44,152 ನಿಮಿಷ ಬ್ಯಾಟಿಂಗ್.. 210 ಕ್ಯಾಚ್‌ – ಮುರಿಯಲಾಗದ ರಾಹುಲ್ ದ್ರಾವಿಡ್ ದಾಖಲೆಗಳು

44,152 ನಿಮಿಷ ಬ್ಯಾಟಿಂಗ್.. 210 ಕ್ಯಾಚ್‌ – ಮುರಿಯಲಾಗದ ರಾಹುಲ್ ದ್ರಾವಿಡ್ ದಾಖಲೆಗಳು

ಭಾರತ ತಂಡ ಟೆಸ್ಟ್ ಕ್ರಿಕೆಟ್​ನಲ್ಲಿ ಮೊದಲಬಾರಿಗೆ ಮೊದಲ ಸ್ಥಾನಕ್ಕೇರಿದ ಯಶಸ್ಸಿನ ಹಿಂದೆ ರಾಹುಲ್ ದ್ರಾವಿಡ್ ಪಾತ್ರ ಅತ್ಯಂತ ದೊಡ್ಡದು. ಭಾರತ ಗೆದ್ದ ಪಂದ್ಯಗಳಲ್ಲಿ ರಾಹುಲ್ ದ್ರಾವಿಡ್ ಅವರ ಸರಾಸರಿ ರನ್ನುಗಳ ಸಂಖ್ಯೆ 65ನ್ನು ಮೀರಿದ್ದು. ನಂತರದ ಸ್ಥಾನದಲ್ಲಿ ವಿ.ವಿ.ಎಸ್. ಲಕ್ಷ್ಮಣ್ ಇದ್ರು. ಅವರ ಸರಾಸರಿ 61. ಅದೂ ಅಲ್ದೇ ದ್ರಾವಿಡ್ 18 ಆಟಗಾರರೊಡನೆ 85 ಭಾರೀ ಶತಕದ ಜೊತೆ ಆಟ ಆಡಿರುವುದು ವಿಶ್ವದಾಖಲೆಯಾಗಿದೆ. ಅಲ್ದೇ ರಾಹುಲ್ ದ್ರಾವಿಡ್ ಭಾರತದಲ್ಲಿ ನಡೆದ ಪಂದ್ಯಗಳಲ್ಲಿ ಶೇಖಡಾ 50 ಸರಾಸರಿ ರನ್ನುಗಳನ್ನು ಮಾಡಿದ್ದರೆ ವಿದೇಶದಲ್ಲಿನ ಅವರ ಸರಾಸರಿ ರನ್ನುಗಳು 55ನ್ನು ಮೀರಿದೆ.

ಇದನ್ನೂ ಓದಿ : RCB ಜಿದ್ದಾಜಿದ್ದಿಗೆ ಡೇಟ್ ಫಿಕ್ಸ್ – ಪ್ಲೇಯಿಂಗ್ 11ನಲ್ಲಿ ಯಾರಿಗೆಲ್ಲಾ ಚಾನ್ಸ್?

ಇತ್ತೀಚೆಗೆ ಆಸಿಸ್ ಸರಣಿ ನಡೆದಾಗ ಯಾವೊಬ್ಬ ಬ್ಯಾಟರ್ ಕೂಡ ಅರ್ಧ ಗಂಟೆಗಿಂತ ಜಾಸ್ತಿ ನಿಲ್ತಾನೇ ಇರ್ಲಿಲ್ಲ. ಆದ್ರೆ ದ್ರಾವಿಡ್ ಹಾಗಲ್ಲ. ರನ್ ಬರದೇ ಇದ್ರೂ ವಿಕೆಟ್ ಬೀಳೋಕೆ ಬಿಡ್ತಿರಲಿಲ್ಲ. ಅದ್ರಲ್ಲೂ 2003ರಲ್ಲಿ ಅಡಿಲೈಡ್ ಟೆಸ್ಟ್ ಪಂದ್ಯದಲ್ಲಿ ಭಾರತ ಪ್ರಪ್ರಥಮ ಬಾರಿಗೆ ಜಯಗಳಿಸಿದ ವೇಳೆ ರಾಹುಲ್ ದ್ರಾವಿಡ್ ಎರಡೂ ಇನ್ನಿಂಗ್ಸ್ ಗಳಲ್ಲಿ ಸೇರಿದಂತೆ ಒಟ್ಟು 835 ನಿಮಿಷಗಳ ಬ್ಯಾಟಿಂಗ್ ಮಾಡಿದ್ದರು. ಆನಂತ್ರ ಪಾಕಿಸ್ತಾನದಲ್ಲಿ ಟೆಸ್ಟ್ ಸರಣಿ ವೇಳೆ 270 ರನ್ನುಗಳಿಗಾಗಿ ಭರ್ತಿ 12 ಗಂಟೆಗಳ ಕಾಲ ಬ್ಯಾಟಿಂಗ್ ಮಾಡಿದ್ದರು. ಹೀಗೆ ರಾಹುಲ್ ಮಾಡಿರೋ ಕೆಲ ರೆಕಾರ್ಡ್ಸ್ ಬಗ್ಗೆ ಬ್ರೀಫ್ ಆಗಿ ಹೇಳ್ತೇನೆ ನೋಡಿ.

ದ್ರಾವಿಡ್ ರ ಮುರಿಯಲಾಗದ ದಾಖಲೆಗಳು!

ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಎಸೆತಗಳನ್ನು ಎದುರಿಸಿದ ದಾಖಲೆ – 31258 ಎಸೆತಗಳು

ಟೆಸ್ಟ್‌ ಗಳಲ್ಲಿ ಅತಿ ಹೆಚ್ಚು ನಿಮಿಷಗಳು/ಸಮಯ ಬ್ಯಾಟಿಂಗ್ : 44,152 ನಿಮಿಷ

ಟೆಸ್ಟ್‌ ಗಳಲ್ಲಿ ಅತಿ ಹೆಚ್ಚು ಶತಕಗಳ ಜೊತೆಯಾಟ : 88 ಶತಕಗಳು

ಸೊನ್ನೆ ಸುತ್ತದೇ ಸತತ ಅತಿ ಹೆಚ್ಚು ಏಕದಿನ ಇನ್ನಿಂಗ್ಸ್‌ – 120 ಏಕದಿನ ಇನ್ನಿಂಗ್ಸ್‌

ಡಕ್ ಇಲ್ಲದೆ ಸತತ ಅತಿ ಹೆಚ್ಚು ಅಂತಾರಾಷ್ಟ್ರೀಯ ಇನ್ನಿಂಗ್ಸ್‌ : 173 ಇನ್ನಿಂಗ್ಸ್‌

ಟೆಸ್ಟ್‌ ನಲ್ಲಿ ಅತಿ ಹೆಚ್ಚು ಕ್ಯಾಚ್‌ ಪಡೆದ ಫೀಲ್ಡರ್ : 210 ಕ್ಯಾಚ್‌

ಒಂದು ವರ್ಷದಲ್ಲಿ ಅತಿ ಹೆಚ್ಚು ಏಕದಿನ ಪಂದ್ಯ ಆಡಿದವರು :  43 ಏಕದಿನ ಪಂದ್ಯ

ದ್ರಾವಿಡ್ 1996ರ ಏಪ್ರಿಲ್​ನಲ್ಲಿ ಶ್ರೀಲಂಕಾ ವಿರುದ್ಧದ ಏಕದಿನ ಪಂದ್ಯದೊಂದಿಗೆ ತಮ್ಮ ಅಂತಾರಾಷ್ಟ್ರೀಯ ಕ್ರಿಕೆಟರ್​ ವೃತ್ತಿಜೀವನ ಪ್ರಾರಂಭಿಸಿದರು. ಇದಾದ ಬಳಿಕ ಅದೇ ವರ್ಷ ಜೂನ್‌ನಲ್ಲಿ ದ್ರಾವಿಡ್‌ಗೆ ಟೆಸ್ಟ್ ಕ್ರಿಕೆಟ್‌ಗೂ ಪದಾರ್ಪಣೆ ಮಾಡುವ ಅವಕಾಶ ಸಿಕ್ಕಿತು. ಸಿಕ್ಕ ಅವಕಾಶವನ್ನು ಸದುಪಯೋಗ ಪಡಿಸಿಕೊಂಡ ದ್ರಾವಿಡ್ ಭಾರತ ತಂಡದಲ್ಲಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡರು. ದ್ರಾವಿಡ್ ಟೆಸ್ಟ್ ಕ್ರಿಕೆಟ್‌ನಲ್ಲಿ ಒಟ್ಟು 164 ಪಂದ್ಯಗಳನ್ನು ಆಡಿದ್ದಾರೆ, ಇದರಲ್ಲಿ 286 ಇನ್ನಿಂಗ್ಸ್‌ಗಳಲ್ಲಿ ಬ್ಯಾಟಿಂಗ್ ಮಾಡಿ 52.31 ಸರಾಸರಿಯಲ್ಲಿ 13,288 ರನ್ ಗಳಿಸಿದ್ದಾರೆ. ದ್ರಾವಿಡ್ ಟೆಸ್ಟ್ ಕ್ರಿಕೆಟ್‌ನಲ್ಲಿ 36 ಶತಕ ಮತ್ತು 63 ಅರ್ಧಶತಕಗಳನ್ನು ಹೊಂದಿದ್ದಾರೆ. ಟೆಸ್ಟ್ ಪಂದ್ಯಗಳಲ್ಲಿ 5 ದ್ವಿಶತಕಗಳನ್ನು ಸಹ ಗಳಿಸಿದ್ದಾರೆ. ಒಟ್ನಲ್ಲಿ 1973ರಲ್ಲಿ ಮಧ್ಯ ಪ್ರದೇಶದ ಇಂದೋರ್ ನಲ್ಲಿ ಹುಟ್ಟಿದ ದ್ರಾವಿಡ್, ಮರಾಠಿ ಕುಟುಂಬದಲ್ಲಿ ಹುಟ್ಟಿದರೂ ಬೆಳೆದದ್ದು ಬೆಂಗಳೂರಿನಲ್ಲಿ. 2000ರಲ್ಲಿ ವಿಸ್ಡನ್ ಕ್ರಿಕೆಟರ್ಸ್ ಪ್ರಕಟಿಸಿದ ವಿಶ್ವದ ಐದು ಟಾಪ್ ಆಟಗಾರರಲ್ಲಿ ದ್ರಾವಿಡ್ ಕೂಡಾ ಒಬ್ಬರಾಗಿದ್ದರು. ಕರ್ನಾಟಕ ತಂಡದ ಪರವಾಗಿ ರಣಜಿ, ಕೆಂಟ್ ತಂಡದ ಪರವಾಗಿ ಇಂಗ್ಲಿಷ್ ಕೌಂಟಿ ಮತ್ತು ಐಪಿಎಲ್ ನಲ್ಲಿ ರಾಜಸ್ಥಾನ ರಾಯಲ್ಸ್ ಪರ ಕೋಚ್ ಆಗಿ ಕೆಲಸ ಮಾಡುತ್ತಿದ್ದಾರೆ. ಅಲ್ದೇ ಟೀಂ ಇಂಡಿಯಾ ಕೋಚ್ ಆಗಿಯೂ ಅದ್ಭುತವಾಗಿ ತಂಡವನ್ನ ಲೀಡ್ ಮಾಡಿ ಟಿ-20 ವಿಶ್ವಕಪ್ ಗೆಲ್ಲಿಸಿಕೊಟ್ಟಿದ್ರು. ಆಟದಲ್ಲಿ ಹಾಗೇ ವೈಯಕ್ತಿಕ ಜೀವನದಲ್ಲೂ ದ್ರಾವಿಡ್​ಗೆ ದ್ರಾವಿಡ್​ರೇ ಸರಿಸಾಟಿ.

Shantha Kumari

Leave a Reply

Your email address will not be published. Required fields are marked *