ಟೀಮ್ ಇಂಡಿಯಾಕ್ಕೆ ರಾಹುಲ್ ದ್ರಾವಿಡ್ ಪುತ್ರ ಎಂಟ್ರಿ – ವಿಕೆಟ್ ಕೀಪರ್ ಆಗಿ ಅನ್ವಯ್ ದ್ರಾವಿಡ್ ಆಯ್ಕೆ

ಟೀಮ್ ಇಂಡಿಯಾಕ್ಕೆ ರಾಹುಲ್ ದ್ರಾವಿಡ್ ಪುತ್ರ ಎಂಟ್ರಿ – ವಿಕೆಟ್ ಕೀಪರ್ ಆಗಿ ಅನ್ವಯ್ ದ್ರಾವಿಡ್ ಆಯ್ಕೆ

ಭಾರತ ಅಂಡರ್-19 ತಂಡ ಶ್ರೀಲಂಕಾ ಪ್ರವಾಸಕ್ಕೆ ಸಜ್ಜಾಗಿದೆ. ಶ್ರೀಲಂಕಾ ಸರಣಿಗೆ ತಂಡವನ್ನು ಪ್ರಕಟಿಸಲಾಗಿದೆ. ಮಾಜಿ ನಾಯಕ ರಾಹುಲ್ ದ್ರಾವಿಡ್ ಪುತ್ರ ಅನ್ವಯ್ ದ್ರಾವಿಡ್ ಏಕದಿನ ತಂಡಕ್ಕೆ ಆಯ್ಕೆಯಾಗಿದ್ದಾರೆ.

ಇದನ್ನೂ ಓದಿ:ಫರ್ಹಾನ್ ಗೆ ಪಟ್ಟ ಕಟ್ಟಿದ PAK – AK 47* ಸೆಲೆಬ್ರೇಷನ್ ಗೆ ಕ್ಯಾಪ್ಟನ್ಸಿ ಗಿಫ್ಟ್?

ಭಾರತ ಅಂಡರ್-19 ತಂಡ ಶ್ರೀಲಂಕಾ ಪ್ರವಾಸಕ್ಕೆ ಸಜ್ಜಾಗಿದ್ದು, ತಂಡವನ್ನು ಪ್ರಕಟಿಸಲಾಗಿದೆ. ಈ ಪ್ರವಾಸದಲ್ಲಿ ಭಾರತ ಯುವ ಪಡೆ ಮೂರು ಪಂದ್ಯಗಳ ಏಕದಿನ ಸರಣಿ ಮತ್ತು ಎರಡು ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡಲಿದೆ. ಈ ಪ್ರವಾಸಕ್ಕೆ ಬಿಸಿಸಿಐ ಪ್ರಕಟ ಮಾಡಿರುವ ತಂಡದಲ್ಲಿ ಟೀಂ ಇಂಡಿಯಾ ಮಾಜಿ ನಾಯಕ, ಟೀಮ್ ಇಂಡಿಯಾದ ಮಾಜಿ ಹೆಡ್ ಕೋಚ್ ಆಗಿರುವ ರಾಹುಲ್ ದ್ರಾವಿಡ್ ಅವರ ಕಿರಿಯ ಮಗ ಅನ್ವಯ್ ದ್ರಾವಿಡ್ ಆಯ್ಕೆಯಾಗಿದ್ದಾರೆ.

ತಂಡದ ನಾಯಕತ್ವವನ್ನು ಯಶವರ್ಧನ್ ಸಿಂಗ್ ಚೌಹಾಣ್ ಅವರಿಗೆ ನೀಡಲಾಗಿದೆ. ಯಶ್ ವೈಟ್-ಬಾಲ್ ಮತ್ತು ರೆಡ್-ಬಾಲ್ ತಂಡಗಳೆರಡಕ್ಕೂ ನಾಯಕರಾಗಿರುತ್ತಾರೆ. ಲಕ್ಷ್ಯ ರಾಯ್‌ಚಂದಾನಿ ಎರಡೂ ತಂಡಗಳಿಗೆ ಉಪನಾಯಕನಾಗಿ ಆಯ್ಕೆಯಾಗಿದ್ದಾರೆ. ಈ ಪ್ರವಾಸಕ್ಕಾಗಿ ಅನ್ವಯ್ ದ್ರಾವಿಡ್ ಅವರನ್ನು ಏಕದಿನ ತಂಡದಲ್ಲಿ ಮಾತ್ರ ಆಯ್ಕೆ ಮಾಡಲಾಗಿದ್ದು, ರೆಡ್-ಬಾಲ್ ಸರಣಿಗೆ ಆಯ್ಕೆ ಮಾಡಲಾಗಿಲ್ಲ.

ಏಕದಿನ ಸರಣಿಗೆ ಆಯ್ಕೆಯಾದ ತಂಡ: ಸಾಗರ್ ವಿರ್ಕ್, ಲಕ್ಷ ರಾಯದನಿ (ಉಪನಾಯಕ), ಯಶ್ಬರ್ಧನ್ ಸಿಂಗ್ ಚೌಹಾಣ್ (ನಾಯಕ), ವಿನೀತ್ ವಿ ಕೆ, ಅರ್ಜುನ್ ರಜಪೂತ್, ಕುಶಾಗ್ರಾ ಓಜಾ, ರಜತ್ ಬಘೇಲ್ (ವಿಕೆಟ್ ಕೀಪರ್), ಅನ್ವಯ್ ದ್ರಾವಿಡ್ (ವಿಕೆಟ್ ಕೀಪರ್), ಅನ್ಮೋಲ್ಜೀತ್ ಸಿಂಗ್, ವುಟ್ಕುರಿ ಯಶ್ವೀರ್ ಗೌಡ್, ರೋಹಿತ್ ಅನಿಲ್ ಯಾದವ್, ಶವಿನ್ ವಿ, ಕಾವ್ಯಾ ಪರೇಶ್ ಪಟೇಲ್, ಮೋಹಿತ್ ಉಲ್ವಾ, ಇಶಾನ್ ಸೂದ್

ರೆಡ್ ಬಾಲ್ ಸರಣಿಗೆ ತಂಡ: ಸಾಗರ್ ವಿರ್ಕ್, ಲಕ್ಷ ರಾಯಚಂದನಿ (ಉಪನಾಯಕ), ಯಶ್ಬರ್ಧನ್ ಸಿಂಗ್ ಚೌಹಾಣ್ (ನಾಯಕ), ಪಟೇಲ್ ಕುಶ್, ಮನಲ್ ಚೌಹಾಣ್, ಕುಶಾಗ್ರಾ ಓಜಾ, ಮಾನವ್ ಕೃಷ್ಣ (ವಿಕೆಟ್ ಕೀಪರ್), ಆರ್ಯನ್ ಸಂದೇಶ್ ಸಕ್ಪಾಲ್ (ವಿಕೆಟ್ ಕೀಪರ್), ಹೇಮಚುದೇಶನ್ ಜೆ, ಬಿ ಕೆ ಕಿಶೋರ್, ರೋಹಿತ್ ಅನಿಲ್ ಯಾದವ್, ಕಾವ್ಯಾ ಪರೇಶ್ ಪಟೇಲ್, ಪ್ರಿಯಾಂಶು ಸಿಂಗ್, ಪ್ರಣವ್ ರಾಘವೇಂದ್ರ, ಚಿಗುರುಪತಿ ವೆಂಕಟ

Sulekha

Leave a Reply

Your email address will not be published. Required fields are marked *