ವ್ಹೀಲ್ ಚೇರ್ ನಲ್ಲಿ ರಾಜಸ್ತಾನಕ್ಕೆ ದ್ರಾವಿಡ್ ತರಬೇತಿ – ರಾಯಡುಗೆ ಯಾಕಿಷ್ಟು ಉರಿ?

ದಿ ಗ್ರೇಟ್ ವಾಲ್ ಆಫ್ ಇಂಡಿಯಾ ರಾಹುಲ್ ದ್ರಾವಿಡ್ ಈ ಬಾರಿಯ ಐಪಿಎಲ್ನಲ್ಲಿ ರಾಜಸ್ಥಾನ ರಾಯಲ್ಸ್ ತಂಡಕ್ಕೆ ಕೋಚ್ ಆಗಿದ್ದಾರೆ. ಆದ್ರೆ ಐಪಿಎಲ್ ಆರಂಭಕ್ಕೂ ಮುನ್ನವೇ ಎಡಗಾಲಿಗೆ ಗಾಯವಾಗಿದ್ದು ನಡೆಯೋಕೂ ಕೂಡ ಕಷ್ಟವಾಗ್ತಿದೆ. ಹೀಗಿದ್ರೂ ಗುರುವಿನ ಜವಾಬ್ದಾರಿ ಮರೆಯದ ದ್ರಾವಿಡ್ ವ್ಹೀಲ್ ಚೇರ್ ಮತ್ತು ಸ್ಟ್ರಚಸ್ಗಳಲ್ಲೇ ಮೈದಾನಕ್ಕೆ ಬಂದು ತಂಡಕ್ಕೆ ಬೆನ್ನೆಲುಬಾಗಿ ನಿಂತಿದ್ದಾರೆ. ವ್ಹೀಲ್ಚೇರ್ನಲ್ಲೇ ಕೂತು ಗೇಮ್ ಪ್ಲ್ಯಾನ್ ಹೇಳಿಕೊಳ್ತಿದ್ದಾರೆ. ಗಾಯಗೊಂಡಿದ್ದರೂ ಸಹ ರೆಸ್ಟ್ ಪಡೆಯದೇ ಅವ್ರು ತೋರುತ್ತಿರುವ ನಿಷ್ಠೆಗೆ ಸಾಕಷ್ಟು ಜನ ಶಹಬ್ಬಾಸ್ ಹೇಳ್ತಿದ್ದಾರೆ. ಆದ್ರೆ ಅಂಬಾಟಿ ರಾಯುಡು ಮಾತ್ರ ಇಲ್ಲೂ ಕ್ಯಾತೆ ತೆಗೆದಿದ್ದಾರೆ
ಇದನ್ನೂ ಓದಿ : ಸ್ವಪ್ನಿಲ್ ಸಿಂಗ್ ಗೆ ಯಾಕಿಲ್ಲ ಚಾನ್ಸ್? – RCB ಲಕ್ಕಿ ಸ್ಟಾರ್ ಬೆಂಚ್ ಗಷ್ಟೇನಾ?
ದಿ ಗ್ರೇಟ್ ವಾಲ್ ಆಫ್ ಇಂಡಿಯಾ ರಾಹುಲ್ ದ್ರಾವಿಡ್ ಈ ಬಾರಿಯ ಐಪಿಎಲ್ನಲ್ಲಿ ರಾಜಸ್ಥಾನ ರಾಯಲ್ಸ್ ತಂಡಕ್ಕೆ ಕೋಚ್ ಆಗಿದ್ದಾರೆ. ಆದ್ರೆ ಐಪಿಎಲ್ ಆರಂಭಕ್ಕೂ ಮುನ್ನವೇ ಎಡಗಾಲಿಗೆ ಗಾಯವಾಗಿದ್ದು ನಡೆಯೋಕೂ ಕೂಡ ಕಷ್ಟವಾಗ್ತಿದೆ. ಹೀಗಿದ್ರೂ ಗುರುವಿನ ಜವಾಬ್ದಾರಿ ಮರೆಯದ ದ್ರಾವಿಡ್ ವ್ಹೀಲ್ ಚೇರ್ ಮತ್ತು ಸ್ಟ್ರಚಸ್ಗಳಲ್ಲೇ ಮೈದಾನಕ್ಕೆ ಬಂದು ತಂಡಕ್ಕೆ ಬೆನ್ನೆಲುಬಾಗಿ ನಿಂತಿದ್ದಾರೆ. ವ್ಹೀಲ್ಚೇರ್ನಲ್ಲೇ ಕೂತು ಗೇಮ್ ಪ್ಲ್ಯಾನ್ ಹೇಳಿಕೊಳ್ತಿದ್ದಾರೆ. ಗಾಯಗೊಂಡಿದ್ದರೂ ಸಹ ರೆಸ್ಟ್ ಪಡೆಯದೇ ಅವ್ರು ತೋರುತ್ತಿರುವ ನಿಷ್ಠೆಗೆ ಸಾಕಷ್ಟು ಜನ ಶಹಬ್ಬಾಸ್ ಹೇಳ್ತಿದ್ದಾರೆ. ಆದ್ರೆ ಅಂಬಾಟಿ ರಾಯುಡು ಮಾತ್ರ ಇಲ್ಲೂ ಕ್ಯಾತೆ ತೆಗೆದಿದ್ದಾರೆ.
ಗುವಾಹಟಿಯಲ್ಲಿ ನಡೆದ ಐಪಿಎಲ್ನ 11ನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯಕ್ಕೂ ಮುನ್ನ ರಾಜಸ್ಥಾನ್ ರಾಯಲ್ಸ್ ತಂಡದ ಮೆಂಟರ್ ರಾಹುಲ್ ದ್ರಾವಿಡ್ ಪಿಚ್ ಬಳಿ ಕಾಣಿಸಿಕೊಂಡಿದ್ದರು. ಕಾಲಿಗೆ ಗಾಯ ಮಾಡಿಕೊಂಡಿರುವ ದ್ರಾವಿಡ್ ವೀಲ್ಚೇರ್ನಲ್ಲಿ ಕೂತು ಪಿಚ್ ಪರಿಶೀಲನೆ ನಡೆಸಿದ್ರು. ಆದ್ರೆ ವ್ಹೀಲ್ ಚೇರ್ ನಲ್ಲಿ ತೆರಳಿ ಪಿಚ್ ಪರಿಶೀಲನೆ ನಡೆಸಿದ ದ್ರಾವಿಡ್ರನ್ನ ರಾಯುಡು ಪ್ರಶ್ನಿಸಿದ್ದಾರೆ. ವೀಲ್ಚೇರ್ನಲ್ಲಿ ಪಿಚ್ ಬಳಿ ಹೋಗಲು ಯಾರು ಅನುಮತಿ ನೀಡಿದ್ದಾರೆ. ಇದಕ್ಕೆ ಅವಕಾಶವಿದೆಯೇ ಎಂದು ಕೇಳಿದ್ದಾರೆ. ಚಾನೆಲ್ವವೊಂದರ ಡಿಸ್ಕಷನ್ನಲ್ಲಿ ಮಾತ್ನಾಡಿದ್ದು, ರಾಹುಲ್ ದ್ರಾವಿಡ್ರನ್ನ ವೀಲ್ಚೇರ್ನಲ್ಲಿ ಪಿಚ್ ಬಳಿಗೆ ಯಾಕೆ ಬಿಡ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ. ಇದನ್ನೆಲ್ಲಾ ನೋಡಿದರೆ ನಿಜಕ್ಕೂ ನಗು ಬರುತ್ತಿದೆ ಎಂದು ವ್ಯಂಗ್ಯವಾಡಿದ್ರು. ರಾಯುಡು ಹೇಳಿಕೆಗೆ ರಾಹುಲ್ ದ್ರಾವಿಡ್ ಅಭಿಮಾನಿಗಳು ಆಕ್ರೋಶಗೊಂಡಿದ್ರು. ಸೋಶಿಯಲ್ ಮೀಡಿಯಾದಲ್ಲಿ ಹಿಗ್ಗಾಮುಗ್ಗಾ ಕ್ಲಾಸ್ ತೆಗೆದುಕೊಂಡಿದ್ದಾರೆ. ದ್ರಾವಿಡ್ ಬಗ್ಗೆ ಸರಿಯಾಗಿ ತಿಳ್ಕೊಂಡು ಆಮೇಲೆ ಮಾತಾಡಿ ಅಂತಾ ಬೆಂಡೆತ್ತಿದ್ದಾರೆ.
ಭಾರತಕ್ಕೆ ಟಿ-20 ವಿಶ್ವಕಪ್ ಗೆಲ್ಲಿಸಿಕೊಟ್ಟಿರೋ ರಾಹುಲ್ ದ್ರಾವಿಡ್ ಅವ್ರ ಐಪಿಎಲ್ ಜರ್ನಿಯನ್ನ ನೋಡೋದಾದ್ರೆ ದ್ರಾವಿಡ್ ಐಪಿಎಲ್ ನಲ್ಲಿ ಫಸ್ಟ್ ಆಡಿದ್ದೇ ಆರ್ ಸಿಬಿ ಕ್ಯಾಪ್ಟನ್ ಆಗಿ. 2008ರಲ್ಲಿ ಮೊದಲ ಬಾರಿ ಐಪಿಎಲ್ ಆಯೋಜನೆಗೊಂಡಾಗ ದ್ರಾವಿಡ್ ರನ್ನ ಬೆಂಗಳೂರು ಫ್ರಾಂಚೈಸಿಗೆ ಐಕಾನ್ ಪ್ಲೇಯರ್ ಆಗಿ ನೇಮಕ ಮಾಡಿಡಲಾಯಿತು. ರಾಹುಲ್ ದ್ರಾವಿಡ್, ಲೆಗ್ ಸ್ಪಿನ್ನರ್ ಅನಿಲ್ ಕುಂಬ್ಳೆ ಜೊತೆಗೆ ಆಲ್ ರೌಂಡರ್ ಸುನಿಲ್ ಜೋಶಿ, ವಿನಯ್ ಕುಮಾರ್, ಜೆ ಅರುಣ್ ಕುಮಾರ್, ಭರತ್ ಚಿಪ್ಲಿ, ಎನ್ ಸಿ ಅಯ್ಯಪ್ಪ, ಬಿ ಅಖಿಲ್, ಕೆಪಿ ಅಪ್ಪಣ್ಣ ಹೀಗೆ ಒಂಬತ್ತು ಆಟಗಾರರು ಕನ್ನಡದವರೇ ಆಗಿದ್ರು. ಪ್ಲೇಯಿಂಗ್ 11ನಲ್ಲಿ ಮೂವರು ಕನ್ನಡಿಗರು ಇದ್ದೇ ಇರ್ತಿದ್ರು. ವೆಂಕಟೇಶ್ ಪ್ರಸಾದ್ ತಂಡದ ಕೋಚ್ ಆಗಿದ್ದರು. ಆದ್ರೆ 2008ರ ಮೊದಲನೇ ಆವೃತ್ತಿಯಲ್ಲಿ ರಾಹುಲ್ ದ್ರಾವಿಡ್ ಅವರ ನಾಯಕತ್ವದಲ್ಲಿ ಆಡಿದ ಒಟ್ಟು 14 ಪಂದ್ಯಗಳಲ್ಲಿ ನಾಲ್ಕನ್ನು ಮಾತ್ರ ಗೆದ್ದು ಅಂಕಪಟ್ಟಿಯಲ್ಲಿ 7ನೇ ಸ್ಥಾನಕ್ಕಿಳಿಯಿತು. ಪರಿಣಾಮ 2009ರಲ್ಲಿ ನಾಯಕತ್ವದಿಂದ ಕೆಳಗಿಳಿಸಿ ಇಂಗ್ಲೆಂಡಿನ ಕೆವಿನ್ ಪೀಟರ್ಸನ್ ಗೆ ಪಟ್ಟ ಕಟ್ಟಲಾಯಿತು.
2010ರ ಸೀಸನ್ ಬಳಿಕ ರಾಹುಲ್ ದ್ರಾವಿಡ್ ಅವರನ್ನು ಆರ್ ಸಿಬಿ ರಿಲೀಸ್ ಮಾಡಿತು. ಆಗ ಅವರನ್ನು ಸ್ವಾಗತಿದ್ದೇ ರಾಜಸ್ಥಾನ ರಾಯಲ್ಸ್. 2011ರಿಂದ 2013ರವರೆಗೂ ರಾಜಸ್ಥಾನ ರಾಯಲ್ಸ್ ನಾಯಕನಾಗಿ ಆಡಿದರು. 2011ರಲ್ಲಿ 343, 2012ರಲ್ಲಿ 462 ಮತ್ತು 2013ರಲ್ಲಿ 471 ರನ್ ಗಳನ್ನು ಕಲೆ ಹಾಕಿದರು. ಈ ಅವಧಿಯಲ್ಲಿ ರಾಜಸ್ಥಾನ ಕಪ್ ಗೆಲ್ಲದಿದ್ದರೂ ಅದ್ಭುತ ಪ್ರದರ್ಶನ ನೀಡಿತ್ತು.ಹಾಗಂತ ಕಪ್ ಗೆಲ್ಲಲಿಲ್ಲ ಎಂದು ಫ್ರಾಂಚೈಸಿಯೇನೋ ದ್ರಾವಿಡ್ ಬಗ್ಗೆ ಕೊಂಕು ಮಾತನಾಡಲಿಲ್ಲ. ಅತ್ಯಂತ ಗೌರವಯುತವಾಗಿ ನಡೆಸಿಕೊಂಡಿತು. ಅವರು ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ನಿವೃತ್ತಿ ಹೇಳಿದಾಗ ಬಿಸಿಸಿಐ ಸಹ ಅವರಿಗೆ ವಿದಾಯ ಕೂಟ ಏರ್ಪಡಿಸಿರಲಿಲ್ಲ. ಆದರೆ ರಾಜಸ್ಥಾನ ರಾಯಲ್ಸ್ ಅವರ ಕೊಡುಗೆಯನ್ನು ಬಹಳ ಸುಂದರವಾಗಿ ಸೆಲೆಬ್ರೇಟ್ ಮಾಡಿತ್ತು. ಐಪಿಎಲ್ ನಿಂದಲೂ ನಿವೃತ್ತರಾದ ಬಳಿಕ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯ ಕೋಚ್ ಆಗಿದ್ದ ರಾಹುಲ್ ದ್ರಾವಿಡ್ ಅವರು ರಾಜಸ್ಥಾನ ರಾಯಲ್ಸ್ ಗಾಗಿ ಅನೇಕ ಪ್ರತಿಭೆಗಳನ್ನು ಬೆಳಕಿಗೆ ತಂದ್ರು. ಅದ್ರಲ್ಲು ಸಂಜು ಸ್ಯಾಮ್ಸನ್ ಕೂಡ ಒಬ್ರು. ರಾಜಸ್ಥಾನ ತಂಡದಲ್ಲಿ ಮಾಡಿದ ಕೆಲಸಗಳಿಂದ್ಲೇ ರಾಷ್ಟ್ರೀಯ ತಂಡಕ್ಕೂ ಪ್ರಧಾನ ಕೋಚ್ ಆಗಿ ಆಯ್ಕೆಯಾಗಿ ಸಮರ್ಥವಾಗಿ ಮುನ್ನಡೆಸಿದರು. ದ್ರಾವಿಡ್ ಅವ್ರ ಕ್ರೀಡಾ ಬದುಕಿನ ಮತ್ತೊಂದು ಅಧ್ಯಾಯಕ್ಕೆ ಮುನ್ನುಡಿ ಬರೆದಿದ್ದೇ ರಾಜಸ್ಥಾನ. ಇದೇ ಕಾರಣಕ್ಕೆ ನಡೆಯಲು ಸಾಧ್ಯವಾಗುತ್ತಿಲ್ಲವಾದರೂ ವ್ಹೀಲ್ ಚೇರ್ ನಲ್ಲೂ ಸೇವೆ ಸಲ್ಲಿಸುತ್ತಿದ್ದಾರೆ.