ಟೀಮ್ ಇಂಡಿಯಾ ಕೋಚ್ ರಾಹುಲ್ ದ್ರಾವಿಡ್ ಆರೋಗ್ಯದಲ್ಲಿ ಏರುಪೇರು – ದಿಢೀರ್ ಬೆಂಗಳೂರಿಗೆ ಪ್ರಯಾಣ
ಟೀಮ್ ಇಂಡಿಯಾ ಕೋಚ್ ರಾಹುಲ್ ದ್ರಾವಿಡ್ ಆರೋಗ್ಯದಲ್ಲಿ ಏರುಪೇರಾಗಿದ್ದು, ದಿಢೀರಾಗಿ ಬೆಂಗಳೂರಿಗೆ ಆಗಮಿಸಿದ್ದಾರೆ. ಪಂದ್ಯದ ವೇಳೆ ಡ್ರೆಸ್ಸಿಂಗ್ ರೂಮ್‌ನಲ್ಲಿದ್ದ ರಾಹುಲ್ ಅವರಿಗೆ ಎರಡನೇ ಪಂದ್ಯಕ್ಕೂ ಮುನ್ನ ಹೋಟೆಲ್‌ನಲ್ಲಿ ರಕ್ತದೊತ್ತಡ ಸಮಸ್ಯೆ ಕಾಣಿಸಿಕೊಂಡಿತ್ತು. ತಕ್ಷಣವೇ ಬಂಗಾಳ ಕ್ರಿಕೆಟ್ ಸಂಸ್ಥೆ ರಾಹುಲ್ ದ್ರಾವಿಡ್ ಅವರಿಗೆ ವೈದ್ಯರಿಂದ ಚಿಕಿತ್ಸೆ ಕೊಡಿಸುವ ವ್ಯವಸ್ಥೆ ಮಾಡಿತ್ತು. ಸ್ವಲ್ಪ ಸಮಯದಲ್ಲೇ ರಾಹುಲ್ ದ್ರಾವಿಡ್ ಚೇತರಿಸಿಕೊಂಡಿದ್ದರು. ಇದೀಗ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಆಗಮಿಸಿದ್ದಾರೆ.
ಇದನ್ನೂ ಓದಿ: ತಾಲಿಬಾನ್ ಆದೇಶಕ್ಕೆ ವಿರೋಧ – ಅಫ್ಘಾನಿಸ್ತಾನ ನಡುವಿನ ಏಕದಿನ ಸರಣಿಯಿಂದ ಹಿಂದೆ ಸರಿದ ಆಸ್ಟ್ರೇಲಿಯಾ
ಗುರುವಾರ ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಸ್ಟೇಡಿಯಂನಲ್ಲಿ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಭಾರತ ತಂಡ ಶ್ರೀಲಂಕಾವನ್ನು ಸೋಲಿಸಿತು. ಈ ಗೆಲುವಿನೊಂದಿಗೆ ಟೀಂ ಇಂಡಿಯಾ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ 2-0 ಅಂತರದ ಅಜೇಯ ಮುನ್ನಡೆ ಸಾಧಿಸಿದೆ. ಸರಣಿ ವಶಪಡಿಸಿಕೊಂಡ ಸಂತಸದಲ್ಲಿದ್ದ ಟೀಮ್ ಇಂಡಿಯಾ ಆಟಗಾರರು, ಡ್ರೆಸ್ಸಿಂಗ್ ರೂಮ್‌ನಲ್ಲಿ ಆತಂಕಕ್ಕೊಳಗಾಗಿದ್ದರು. ಕೋಚ್ ರಾಹುಲ್ ದ್ರಾವಿಡ್ ಆರೋಗ್ಯ ಏರುಪೇರಾಗಿದ್ದು ಆಟಗಾರರಲ್ಲೂ ಆತಂಕ ಮೂಡಿತ್ತು. ಅದಲ್ಲದೇ, ಮೂರನೇ ಪಂದ್ಯಕ್ಕೆ ಕೋಚ್ ಇರುವುದಿಲ್ಲ ಅನ್ನೋ ಬೇಸರವೂ ತುಂಬಿತ್ತು.
ಎರಡು ದಿನಗಳ ಹಿಂದೆ ರಾಹುಲ್ ದ್ರಾವಿಡ್ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದರು. ಜನವರಿ 11ರಂದು ಕೋಲ್ಕತ್ತಾ ತಲುಪಿದಾಗ, ತಂಡದ ಜೊತೆ ಹೋಟೆಲ್‌ನಲ್ಲಿ ಕೇಕ್ ಕತ್ತರಿಸಿ, ದ್ರಾವಿಡ್ ಜನ್ಮದಿನವನ್ನು ಆಚರಿಸಲಾಗಿತ್ತು. ತಂಡದ ಹೊರತಾಗಿ ಕ್ರಿಕೆಟ್ ಜಗತ್ತಿನ ಎಲ್ಲ ದೊಡ್ಡ ವ್ಯಕ್ತಿಗಳು ಅವರಿಗೆ ಶುಭ ಕೋರಿದ್ದರು. ಬಳಿಕ ಎರಡನೇ ಏಕದಿನ ಪಂದ್ಯವನ್ನು ಗೆಲ್ಲುವುದರೊಂದಿಗೆ ಸರಣಿಯನ್ನೂ ಗೆದ್ದ ಟೀಂ ಇಂಡಿಯಾ, ದ್ರಾವಿಡ್ಗೆ ಗೆಲುವನ್ನು ಹುಟ್ಟುಹಬ್ಬದ ಉಡುಗೊರೆಯಾಗಿ ನೀಡಿದೆ.