ರಾಹುಲ್ ದ್ರಾವಿಡ್ ಕೋಚ್ ಅಲ್ಲ, ಮೆಂಟರ್ – ಟೀಮ್ ಇಂಡಿಯಾ ಕೋಚ್ ಆಗಿ ಮುಂದುವರೆಯಲು ಒಪ್ಪಿಕೊಂಡಿಲ್ಲವೇ ದ್ರಾವಿಡ್?
ವರ್ಲ್ಡ್ಕಪ್ವರೆಗೆ ಟೀಂ ಇಂಡಿಯಾ ಕೋಚ್ ಆಗಿದ್ದ ರಾಹುಲ್ ದ್ರಾವಿಡ್ ಭವಿಷ್ಯದ ಬಗ್ಗೆಯೇ ಈಗ ಎಲ್ಲರಿಗೂ ಪ್ರಶ್ನೆ ಇದೆ. ದ್ರಾವಿಡ್ರನ್ನ ಹೆಡ್ ಕೋಚ್ ಆಗಿ ಬಿಸಿಸಿಐ ಮುಂದುವರೆಸುವ ಯೋಚನೆಯಲ್ಲಿದೆಯಾ? ಕೋಚ್ ಆಗಿ ಮುಂದುವರಿಯಲು ರಾಹುಲ್ ದ್ರಾವಿಡ್ ಒಪ್ತಾರಾ?. ದ್ರಾವಿಡ್ ಹೊಸ ರೋಲ್ ಏನಿರಬಹುದು? ಹೀಗೆ ಹಲವು ಪ್ರಶ್ನೆಗಳಿವೆ. ಈ ಮಧ್ಯೆ, ದ್ರಾವಿಡ್ ಟೀಂ ಇಂಡಿಯಾ ಕೋಚ್ ಆಗಿ ಮುಂದುವರೆಯದೇ ಇದ್ದರೂ ಕೂಡಾ ಗೆ ಆಫರ್ಗಳಿಗೇನೂ ಕಡಿಮೆ ಇಲ್ಲ. ಈ ಬಗ್ಗೆ ಹೆಚ್ಚಿನ ವಿವರಣೆ ಇಲ್ಲಿದೆ.
ಇದನ್ನೂ ಓದಿ: ಟೀಂ ಇಂಡಿಯಾದ ಹೊಸ ಕೋಚ್ ಯಾರು? – ರಾಹುಲ್ ದ್ರಾವಿಡ್ ಕೋಚ್ ಆಗಿ ಮುಂದುವರೀತಾರಾ?
ಐಪಿಎಲ್ ಸೀಸನ್ ವಿಚಾರವಾಗಿ ಸಾಕಷ್ಟು ಬೆಳವಣಿಗೆಗಳಾಗ್ತಿವೆ. ಡಿಸೆಂಬರ್ನಲ್ಲಿ ಬಿಡ್ಡಿಂಗ್ ಬೇರೆ ನಡೆಯಲಿದೆ. ಫ್ರಾಂಚೈಸಿಗಳಲ್ಲೂ ಒಂದಷ್ಟು ಚೇಂಜೆಸ್ಗಳಾಗುತ್ತಿದೆ. ಕಳೆದ ಎರಡು ಸೀಸನ್ಗಳಲ್ಲಿ ಕೆಎಲ್ ರಾಹುಲ್ ಕ್ಯಾಪ್ಟನ್ಸಿಯ ಲಕ್ನೋ ಸೂಪರ್ ಜೈಂಟ್ಸ್ ಟೀಮ್ಗೆ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಮೆಂಟರ್ ಆಗಿದ್ದರು. ಗಂಭೀರ್ ಮೆಂಟರ್ಶಿಪ್ನಲ್ಲಿ ಲಕ್ನೋ ಟೀಮ್ ಅದ್ಭುತ ಪ್ರದರ್ಶನ ನೀಡಿತ್ತು. ತನ್ನ ಫಸ್ಟ್ ಸೀಸನ್ನಲ್ಲಿ ಫೈನಲ್ ತಲುಪಿತ್ತು. ಸೆಕೆಂಡ್ ಸೀಸನ್ನಲ್ಲಿ ಸೆಮಿಫೈನಲ್ನಲ್ಲೂ ಆಡಿತ್ತು. ಇದೀಗ ಗೌತಮ್ ಗಂಭೀರ್ ಲಕ್ನೋಗೆ ಗುಡ್ಬೈ ಹೇಳಿದ್ದಾರೆ. ತಮ್ಮ ಕ್ಯಾಪ್ಟನ್ಸಿಯಲ್ಲಿ ಎರಡು ಬಾರಿ ಐಪಿಎಲ್ ಗೆದ್ದ ಕೊಲ್ಕತ್ತಾ ನೈಟ್ ರೈಡರ್ಸ್ ಟೀಮ್ ಸೇರಿಕೊಂಡಿದ್ದಾರೆ. ಈ ಬಾರಿ ಕೆಕೆಆರ್ಗೆ ಗೌತಮ್ ಗಂಭೀರ್ ಮೆಂಟರ್ ಆಗಿರಲಿದ್ದಾರೆ. ಅಂದು ಕ್ಯಾಪ್ಟನ್ ಆಗಿ ಶಾರುಖ್ ಟೀಂಗೆ ಕಪ್ ಗೆಲ್ಲಿಸಿದ್ದ ಗೌತಮ್ ಗಂಭೀರ್ ಈಗ ಮೆಂಟರ್ ಆಗಿ ಮತ್ತೆ ಕೆಕೆಆರ್ನ್ನ ಚಾಂಪಿಯನ್ ಮಾಡೋಕೆ ಮುಂದಾಗಿದ್ದಾರೆ. ಗೌತಮ್ ಗಂಭೀರ್ ಲಕ್ನೋ ಮೆಂಟರ್ಶಿಪ್ ತೊರೆದಿರೋದ್ರಿಂದ ಈಗ ರಾಹುಲ್ ದ್ರಾವಿಡ್ ಲಕ್ನೋ ಟೀಮ್ ಸೇರುತ್ತಾರಾ ಎಂಬ ಕುತೂಹಲ ಶುರುವಾಗಿದೆ. ಒಂದು ವೇಳೆ ದ್ರಾವಿಡ್ ಟೀಂ ಇಂಡಿಯಾ ಕೋಚ್ ಆಗಿ ಮುಂದುವರಿಯಲ್ಲ ಅಂದರೆ, ಕೆಎಲ್ ರಾಹುಲ್ ನೇತೃತ್ವದ ಲಕ್ನೋ ಸೂಪರ್ ಜೈಂಟ್ಸ್ಗೆ ಮೆಂಟರ್ ಆಗುವ ಸಾಧ್ಯತೆ ಹೆಚ್ಚಿದೆ. ಈಗಾಗ್ಲೇ ರಾಹುಲ್ ದ್ರಾವಿಡ್ ಲಕ್ನೋ ಮ್ಯಾನೇಜ್ಮೆಂಟ್ ಜೊತೆಗೆ ಮಾತುಕತೆ ಕೂಡ ನಡೆಸಿದ್ದಾರಂತೆ. ಹೇಳಿ ಕೇಳಿ ಕೆಎಲ್ ರಾಹುಲ್ ಲಕ್ನೋ ತಂಡದ ಕ್ಯಾಪ್ಟನ್ ಆಗಿದ್ದಾರೆ. ಅವರ ಜೊತೆಗೆ ದ್ರಾವಿಡ್ಗೆ ಒಳ್ಳೆಯ ಅಂಡರ್ಸ್ಟ್ಯಾಂಡಿಂಗ್ ಕೂಡ ಇದೆ. ಹೀಗಾಗಿ ಲಕ್ನೋ ಮ್ಯಾನೇಜ್ಮೆಂಟ್ ದ್ರಾವಿಡ್ರನ್ನ ಮೆಂಟರ್ ಆಗಿ ಮಾಡೋಕೆ ಯೋಚನೆ ಮಾಡ್ತಿರೋದು ಸರಿಯಾದ ನಿರ್ಧಾರವೇ. ಆದ್ರೆ ಬಿಸಿಸಿಐ ಈಗ ಯಾವ ನಿರ್ಧಾರಕ್ಕೆ ಬರುತ್ತೆ ಅನ್ನೋದು ತುಂಬಾ ಇಂಪಾರ್ಟೆಂಟ್. ರಾಹುಲ್ ದ್ರಾವಿಡ್ ಭವಿಷ್ಯ ಬಿಸಿಸಿಐ ಕೈಯಲ್ಲೇ ಇದೆ. ಹೀಗಾಗಿ ದ್ರಾವಿಡ್ ಕೋಚಿಂಗ್ ಅವಧಿಯನ್ನ ವಿಸ್ತರಿಸಬೇಕಾ? ಬೇಡ್ವಾ ಅನ್ನೋ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳೋಕೆ ಬಿಸಿಸಿಐ ಶೀಘ್ರವೇ ಮಹತ್ವದ ಸಭೆ ನಡೆಸಲಿದೆ. ಐಪಿಎಲ್ನಲ್ಲಿ ಎರಡು ತಿಂಗಳುಗಳ ಕಾಲ ಮೆಂಟರ್ ಆಗಿದ್ದು ಬಳಿಕ ಕುಟುಂಬದ ಜೊತೆಗೂ ಕಾಲ ಕಳೀಬಹುದಲ್ಲಾ ಅನ್ನೋ ಲೆಕ್ಕಾಚಾರದಲ್ಲಿ ದ್ರಾವಿಡ್ ಇದ್ದಾರೆ ಅಂತಾ ಹೇಳಲಾಗ್ತಿದೆ. ಇನ್ನು ದ್ರಾವಿಡ್ ಅವರಿಗೆ ಕೇವಲ ಲಕ್ನೋ ಫ್ರಾಂಚೈಸ್ನಿಂದಷ್ಟೇ ಅಲ್ಲ, ರಾಜಸ್ಥಾನ ರಾಯಲ್ಸ್ನಿಂದಲೂ ಆಫರ್ ಇದೆ. ಈ ಹಿಂದೆ ದ್ರಾವಿಡ್ ಹಲವು ವರ್ಷಗಳ ಕಾಲ ರಾಜಸ್ಥಾನ್ ರಾಯಲ್ಸ್ ಪರ ಆಡಿದ್ದರು. ಆ ತಂಡದ ಮೆಂಟರ್ ಕೂಡ ಆಗಿದ್ದರು.