ಹೆಡ್​ಕೋಚ್ ಹುದ್ದೆಗೆ ಗುಡ್ ಬೈ – 2021 To 24 ಕನ್ನಡಿಗನ ಸಕ್ಸಸ್ ಜರ್ನಿ
ಭಾರತದ WALL ಆಗಿದ್ದೇಗೆ ದ್ರಾವಿಡ್?

ಹೆಡ್​ಕೋಚ್ ಹುದ್ದೆಗೆ ಗುಡ್ ಬೈ – 2021 To 24 ಕನ್ನಡಿಗನ ಸಕ್ಸಸ್ ಜರ್ನಿಭಾರತದ WALL ಆಗಿದ್ದೇಗೆ ದ್ರಾವಿಡ್?

2024ರ ಟಿ-20 ವಿಶ್ವಕಪ್ ಹಲವು ಐತಿಹಾಸಿಕ ಅಚ್ಚರಿಗಳಿಗೆ ಸಾಕ್ಷಿಯಾಗಿದೆ. ಕ್ರಿಕೆಟ್ ಶಿಶು ಎನಿಸಿಕೊಂಡ ತಂಡಗಳು ಬಲಿಷ್ಠರನ್ನೇ ಬಡಿದು ಮನೆಗೆ ಕಳಿಸಿದ್ವು. ಹಾಗೇ ಕ್ರಿಕೆಟ್ ಲೆಜೆಂಡ್ ಎನಿಸಿಕೊಂಡವ್ರೇ ರನ್ ಗಳಿಸೋಕೆ ಒದ್ದಾಡಿದ್ರು. ಬೌಲರ್ಸ್ ಅಂತೂ ಬ್ಯಾಟರ್​ಗಳ ಮೇಲೆ ಅಕ್ಷರಶಃ ಸವಾರಿ ಮಾಡಿದ್ರು. ಇದೀಗ ಚುಟುಕು ಸಮರಕ್ಕೆ ವಿದಾಯ ಹೇಳೋ ಗಳಿಗೆ. ಈ ವಿಶ್ವಕಪ್ ಸಮರ ಭಾರತದ ಪಾಲಿಗೆ ನಿಜಕ್ಕೂ ಕೂಡ ಐತಿಹಾಸಿಕ ಟೂರ್ನಿಯಾಗಿತ್ತು. ಅಜೇಯವಾಗಿ ಫಿನಾಲೆಗೆ ಲಗ್ಗೆ ಇಟ್ಟಿದ್ದ ಟೀಂ ಇಂಡಿಯಾದ ಯಶಸ್ಸಿನ ಹಿಂದೆ ಇದ್ದದ್ದೇ ಕ್ಯಾಪ್ಟನ್ ರೋಹಿತ್ ಶರ್ಮಾ ಹಾಗೇ ಹೆಡ್​ಕೋಚ್ ರಾಹುಲ್ ದ್ರಾವಿಡ್. ಆದ್ರೆ ಒಂದು ಬೇಸರದ ವಿಚಾರ ಅಂದ್ರೆ ಕನ್ನಡಿಗ ರಾಹುಲ್ ದ್ರಾವಿಡ್ ಅವ್ರಿಗೆ ಇದು ಕೊನೇ ಪಂದ್ಯ. ವಿಶ್ವಕಪ್ ಸಮರದ ಬಳಿಕ ರಾಹುಲ್ ದ್ರಾವಿಡ್ ಟೀಂ ಇಂಡಿಯಾ ಮುಖ್ಯ ಕೋಚ್ ಹುದ್ದೆಗೆ ಗುಡ್ ಬೈ ಹೇಳಲಿದ್ದಾರೆ. ಅಷ್ಟಕ್ಕೂ ಭಾರತದ ಪಾಲಿಗೆ ದ್ರಾವಿಡ್ ಕೊಟ್ಟ ಕೊಡುಗೆಗಳೆಷ್ಟು? ಕನ್ನಡಿಗನ ಸಾಧನೆ ಎಂಥಾದ್ದು ಅನ್ನೋ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ಟೆಸ್ಟ್‌ ಕ್ರಿಕೆಟ್‌ನಲ್ಲಿ ದಾಖಲೆ ಬರೆದ ಭಾರತದ ವನಿತೆಯರು – 147 ವರ್ಷಗಳಲ್ಲಿ ಇದೇ ಮೊದಲು!

ಈ ಬಾರಿಯ ಟಿ-20 ವರ್ಲ್ಡ್​ಕಪ್​ನಲ್ಲಿ ಟೀಂ ಇಂಡಿಯಾದ ಅಮೋಘ ಪರ್ಫಾಮೆನ್ಸ್​ನ ಮೇನ್ ಕ್ರೆಡಿಟ್ ಕನ್ನಡಿಗ ಕೋಚ್ ರಾಹುಲ್ ದ್ರಾವಿಡ್​​ಗೂ ಸಲ್ಲಬೇಕು. 2021ರ ನವೆಂಬರ್​ನಲ್ಲಿ ಭಾರತೀಯ ಕ್ರಿಕೆಟ್ ತಂಡದ ಹೆಡ್ ಕೋಚ್ ಪಟ್ಟಕ್ಕೇರಿದ ದ್ರಾವಿಡ್ ಟೀಂ ಇಂಡಿಯಾದಲ್ಲಿ ಅಕ್ಷರಶ: ದೊಡ್ಡ ಕ್ರಾಂತಿಯನ್ನೇ ಮಾಡಿದ್ರು. ದಿ ವಾಲ್ ಖ್ಯಾತಿಯ ರಾಹುಲ್​ ದ್ರಾವಿಡ್​ ರೋಲ್​​ ತುಂಬಾನೆ ದೊಡ್ಡ ಮಟ್ಟದಲ್ಲಿದೆ. ಆದ್ರೀಗ ಚುಟುಕು ವಿಶ್ವಯುದ್ಧದ ಬಳಿಕ ಮುಖ್ಯ ಕೋಚ್ ಹುದ್ದೆಯಿಂದ ರಾಹುಲ್ ದ್ರಾವಿಡ್ ಕೆಳಗಿಳಿಯೋದು ಕನ್ಫರ್ಮ್ ಆಗಿದೆ. ಌಕ್ಚುಲಿ ರಾಹುಲ್ ದ್ರಾವಿಡ್ ಅವರ ಮೊದಲ ಒಪ್ಪಂದ 2023ರ ಏಕದಿನ ವಿಶ್ವಕಪ್ ಬೆನ್ನಲ್ಲೇ ಕೊನೆಗೊಂಡಿತ್ತು. ಆದ್ರೆ ವಿಶ್ವಕಪ್ ಫೈನಲ್‌ನಲ್ಲಿ ಭಾರತ ಸೋತ ಬೆನ್ನಲ್ಲೇ ದ್ರಾವಿಡ್ ಅವರೊಂದಿಗಿನ ಒಪ್ಪಂದವನ್ನು ಬಿಸಿಸಿಐ ಮತ್ತೆ ಎಕ್ಸ್​ಟೆಂಡ್ ಮಾಡಿತ್ತು. 2024ರ ಟಿ20 ವಿಶ್ವಕಪ್‌ವರೆಗೆ ಅವರನ್ನು ಭಾರತದ ಮುಖ್ಯ ಕೋಚ್ ಆಗಿ ಮುಂದುವರಿಸಲು ನಿರ್ಧರಿಸಲಾಗಿತ್ತು. ಅದ್ರಂತೆ ಈಗ ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ವಿಶ್ವಕಪ್ ಫೈನಲ್‌ನಲ್ಲಿ ದ್ರಾವಿಡ್ ಅವರ ಕೋಚಿಂಗ್ ಅಡಿಯಲ್ಲಿ ಟೀಮ್ ಇಂಡಿಯಾ ಆಡುವ ಪಂದ್ಯವೇ ಕೊನೇ ಪಂದ್ಯವಾಗಲಿದೆ. ಆದ್ರೆ ಕೋಚ್ ಆಗಿರುವ ಅಷ್ಟೂ ಅವಧಿಯಲ್ಲಿ ಭಾರತ ಹಲವು ದಾಖಲೆಗಳನ್ನ ನಿರ್ಮಿಸಿದೆ.

ದಿ ವಾಲ್ ದ್ರಾವಿಡ್!

ಭಾರತೀಯ ಕ್ರಿಕೆಟ್‌ನ ಇತ್ತೀಚಿನ ದಿನಗಳಲ್ಲಿ ಅತ್ಯಂತ ಯಶಸ್ವಿ ಅವಧಿಯಾಗಿದೆ. ಭಾರತ ತಂಡವು ತವರಿನಲ್ಲಿ ಮತ್ತು ವಿದೇಶದಲ್ಲಿ ದ್ವಿಪಕ್ಷೀಯ ಸರಣಿಗಳಲ್ಲಿ ಪ್ರಾಬಲ್ಯ ಸಾಧಿಸಿದೆ. ಇದಕ್ಕೆ ಪ್ರಮುಖ ಕಾರಣವೇ ಹೆಡ್​ಕೋಚ್ ರಾಹುಲ್ ದ್ರಾವಿಡ್ ಸಾರಥ್ಯ. ತವರಿನಲ್ಲಿ ನಡೆದ ಸರಣಿಯಲ್ಲಿ ನ್ಯೂಜಿಲ್ಯಾಂಡ್‌ ವಿರುದ್ಧ 3-0 ಅಂತದಲ್ಲಿ ಭಾರತ ಕ್ಲೀನ್‌ಸ್ವೀಪ್‌ ಮಾಡಿತ್ತು. ಇದಲ್ಲದೇ ಇಂಗ್ಲೆಂಡ್‌, ಆಸ್ಟ್ರೇಲಿಯಾ, ವೆಸ್ಟ್‌ ಇಂಡೀಸ್, ದಕ್ಷಿಣ ಆಫ್ರಿಕಾ ವಿರುದ್ಧವೂ ಸರಣಿ ಜಯಿಸಿದೆ. ಟೀಂ ಇಂಡಿಯಾದ ದ್ರೋಣ ರಾಹುಲ್‌ರ ನೇತೃತ್ವದಲ್ಲಿ ಭಾರತ ತಂಡ ಹಲವು ಸರಣಿಗಳಲ್ಲಿ ಜಯ ಸಾಧಿಸಿದ್ದರೂ ವಿಶ್ವಕಪ್‌ ಟೂರ್ನಿಗಳಲ್ಲಿ ಹಿನ್ನಡೆ ಹೊಂದಿದೆ. 2022 ರ ಟಿ20 ವಿಶ್ವಕಪ್‌ನಲ್ಲಿ ಭಾರತ ಸೆಮಿಫೈನಲ್‌ನಲ್ಲಿ ಸೋಲು ಕಂಡಿತ್ತು. ಬಳಿಕ 2023 ರ ಏಕದಿನ ವಿಶ್ವಕಪ್‌ನಲ್ಲಿ ಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ನಿರಾಸೆ ಅನುಭವಿಸಿತ್ತು. ಏಕದಿನ ಮತ್ತು ಟಿ20 ಯಲ್ಲಿ ಮಾತ್ರವಲ್ಲದೇ, ಟೆಸ್ಟ್‌ನಲ್ಲೂ ಭಾರತ ತಂಡ ಮಹತ್ತರ ಸಾಧನೆ ಮಾಡಿದೆ. 2023ರ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ನಲ್ಲಿ ಫೈನಲ್‌ ತಲುಪಿತ್ತು. ಆಸ್ಟ್ರೇಲಿಯಾ ಎದುರು ಸೋಲು ಕಂಡಿತ್ತು. ದ್ರಾವಿಡ್‌ ನೇತೃತ್ವದಲ್ಲಿ ಆಡಿದ 24 ಪಂದ್ಯಗಳಲ್ಲಿ 14 ರಲ್ಲಿ ಗೆಲುವು ಸಾಧಿಸಿದೆ. 7 ರಲ್ಲಿ ಸೋತಿದೆ.  ಇನ್ನು ರಾಹುಲ್ ದ್ರಾವಿಡ್ ಟೀಂ ಇಂಡಿಯಾ ಸೀನಿಯರ್​​ ತಂಡದ ಕೋಚ್ ಆಗುವ ಮುನ್ನ ಅಂಡರ್​-19 ಟೀಂಗೂ ಕೋಚ್ ಆಗಿದ್ರು. ದ್ರಾವಿಡ್ ಕೋಚಿಂಗ್​​ನ ಅಡಿಯಲ್ಲಿ ಇಂಡಿಯನ್ ಅಂಡರ್​-19 ಟೀಂ ವರ್ಲ್ಡ್​​ಕಪ್​​ ಕೂಡ ಗೆದ್ದಿತ್ತು. ಹಾಗೆಯೇ ಇಂಡಿಯಾ-ಎ ಟೀಂಗೂ ದ್ರಾವಿಡ್​ ಕೋಚ್ ಆಗಿದ್ರು. ನ್ಯಾಷನಲ್ ಕ್ರಿಕೆಟ್ ಅಕಾಡೆಮಿಯ ಡೈರೆಕ್ಟರ್ ಆಗಿಯೂ ಕಾರ್ಯನಿರ್ವಹಿಸಿದ್ರು. ದೇಶಾದ್ಯಂತ ಹಲವು ಯುವ ಪ್ರತಿಭೆಗಳನ್ನ ಗುರುತಿಸಿ ಬೆಳೆಸಿದ್ರು. ಟ್ಯಾಲೆಂಟ್​​ ಹಂಟ್ ಮಾಡೋದ್ರಲ್ಲಿ ರಾಹುಲ್​ ದ್ರಾವಿಡ್​​ರದ್ದು ಎತ್ತಿದ ಕೈ. ಅಂಡರ್​-19 ಟೀಂ, ಇಂಡಿಯಾ-ಎ ಮತ್ತು ಎನ್​ಸಿಎ ಡೈರೆಕ್ಟರ್ ಆಗಿದ್ದಾಗ ದ್ರಾವಿಡ್ ಯುವ ಕ್ರಿಕೆಟಿಗರನ್ನ ಪತ್ತೆ ಮಾಡೋದಕ್ಕೆ ಹೆಚ್ಚಿನ ಒತ್ತು ಕೊಟ್ಟಿದ್ರು. ಅಂದ್ರೆ ಭವಿಷ್ಯದ ಟೀಂ ಇಂಡಿಯಾವನ್ನ ಕಟ್ಟೋಕೆ ರಾಹುಲ್ ದ್ರಾವಿಡ್ ಮುಂದಾಗಿದ್ರು. ಅದ್ರಲ್ಲೂ ಯಂಗ್ ಕ್ರಿಕೆಟರ್ಸ್​ಗೆ ಹೆಚ್ಚಿನ ಇಂಪಾರ್ಟೆನ್ಸ್ ನೀಡಿದ್ರು. ಮೊಹಮ್ಮದ್​ ಸಿರಾಜ್, ಇಶಾನ್ ಕಿಶನ್, ಶುಬ್ಮನ್ ಗಿಲ್, ಕುಲ್​ದೀಪ್ ಯಾದವ್ ಮತ್ತು ಶ್ರೇಯಸ್ ಅಯ್ಯರ್ ಇವರೆಲ್ಲರೂ ದ್ರಾವಿಡ್ ಗರಡಿಯಲ್ಲೇ ಬೆಳೆದವರು.

ಇನ್ನೊಂದು ವಿಚಾರ ಅಂದ್ರೆ ಕೋಚ್ ಆಗಿ ದ್ರಾವಿಡ್ ಯಾವ ಪ್ಲೇಯರ್​ ಮೇಲೂ ಪ್ರೆಷರ್ ಬೀಳದಂತೆ ನೋಡಿಕೊಳ್ತಾರೆ. ಪರ್ಫಾಮೆನ್ಸ್ ವಿಚಾರದಲ್ಲಿ ಯಾರ ಮೇಲೂ ಫೋರ್ಸ್​​ ಮಾಡುವವರಲ್ಲ. ತನ್ನ ನ್ಯಾಚ್ಯುರಲ್​ ಸ್ಟೈಲ್​ನಲ್ಲಿ, ಆತನ ಸ್ಟ್ರ್ಯಾಟಜಿಯಂತೆ ಆಡೋಕೆ ಅವಕಾಶ ಕೊಡ್ತಾರೆ. ನೆಟ್​ ಪ್ರಾಕ್ಟೀಸ್ ವೇಳೆ ರಾಹುಲ್ ದ್ರಾವಿಡ್ ಸೈಲೆಂಟ್ ಆಗಿ ನಿಂತು ನೋಡ್ತಿರ್ತಾರೆ. ಪ್ರತಿಯೊಬ್ಬ ಪ್ಲೇಯರ್​​ನ್ನೂ ಸೂಕ್ಷ್ಮವಾಗಿ ಗಮನಿಸ್ತಾರೆ. ಆತನ ಸಾಮರ್ಥ್ಯವನ್ನ ಡಿಟೇಲಾಗಿ ಸ್ಟಡಿ ಮಾಡಿ ಬಳಿಕ ಆತನಿಗೆ ಅಗತ್ಯವಿರೋ ಟಿಪ್ಸ್​ಗಳನ್ನ ನೀಡ್ತಾರೆ. ಹಾಗೇ ಪ್ಲೇಯರ್ಸ್ ಜೊತೆಗೆ ರಾಹುಲ್​ ದ್ರಾವಿಡ್ ತುಂಬಾನೆ ಫ್ರೀಯಾಗಿರ್ತಾರೆ. ತಾವೊಬ್ಬ ಕೋಚ್ ಅನ್ನೋ ರೀತಿಯಲ್ಲಿ ಯಾವತ್ತೂ ಪೋಸ್ ಕೊಟ್ಟವರೇ ಅಲ್ಲ. ಪ್ರತಿಯೊಬ್ಬ ಆಟಗಾರನೂ ಯಾವುದೇ ಅಂಜಿಕೆ ಇಲ್ಲದೆ ತಮ್ಮನ್ನ ರೀಚ್ ಆಗುವ ರೀತಿ ದ್ರಾವಿಡ್ ಟ್ರೀಟ್ ಮಾಡ್ತಾರೆ. ಟೀಂ ಇಂಡಿಯಾ ಪರ ಆಡ್ತಿದ್ದಾಗ ದ್ರಾವಿಡ್ ತುಂಬಾ ಸೀರಿಯಸ್ ಪ್ಲೇಯರ್ ಆಗಿದ್ರು. ಆದ್ರೆ ಕೋಚ್ ದ್ರಾವಿಡ್ ಮಾತ್ರ ಡ್ರೆಸ್ಸಿಂಗ್​ ರೂಮ್​​, ಟೀಮ್ ಮೇಟ್ಸ್​​ಗಳ ಜೊತೆ ತುಂಬಾ ಬಿಂದಾಸ್ ಆಗಿರ್ತಾರೆ. ಅಂತೂ ಟಿ-20 ವರ್ಲ್ಡ್​​ಕಪ್​ನಲ್ಲಿ ಟೀಂ ಇಂಡಿಯಾದ ಟಾಪ್ ಪರ್ಫಾಮೆನ್ಸ್​ಗೆ ರಾಹುಲ್​​ ದ್ರಾವಿಡ್ ಕೋಚಿಂಗ್ ಕೂಡ ಮುಖ್ಯ ಕಾರಣ. ಕ್ರಿಕೆಟರ್​ ಆಗಿ, ಬಳಿಕ ಕೋಚ್ ಆಗಿ ದ್ರಾವಿಡ್ ವಾಲ್​ನಂಥಾ ಟೀಂ ಕೂಡ ಕಟ್ಟಿದ್ದಾರೆ. ಭಾರತೀಯ ಕ್ರಿಕೆಟ್​ನ ಭವಷ್ಯವನ್ನ ಇನ್ನಷ್ಟು ಗಟ್ಟಿಗೊಳಿಸಿದ್ದಾರೆ. ಹೀಗಾಗಿ ರಾಹುಲ್​ ದ್ರಾವಿಡ್​ಗೊಂದು ಹ್ಯಾಟ್ಸಾಫ್ ಹೇಳಲೇಬೇಕು.

Shwetha M