ದಾಳಿ ನಡೆಸಿದ್ದಾರೆ.  ರಾಹುಲ್ ಗಾಂಧಿ ಕಾಮನ್ ಸೆನ್ಸ್ ಇಲ್ಲ. ಯಾರೋ ಬರೆದುಕೊಟ್ಟಿದ್ದನ್ನು ಬಂದು ಓದಿ ಹೇಳ್ತಾರೆ. ದೇಶದಲ್ಲಿ ಅತೀಹೆಚ್ಚು ಅಪಹಾಸ್ಯಕ್ಕೆ ರಾಹುಲ್ ಈಡಾಗಿದ್ದಾರೆ. ಇತ್ತೀಚೆಗೆ ಮಹಾದೇವಪುರದಲ್ಲಿ ಮತ ಅಕ್ರಮ ಅಂತ ಆರೋಪ ಮಾಡಿದ್ರು. ಅವರ ಆರೋಪ ಸುಳ್ಳಾಯ್ತು, ಬೋಗಸ್ ಆಯ್ತು. ಈಗ ಆಳಂದ ಕ್ಷೇತ್ರ ಹಿಡಿದುಕೊಂಡಿದ್ದಾರೆ ಎಂದು ಕಿಡಿಕಾರಿದರು.

ಇದನ್ನೂ ಓದಿ:ಕಳಪೆ ಬ್ಯಾಟ್‌, ಕಳಪೆ ಕ್ರಿಕೆಟ್‌ ಕಿಟ್ – ಪಾಕ್ ಕ್ರಿಕೆಟ್ ಮಂಡಳಿ ವಿರುದ್ಧ ಭ್ರಷ್ಟಚಾರ ಆರೋಪ

ಬಿಹಾರದಲ್ಲಿ ಸೋಲುವ ಹತಾಶೆ ರಾಹುಲ್ ಗಾಂಧಿಗೆ ಶುರುವಾಗಿದೆ . ಇದುವರೆಗೆ ಅವರು ಸಿಡಿಸಿದ ಪಟಾಕಿಗಳು ಠುಸ್ ಆಗಿದೆ. ಚುನಾವಣಾ ಆಯೋಗ 45 ಗಂಟೆಗಳ ಸಮಯಾವಕಾಶ ಕೊಟ್ಟಿರುತ್ತೆ. ಆಗೇನು ಮಾಡ್ತಿದ್ರು ಕಾಂಗ್ರೆಸ್‌ನವ್ರು? ಮತ ಅಕ್ರಮಕ್ಕೆ ದಾಖಲೆ ಇದ್ದಿದ್ರೆ ಯಾಕೆ ಆಕ್ಷೇಪಣೆ ಸಲ್ಲಿಸಲಿಲ್ಲ? ಇದಕ್ಕೆ ಉತ್ತರ ಕೊಡಿ ಎಂದು ಸವಾಲು ಹಾಕಿದರು. ಬಿಜೆಪಿಯನ್ನು, ಚುನಾವಣಾ ಆಯೋಗವನ್ನು ತಪ್ಪಿತಸ್ಥ ಸ್ಥಾನದಲ್ಲಿ ನಿಲ್ಲಿಸಬೇಕು. ಇದೊಂದೇ ಕಾಂಗ್ರೆಸ್ ಅಜೆಂಡಾ. ಅದಕ್ಕಾಗಿ ಬಾಲಿಷ ಆರೋಪಗಳನ್ನು ಮಾಡ್ತಿದ್ದಾರೆ ಎಂದು ಕಿಡಿಕಾರಿದರು. ಇನ್ನು ರಾಜ್ಯದಲ್ಲೂ ಎಸ್‌ಐಆರ್ ಗೆ ಚುನಾವಣಾ ಆಯೋಗ ನಿರ್ಧಾರ ವಿಚಾರವಾಗಿ, ಹಲವು ಮುಸ್ಲಿಮರು ಎರಡು ಮೂರು ಕಡೆ ಓಟ್ ಇಟ್ಕೊಂಡಿದ್ದಾರೆ. ಇದರ ಜತೆ ಅಕ್ರಮ ಬಾಂಗ್ಲಾ, ಪಾಕಿಸ್ತಾನಿಗಳು ಇಲ್ಲಿ ಓಟ್ ಕಾರ್ಡ್ ಪಡೆದಿದ್ದಾರೆ. ಇವರೆಲ್ಲ ಯಾರು? ಎಂದು ಪ್ರಶ್ನಿಸಿದರು. ಇಲ್ಲಿ ಬಾಂಗ್ಲಾದಿಂದ ಬಂದು ತಳವೂರುತ್ತಿದ್ದಾರೆ. ಇಂತಹ ನಕಲಿ ಮತದಾರರನ್ನು ಪಟ್ಟಿಯಿಂದ ತೆಗೆದು ಹಾಕಲು ಆಯೋಗ ಹೊರಟಿದೆ ಎಂದು ಸಮರ್ಥಿಸಿಕೊಂಡರು. ಕಾಂಗ್ರೆಸ್ ನವ್ರಿಗೆ ಏನು ಕಷ್ಟ? ಒಬ್ಬರಿಗೆ ಒಂದೇ ಓಟ್ ಇರಬೇಕು. ಆಯೋಗದ ತೀರ್ಮಾನಕ್ಕೆ ನಮ್ಮ ಸ್ವಾಗತ ಇದೆ ಎಂದರು.

ಪರಿಷತ್ ಸದಸ್ಯ ಸಿಟಿ ರವಿ ಮಾತನಾಡಿ, ರಾಹುಲ್ ಗಾಂಧಿ ಹಿಟ್ ಅಂಡ್ ರನ್ ಮಾಡಬಾರದು. ತಾವು ಮಾಡಿದ ಆರೋಪಕ್ಕೆ ಅಫಿಡವಿಟ್ ಮೂಲಕ ಆಧಾರ ಸಹಿತ ದೂರು ಸಲ್ಲಿಸಲಿ. ನಿಮಗೆ ಸಂವಿಧಾನಬದ್ಧ ಸಂಸ್ಥೆ ಮೇಲೆ ನಂಬಿಕೆ ಇದ್ರೆ ಆಧಾರಸಹಿತ ದೂರು ಸಲ್ಲಿಸಿ. ಅದು ಬಿಟ್ಟು ಬೀದಿಯಲ್ಲಿ ಮಾತಾಡೋದು ಸರಿಯಲ್ಲ ಎಂದರು. ಒಂದು ಸುಳ್ಳು ಸಾವಿರ ಬಾರಿ ಹೇಳಿದರೆ ಅದೇ ಸತ್ಯ ಆಗುತ್ತೆ ಅಂತ ಗೊಬೆಲ್ ಅನ್ನೋನು ಹೇಳಿದ್ದಾನೆ. ರಾಹುಲ್ ಗಾಂಧಿ ಎಲ್ಲ ದೇವರುಗಳನ್ನು ಆಚೆ ಇಟ್ಟು ಗೊಬೆಲ್ ನನ್ನೇ ಪೂಜೆ ಮಾಡ್ತಿರಬಹುದು. ಇವಿಎಂ ಮೇಲೂ ಅನುಮಾನ, ಚುನಾವಣಾ ಆಯೋಗದ ಮೇಲೂ ಅಪನಂಬಿಕೆ. ಯಾವುದರ ಮೇಲೂ ನಂಬಿಕೆ ಇಲ್ಲ. ಅರಾಜಕತೆ ಸೃಷ್ಟಿಸಲು ರಾಹುಲ್ ಗಾಂಧಿ ಸುಳ್ಳು ಆರೋಪ ಮಾಡ್ತಿದ್ದಾರೆ. ದಾಖಲೆ ಇದ್ದರೆ ಪ್ರಮಾಣಪತ್ರದೊಂದಿಗೆ ದೂರು ಸಲ್ಲಿಸಿ ಎಂದು ಸವಾಲು ಹಾಕಿದರು.

Kishor KV