ಟೀಂ ಇಂಡಿಯಾಗೆ ದ್ರಾವಿಡ್ ವಾರ್ನಿಂಗ್ – RO-KO ಇಲ್ಲದೇ ಫ್ಲಾಪ್ ಆಗ್ತಿದ್ದಾರಾ?
NZ & AUS ಸರಣಿ ಗೆಲ್ಲೋಕಾಗಲ್ವಾ?

ಟೀಂ ಇಂಡಿಯಾಗೆ ದ್ರಾವಿಡ್ ವಾರ್ನಿಂಗ್ – RO-KO ಇಲ್ಲದೇ ಫ್ಲಾಪ್ ಆಗ್ತಿದ್ದಾರಾ?NZ & AUS ಸರಣಿ ಗೆಲ್ಲೋಕಾಗಲ್ವಾ?

2027ರ ಡಬ್ಲ್ಯೂಸಿಟಿ ಫೈನಲ್​ ರೇಸ್​ನಲ್ಲಿ ಭಾರತ ಸ್ಟ್ರಗಲ್ ಪಡ್ತಿದ್ರೂ ರೇಸ್​ನಿಂದ ಹೊರಬಿದ್ದಿಲ್ಲ. ಬಟ್ ಫೈನಲ್ ಟಿಕೆಟ್ ಗಿಟ್ಟಿಸಿಕೊಳ್ಳೋದು ಸುಲಭ ಇಲ್ಲ. ಆದ್ರೆ ಇನ್ಮುಂದೆ ಭಾರತದ ಜರ್ನಿ ಹೇಗಿರಬೇಕು ಅನ್ನೋ ಬಗ್ಗೆ ಭಾರತದ ಟೆಸ್ಟ್ ಕ್ರಿಕೆಟ್​ನ ಮಹಾಗೋಡೆ ರಾಹುಲ್ ದ್ರಾವಿಡ್ ಮಾತನಾಡಿದ್ದಾರೆ. ಹಾಗೇ ವಾರ್ನಿಂಗ್ ಕೂಡ ಕೊಟ್ಟಿದ್ದಾರೆ.

ಇದನ್ನೂ ಓದಿ : ಪಾಕಿಸ್ತಾನದಲ್ಲಿ ಸೌತ್ ಏಷ್ಯಾ ಗೇಮ್ಸ್ – ವೈರಿರಾಷ್ಟ್ರಕ್ಕೆ ಕಾಲಿಡುತ್ತಾ ಭಾರತ?  

ಟೆಸ್ಟ್ ಕ್ರಿಕೆಟ್ ಅನ್ನೋದು ಜಸ್ಟ್ ಫಾರ್ಮೆಟ್ ಅಲ್ಲ. ತಂಡಗಳ ಶ್ರೇಷ್ಠತೆ. ಈ ವಿಚಾರದಲ್ಲಿ ದಶಕದ ಕಾಲ ಭಾರತಕ್ಕೆ ಮಹಾಗೋಡೆಯಾಗಿ ನಿಂತವರು ನಮ್ಮ ಕನ್ನಡಿಗ ರಾಹುಲ್ ದ್ರಾವಿಡ್. ಟೆಸ್ಟ್ ಇತಿಹಾಸದಲ್ಲೇ ಅತ್ಯಂತ ಹೆಚ್ಚು ಎಸೆತಗಳನ್ನು ಎದುರಿಸಿದ ಬ್ಯಾಟರ್ ದ್ರಾವಿಡ್. ಅವರು ಒಟ್ಟು 31,258 ಎಸೆತಗಳನ್ನು ಎದುರಿಸಿದ್ದಾರೆ. ಟೆಸ್ಟ್ ಪಂದ್ಯಗಳಲ್ಲಿ ಸುಮಾರು 735 ಗಂಟೆಗಳ ಕಾಲ ಕ್ರೀಸ್‌ನಲ್ಲಿ ಬ್ಯಾಟಿಂಗ್ ಮಾಡಿದ ಜಗತ್ತಿನ ಏಕೈಕ ಆಟಗಾರ. ಟೆಸ್ಟ್ ಆಡುವ ಎಲ್ಲಾ 10 ದೇಶಗಳ ವಿರುದ್ಧ ನಮ್ಮ ನೆಲದಲ್ಲಿ + ವಿದೇಶದಲ್ಲಿಯೂ ಶತಕ ಬಾರಿಸಿದ ಮೊದಲ ಬ್ಯಾಟರ್. ಬ್ಯಾಟಿಂಗ್ ಅಷ್ಟೇ ಅಲ್ಲದೆ ಎಕ್ಸ್​ಟ್ರಾರ್ಡಿನಡಿ ಫೀಲ್ಡರ್ ಆಗಿದ್ದ ದ್ರಾವಿಡ್ 210 ಕ್ಯಾಚ್‌ಗಳನ್ನು ಹಿಡಿದಿದ್ದಾರೆ. 16 ವರ್ಷಗಳ ಕಾಲ ಟೆಸ್ಟ್ ಕ್ರಿಕೆಟ್​ನಲ್ಲಿ ಭಾರತಕ್ಕೆ ಗೋಡೆಯಾಗಿ ನಿಂತಿದ್ದ ದ್ರಾವಿಡ್ ಈಗ ಭಾರತದ ಡಬ್ಲ್ಯೂಟಿಸಿ ರೇಸ್​ ಬಗ್ಗೆ ವಾರ್ನಿಂಗ್ ಕೊಟ್ಟಿದ್ದಾರೆ. ನ್ಯೂಜಿಲೆಂಡ್ ಪ್ರವಾಸದಲ್ಲಿ ಎದುರಾಗೂ ಚಾಲೆಂಜ್​ಗಳನ್ನೂ ಬಿಚ್ಚಿಟ್ಟಿದ್ದಾರೆ.

ನ್ಯೂಜಿಲೆಂಡ್ ವಿರುದ್ಧದ ಸರಣಿಯೇ ನಿರ್ಣಾಯಕ!

ಲಂಕಾ ಸರಣಿ ಬಳಿಕ ಭಾರತಕ್ಕೆ ಇನ್ನು 7 ಪಂದ್ಯಗಳು ಉಳಿಯಲಿವೆ. ನ್ಯೂಜಿಲೆಂಡ್ ವಿರುದ್ಧ ಎರಡು ಹಾಗೇ ಆಸ್ಟ್ರೇಲಿಯಾ ವಿರುದ್ಧ 5 ಪಂದ್ಯಗಳ ಸರಣಿ. ಅಕ್ಟೋಬರ್‌ನಲ್ಲಿ ನಡೆಯಲಿರುವ ನ್ಯೂಜಿಲೆಂಡ್ ಪ್ರವಾಸದ ಬಗ್ಗೆ ಮಾತನಾಡಿದ ದ್ರಾವಿಡ್, ಈ ಸರಣಿಯೇ ಅತಿದೊಡ್ಡ ಟಾಸ್ಕ್ ಅಂದಿದ್ದಾರೆ. ಯಾಕಂದ್ರೆ ಪಂದ್ಯಗಳು ಕಿವೀಸ್ ನಾಡಿನಲ್ಲೇ ನಡೆಯೋದ್ರಿಂದ ನ್ಯೂಜಿಲೆಂಡ್ ಪರಿಸ್ಥಿತಿಗಳು ಭಾರತೀಯ ಬ್ಯಾಟರ್‌ಗಳಿಗೆ ಸುಲಭವಾಗಿರಲ್ಲ. ಅದರಲ್ಲೂ ಯುವ ಆಟಗಾರರಿಗೆ ವಿದೇಶಿ ಕಂಡೀಷನ್‌ಗಳಲ್ಲಿ ಆಡುವುದು ದೊಡ್ಡ ಸವಾಲು. ಅನುಭವಿಗಳಾದ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಅಜಿಂಕ್ಯ ರಹಾನೆ ಮತ್ತು ಚೇತೇಶ್ವರ ಪೂಜಾರಾ ಅವರ ಅನುಭವದ ಕೊರತೆ ಕೂಡ ತಂಡಕ್ಕೆ ಸವಾಲಾಗಬಹುದು ಎಂದು ದ್ರಾವಿಡ್ ಹೇಳಿದ್ದಾರೆ. ಹಾಗೇ ನ್ಯೂಜಿಲೆಂಡ್ ಸರಣಿಯಲ್ಲಿ ಕನಿಷ್ಠ ಒಂದು ಗೆಲುವು ಮತ್ತು ಡ್ರಾ ಮೂಲಕ ಸರಣಿಯನ್ನು 1-0 ಅಂತರದಲ್ಲಿ ಗೆಲ್ಲುವ ಪ್ರಯತ್ನ ಮಾಡಬೇಕು. 2-0 ಗೆಲುವು ಸಿಕ್ಕರೆ WTC ರೇಸ್‌ನಲ್ಲಿ ಭಾರತದ ಸ್ಥಾನ ಮತ್ತಷ್ಟು ಬಲವಾಗಲಿದೆ ಎನ್ನುವ ಮೂಲಕ ಭಾರತದ ಮುಂದಿನ ಜರ್ನಿ ಹೇಗಿರಬೇಕು ಅನ್ನೋದನ್ನ ಹೇಳಿದ್ದಾರೆ. ಹಾಗೇ 2027ರ ಜನವರಿಯಲ್ಲಿ ನಡೆಯಲಿರುವ ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ಆಸ್ಟ್ರೇಲಿಯಾ ವಿರುದ್ಧದ ಪ್ರದರ್ಶನದ ಬಗ್ಗೆಯೂ ಮಾತ್ನಾಡಿದ್ದಾರೆ.

ಭಾರತದಲ್ಲಿ ಗೆಲ್ಲೋಕೆ ಕಾಯ್ತಿದ್ದಾರೆ ಆಸ್ಟ್ರೇಲಿಯಾ ಆಟಗಾರರು!

ಆಸ್ಟ್ರೇಲಿಯಾ ವಿರುದ್ಧದ ಐದು ಟೆಸ್ಟ್‌ಗಳ ಸರಣಿಯಲ್ಲಿ ಅಂತಿಮವಾಗಿ ಭಾರತದ ಭವಿಷ್ಯ ಡಿಸೈಡ್ ಆಗುತ್ತೆ.  ಫೈನಲ್‌ಗೆ ಹೋಗ್ತಾರಾ ಮನೆಗೆ ಬರ್ತಾರಾ ಅನ್ನೋದು ಡಿಸೈಡ್ ಆಗುತ್ತೆ. ಈ ಸರಣಿಯ ಮತ್ತೊಂದು ಕುತೂಹಲಕಾರಿ ಅಂಶವನ್ನೂ ದ್ರಾವಿಡ್ ಹೇಳಿದ್ದಾರೆ. ಆಸ್ಟ್ರೇಲಿಯಾದ ಈ ಪೀಳಿಗೆಯ ಆಟಗಾರರು ಭಾರತದಲ್ಲಿ ಸರಣಿ ಗೆದ್ದಿಲ್ಲ. ಹೀಗಾಗಿ ಭಾರತಕ್ಕೆ ಬರುವಾಗ ಅವರು ಸರಣಿ ಗೆಲ್ಲಲೇಬೇಕು ಅನ್ನೋ ಎಕ್ಸೈಟ್​ಮೆಂಟ್​ನಿಂದ ಬರ್ತಾರೆ. ಸೋ ಅವ್ರನ್ನೂ ಫೇಸ್ ಮಾಡ್ಬೇಕು. ಌಂಡ್ ಇದೆಲ್ಲಕ್ಕಿಂತ ಮೋಸ್ಟ್ ಇಂಪಾರ್ಟೆಂಟ್ ಥಿಂಗ್ ಟೀಂ ಇಂಡಿಯಾ ಆಟಗಾರರು ಫಿಟ್ ಆಗಿರಬೇಕು. ಪ್ರಮುಖ ಆಟಗಾರರು ಗಾಯಗೊಂಡು ಹೊರಗುಳಿದರೆ, ಈಗಾಗಲೇ ಅನುಭವದ ಕೊರತೆ ಎದುರಿಸುತ್ತಿರುವ ತಂಡಕ್ಕೆ ಅದು ಮತ್ತಷ್ಟು ದೊಡ್ಡ ಹೊಡೆತವಾಗಲಿದೆ ಎಂದು ದ್ರಾವಿಡ್ ಎಚ್ಚರಿಕೆ ಕೂಡ ನೀಡಿದ್ದಾರೆ.   ಭಾರತ WTC ಅಂಕಪಟ್ಟಿಯ ಟಾಪ್-2ನಲ್ಲಿ ಸ್ಥಾನ ಪಡೆಯಲು  ಮುಂದಿನ ಪಂದ್ಯಗಳಲ್ಲಿ ದಿ ಬೆಸ್ಟ್ ಪರ್ಫಾಮೆನ್ಸ್ ನೀಡ್ಬೇಕು. ಸದ್ಯ ಪಾಯಿಂಟ್ಸ್ ಟೇಬಲ್‌ನಲ್ಲಿ 5ನೇ ಸ್ಥಾನದಲ್ಲಿದ್ದು, ಶ್ರೀಲಂಕಾ ವಿರುದ್ಧದ ಗೆಲುವಿನ ಬಳಿಕವೂ ಫೈನಲ್ ರೇಸ್ ಟಫ್ ಇರುತ್ತೆ. ಹಾಗಂತ ಅಸಾಧ್ಯ ಏನಿಲ್ಲ. ಎಲ್ಲವೂ ಕೂಡ ಆಟಗಾರರ ಪ್ರದರ್ಶನದ ಮೇಲೆ ಡಿಪೆಂಡ್ ಆಗಿದೆ ಅಷ್ಟೇ.

Shantha Kumari

Leave a Reply

Your email address will not be published. Required fields are marked *