ಸಂಜು ಮುಗಿಸಲು ಮಹಾ ಸಂಚು – ಕೆರಿಯರ್ ಕಾಪಾಡಿದ್ದೇ ರಾಹುಲ್ ದ್ರಾವಿಡ್  

ಸಂಜು ಮುಗಿಸಲು ಮಹಾ ಸಂಚು – ಕೆರಿಯರ್ ಕಾಪಾಡಿದ್ದೇ ರಾಹುಲ್ ದ್ರಾವಿಡ್  

ಟಿ-20 ಫಾರ್ಮೆ್​ನ ಸ್ಫೋಟಕ ಬ್ಯಾಟ್ಸ್​ಮನ್ ಸಂಜು ಸ್ಯಾಮ್ಸನ್. ಸದ್ಯ ಇಂಗ್ಲೆಂಡ್ ವಿರುದ್ಧದ ಟಿ-20 ಸಿರೀಸ್​ನಲ್ಲಿ ಆಡ್ತಿದ್ದಾರೆ. ಆದ್ರೆ ಸಂಜು ಮತ್ತು ಕೇರಳ ಕ್ರಿಕೆಟ್ ಅಸೋಸಿಯೇಶನ್ ನಡುವಿನ ಕೋಲ್ಡ್ ವಾರ್ ಮುಗಿಯೋ ಲಕ್ಷಣಗಳೇ ಕಾಣ್ತಿಲ್ಲ. ಸಂಜು ಅವರ ತಂದೆ ವಿಶ್ವನಾಥ್ ದಿನಕ್ಕೊಂದು ಸ್ಫೋಟಕ ಸೀಕ್ರೆಟ್​ಗಳನ್ನ ಬಿಚ್ಚಿಡ್ತಿದ್ದಾರೆ. ಕೇರಳ ಕ್ರಿಕೆಟ್ ಅಸೋಸಿಯೇಶನ್ ತನ್ನ ಮಗನನ್ನ ನಡೆಸಿಕೊಂಡ ಬಗೆಗೆ ಕಿಡಿಕಾರಿದ್ದಾರೆ. ಕೆಸಿಎ ಅಧಿಕಾರಿಗಳ ಅಸೂಯೆಯಿಂದಾಗಿಯೇ ತನ್ನ ಮಗನ ಕ್ರಿಕೆಟ್ ಕರಿಯರ್​ಗೆ ತೊಂದರೆಯಾಯ್ತು ಎಂದಿದ್ದಾರೆ. ಇದೇ ವೇಳೆ ಟೀಂ ಇಂಡಿಯಾದ ಮಾಜಿ ಕೋಚ್ ರಾಹುಲ್ ದ್ರಾವಿಡ್ ಅವ್ರ ಬಗ್ಗೆ ಅಚ್ಚರಿಯ ಹೇಳಿಕೆ ನೀಡಿದ್ದಾರೆ.

ಇದನ್ನೂ ಓದಿ: ಚಾಂಪಿಯನ್ಸ್ ಟ್ರೋಫಿಗೆ ಪ್ಲೇಯಿಂಗ್ 11ನಿಂದ ಯಾರು ಔಟ್? – KL ಅವಕಾಶ ಕಿತ್ತುಕೊಳ್ತಾರಾ?

ಸಂಜು ಸ್ಯಾಮ್ಸನ್​ 11 ವರ್ಷದವನಿದ್ದಾಗಲೇ ಅವನನ್ನ ಟಾರ್ಗೆಟ್ ಮಾಡಲಾಗಿತ್ತು. ಕೇರಳ ಕ್ರಿಕೆಟ್ ಅಸೋಸಿಯೇಷನ್  ಆತನ ಕ್ರಿಕೆಟ್ ಬದುಕನ್ನು ಹಾಳುಮಾಡಲು ಯತ್ನಿಸಿತ್ತು. ಆದರೆ ರಾಹುಲ್ ದ್ರಾವಿಡ್ ಅವರು ಮಧ್ಯ ಪ್ರವೇಶಿಸಿ ಎಲ್ಲವನ್ನೂ ತಿಳಿಗೊಳಿಸಿದರು ಅಂತಾ ವಿಶ್ವನಾಥ್ ಹೇಳಿಕೆ ನೀಡಿದ್ದಾರೆ. ಸಂದರ್ಶನವೊಂದ್ರಲ್ಲಿ ಮಾತನಾಡಿರುವ ವಿಶ್ವನಾಥ್, ಕೆಸಿಎ ನನ್ನ ಮಗನನ್ನು ನಿರ್ಲಕ್ಷಿಸಿದ್ದು ಅಷ್ಟೇ ಅಲ್ಲ.  ಆತನ ಭವಿಷ್ಯಕ್ಕೇ ಕೊಳ್ಳಿ ಇಡಲು ಹೊರಟಿತ್ತು. ಈ ಸಂದರ್ಭದಲ್ಲೇ ದ್ರಾವಿಡ್ ಅವರು ಮಧ್ಯೆ ಪ್ರವೇಶಿಸಿದರು. ಸಂಜು ಇಂದು ಈ ಮಟ್ಟಕ್ಕೆ ತಲುಪೋಕೆ ಅವರೇ ಕಾರಣ.  ಸಂಜು ಯಾವತ್ತೂ ದ್ರಾವಿಡ್ ಅವರಿಗೆ ಋಣಿಯಾಗಿರ್ತಾನೆ. ನಮಗೆ ಉಪಕಾರ ಮಾಡಿದವರನ್ನು, ಔದಾರ್ಯ ತೋರಿದವರನ್ನು ನಾವು ಯಾವತ್ತೂ ಮರೆಯೊಲ್ಲ ಎಂದಿದ್ದಾರೆ. ಅಷ್ಟೇ ಅಲ್ದೇ ಸಂಜು ಸ್ಯಾಮ್ಸನ್ ವಿರುದ್ಧ ಕೆಸಿಎ ಕ್ರಮಕ್ಕೆ ಮುಂದಾಗಿದ್ದಾಗ ಕ್ರಿಕೆಟ್​ನೇ ತೊರೆಯೋಕೆ ಹೊರಟಿದ್ದ ನನ್ನ ಮಗ. ನಾವೆಲ್ಲರೂ ಇದೇ ನೋವಲ್ಲಿದ್ದಾಗ ರಾಹುಲ್ ದ್ರಾವಿಡ್ ಅವರು ಸಂಜುಗೆ ಕರೆ ಮಾಡಿ ಧೈರ್ಯ ತುಂಬಿದ್ದರು. ಆಂದು ಆತನ ಖುಶಿಗೆ ಪಾರವೇ ಇರಲಿಲ್ಲ ಎಂದು ಹಿಂದಿನ ಘಟನೆಯನ್ನ ನೆನಪಿಸಿಕೊಂಡಿದ್ದಾರೆ.

ಅಷ್ಟಕ್ಕೂ ಸಂಜು ಅವ್ರ ತಂದೆ ವಿಶ್ವನಾಥ್ ಈ ರೀತಿಯ ಆರೋಪಗಳನ್ನ ಮಾಡ್ತಿರೋದು ಇದೇ ಮೊದಲಲ್ಲ.  ಮಹೇಂದ್ರ ಸಿಂಗ್ ಧೋನಿ, ವಿರಾಟ್ ಕೊಹ್ಲಿ ರೋಹಿತ್ ಶರ್ಮಾ ಮತ್ತು ಮುಖ್ಯ ಕೋಚ್ ಆಗಿದ್ದ ರಾಹುಲ್ ದ್ರಾವಿಡ್ ತಮ್ಮ ಮಗನ ವೃತ್ತಿಜೀವನವನ್ನು ಹಾಳು ಮಾಡಿದ್ರು. ಹತ್ತು ವರ್ಷಗಳ ಸಮಯವನ್ನು ವ್ಯರ್ಥ ಮಾಡಿದರು ಎಂದು ಆರೋಪಿಸಿದ್ದರು. ಪ್ರಸ್ತುತ ಮುಖ್ಯ ಕೋಚ್ ಗೌತಮ್ ಗಂಭೀರ್ ಮತ್ತು ಟಿ20 ತಂಡದ ನಾಯಕ ಸೂರ್ಯಕುಮಾರ್ ಯಾದವ್ ತಮ್ಮ ಮಗನಿಗೆ ಬೆಂಬಲ ನೀಡುತ್ತಿರುವುದಾಗಿ ಹೇಳಿದ್ರು. ಆದ್ರೀಗ ರಾಹುಲ್ ದ್ರಾವಿಡ್​ರಿಂದ ನನ್ನ ಮಗನ ಕೆರಿಯರ್ ಉಳೀತು ಎಂದಿದ್ದಾರೆ.

Shantha Kumari

Leave a Reply

Your email address will not be published. Required fields are marked *