96 ಎಸೆತಗಳಲ್ಲಿ 12 ರನ್ ಗಳಿಸಿದ್ದ ರಾಹುಲ್ ದ್ರಾವಿಡ್ – ಟೆಸ್ಟ್ ಕ್ರಿಕೆಟ್ ಆಡೋದೇ ಹಿಂಗೆ!
ವಿಶ್ವಕ್ರಿಕೆಟ್ನ ಸಾಂಪ್ರದಾಯಿಕ ಆಟ ಅಂತಾನೇ ಕರೆಸಿಕೊಳ್ಳೋ ಟೆಸ್ಟ್ ಕ್ರಿಕೆಟ್ಗೆ ಶತಮಾನದ ಇತಿಹಾಸವೇ ಇದೆ. ಭಾರತ ಕೂಡ 1932ರಲ್ಲೇ ಇಂಗ್ಲೆಂಡ್ ವಿರುದ್ಧ ಮೊದಲ ಬಾರಿಗೆ ಟೆಸ್ಟ್ ಕ್ರಿಕೆಟ್ ಆಡಿತ್ತು. ಅಂದಿನಿಂದ ಇಂದಿನವರೆಗೂ ಒಂದಷ್ಟು ಚೇಂಜಸ್ಗಳು ಆಗಿದ್ರೂ ಕೂಡ ರೆಡ್ ಬಾಲ್ ಕ್ರಿಕೆಟ್ನ ಜರ್ನಿ ಮಾತ್ರ ನಿಂತಿಲ್ಲ. ಅದ್ರಲ್ಲೂ ಟೀಂ ಇಂಡಿಯಾದ ಹಲವು ಆಟಗಾರರು ಟೆಸ್ಟ್ ಕ್ರಿಕೆಟ್ನ ಸುಲ್ತಾನರಾಗಿ ಮೆರೆದಿದ್ದಾರೆ. ಇವ್ರ ವಿಕೆಟ್ ಕೀಳೋದಿರಲಿ ಬಾಲ್ ಎಸೆದು ಎಸೆದು ಸುಸ್ತಾಗಿ ಕುಳಿತ ಅದೆಷ್ಟೋ ಉದಾಹರಣೆಗಳೂ ಇವೆ. ಇದ್ರಲ್ಲಿ ಪಸ್ಟ್ ಪ್ಲೇಸ್ನಲ್ಲಿ ನಿಲ್ಲೋದು ಟೀಂ ಇಂಡಿಯಾ ಪಾಲಿನ ದಿ ವಾಲ್ ಅಂತಾನೇ ಕರೆಸಿಕೊಳ್ಳೋ ನಮ್ಮ ಕನ್ನಡಿಗ ರಾಹುಲ್ ದ್ರಾವಿಡ್.
ಇದನ್ನೂ ಓದಿ : ರಣಜಿಯಲ್ಲೂ ಕೈಕೊಟ್ಟ ಕೊಹ್ಲಿ – BCCIಗೆ ಶುರುವಾಯ್ತು ಅಸಲಿ ಸವಾಲು
ಭಾರತ ಕ್ರಿಕೆಟ್ ತಂಡದ ಮಾಜಿ ಬ್ಯಾಟ್ಸ್‌ಮನ್ ರಾಹುಲ್ ದ್ರಾವಿಡ್ರ ಟೆಸ್ಟ್ ಕ್ರಿಕೆಟ್ನ ಭಾರತದ ಯಾವ ಅಭಿಮಾನಿಯೂ ಮರೆಯೋಕೆ ಸಾಧ್ಯನೇ ಇಲ್ಲ. ಅವ್ರ ಆಡ್ತಿದ್ದ ದಿನಗಳಲ್ಲಿ, ಬೌಲರ್‌ಗಳು ಅವರನ್ನು ಔಟ್ ಮಾಡೋಕೆ ಹೆಣಗಾಡ್ತಿದ್ರು. ಅದೆಷ್ಟರ ಮಟ್ಟಿಗೆ ಅಂದ್ರೆ ದ್ರಾವಿಡ್ ರನ್ ಸ್ಕೋರ್ ಮಾಡೋ ಕಡೆ ಗಮನನೇ ಕೊಡ್ತಿರ್ಲಿಲ್ಲ. ಜಸ್ಟ್ ವಿಕೆಟ್ ಉರುಳಬಾರದು ಅಷ್ಟೇ. ಫಾರ್ ಎಕ್ಸಾಂಪಲ್ ಹೇಳ್ಬೇಕಂದ್ರೆ 2007ರಲ್ಲಿ ದಿ ಓವಲ್ನಲ್ಲಿ ನಡೆದಿದ್ದ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ರಾಹುಲ್ ದ್ರಾವಿಡ್ ಅವರು 96 ಎಸೆತಗಳಲ್ಲಿ ಗಳಿಸಿದ್ದು 12 ರನ್ ಅಷ್ಟೇ. ಇದಕ್ಕಾಗಿ 144 ನಿಮಿಷಗಳ ಕಾಲ ಬ್ಯಾಟಿಂಗ್ ಮಾಡಿದ್ರು. ಅವ್ರ ಸ್ಲೋಯೆಸ್ಟ್ ಇನ್ನಿಂಗ್ಸ್‌ಗಳಲ್ಲಿ ಇದೂ ಒಂದು. 1996 ರಿಂದ 2012 ರವರೆಗೆ ಕ್ರಿಕೆಟ್ ಆಡಿದ್ದ ದ್ರಾವಿಡ್ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಅತಿ ಹೆಚ್ಚು ಎಸೆತಗಳನ್ನು ಎದುರಿಸಿದ ದಾಖಲೆ ಹೊಂದಿದ್ದಾರೆ. ಅಂದ್ರೆ ಅವ್ರ ಕ್ರಿಕೆಟ್ ಕರಿಯರ್ನಲ್ಲಿ ಒಟ್ಟಾರೆ 31,258 ಎಸೆತಗಳನ್ನು ಎದುರಿಸಿದ್ದಾರೆ. ಸಚಿನ್ ತೆಂಡೂಲ್ಕರ್ ಅವರು 200 ಪಂದ್ಯಗಳನ್ನ ಆಡಿದ್ದು 29,437 ಬಾಲ್ಗಳನ್ನ ಫೇಸ್ ಮಾಡಿದ್ದಾರೆ.
ಇನ್ನು ಟೆಸ್ಟ್ನಲ್ಲಿ ಅತೀ ತಾಳ್ಮೆಯುತವಾಗಿ ಆಡಿರೋ ಮತ್ತೊಬ್ಬ ಬ್ಯಾಟ್ಸ್‌ಮನ್ ಜಿಯೋಫ್ ಅಲಾಟ್. ನ್ಯೂಜಿಲೆಂಡ್ ತಂಡ ಎಡಗೈ ವೇಗದ ಬೌಲರ್ ಆಗಿದ್ದ ಜಿಯೋಫ್ ದಕ್ಷಿಣ ಆಫ್ರಿಕಾ ವಿರುದ್ಧದ 1999ರ ಆಕ್ಲೆಂಡ್ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ 101 ನಿಮಿಷಗಳಲ್ಲಿ 77 ಎಸೆತಗಳಿಗೆ ಬ್ಯಾಟಿಂಗ್ ಮಾಡಿದ್ರು. ಆದ್ರೆ ಒಂದೇ ಒಂದು ರನ್ ಕೂಡ ಗಳಿಸದೆ ಔಟ್ ಆಗಿದ್ರು. ಇನ್ನು ಇಂಗ್ಲೆಂಡ್‌ನ ಬಲಗೈ ವೇಗದ ಬೌಲರ್ ಸ್ಟುವರ್ಟ್ ಕ್ರಿಸ್ಟೋಫರ್ ಜಾನ್ ಬ್ರಾಡ್, 2013 ರಲ್ಲಿ ಆಕ್ಲೆಂಡ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದ ಎರಡನೇ ಇನ್ನಿಂಗ್ಸ್‌ನಲ್ಲಿ 137 ನಿಮಿಷಗಳಲ್ಲಿ 77 ಎಸೆತಗಳನ್ನು ಬ್ಯಾಟ್ ಮಾಡಿ ಒಂದೇ ಬೌಂಡರಿ ಸಹಾಯದಿಂದ 6 ರನ್ ಗಳಿಸಿದರು. ಇದೂ ಕೂಡ ಟೆಸ್ಟ್ ಕ್ರಿಕೆಟ್ನ ಸ್ಲೋಯೆಸ್ಟ್ ಸ್ಕೋರ್ಗಳಲ್ಲಿ ಒಂದಾಗಿದೆ. ಇಲ್ಲಿ ಹೆಚ್ಚು ಹೊತ್ತು ನಿಂತ್ರೂ ಸ್ಕೋರ್ ಜಾಸ್ತಿ ಇಲ್ಲ ಅಂತಾ ನಿಮಗೆ ಅನ್ನಿಸ್ಬೋದು. ಬಟ್ ಎದುರಾಳಿ ಆಟಗಾರರನ್ನ ಕಟ್ಟಿ ಹಾಕೋಕೆ ಇದೂ ಕೂಡ ಒಂದು ತಂತ್ರವೇ.