ಕೆ.ಎಲ್ ರಾಹುಲ್ ಮತ್ತು ನಟಿ ಅಥಿಯಾ ಶೆಟ್ಟಿ ವಿವಾಹಕ್ಕೆ ಸಿದ್ಧತೆ- ಮದುವೆ ಮನೆ ಝಗಮಗ

ಕೆ.ಎಲ್ ರಾಹುಲ್ ಮತ್ತು ನಟಿ ಅಥಿಯಾ ಶೆಟ್ಟಿ ವಿವಾಹಕ್ಕೆ ಸಿದ್ಧತೆ- ಮದುವೆ ಮನೆ ಝಗಮಗ

ಟೀಂ ಇಂಡಿಯಾದ ಸ್ಟಾರ್ ಬ್ಯಾಟ್ಸ್‌ಮನ್ ಕೆ.ಎಲ್ ರಾಹುಲ್ ಮತ್ತು ನಟಿ ಅಥಿಯಾ ಶೆಟ್ಟಿ ಮದುವೆಗೆ ಸಕಲ ಸಿದ್ದತೆಗಳು ನಡೆಯುತ್ತಿದೆ. ಈಗಾಗಲೇ ಮದುವೆ ತಯಾರಿ ಶುರುವಾಗಿದ್ದು, ಮದುವೆ ಮನೆ ಅಲಂಕಾರಗೊಂಡಿದೆ. ಕೆ.ಎಲ್ ರಾಹುಲ್ ಅವರ ಮುಂಬೈನ ಮನೆಯಂತೂ ದೀಪಾಲಂಕಾರದಿಂದ ಝಗಮಗ ಹೊಳೆಯುತ್ತಿದೆ. ಬಾಲಿವುಡ್ ನಟ ಸುನಿಲ್ ಶೆಟ್ಟಿ ಅವರ ಫಾರ್ಮ್‌ಹೌಸ್‌ನಲ್ಲಿ ವಿವಾಹ ಕಾರ್ಯಕ್ರಮಗಳು ನಡೆಯಲಿದೆ. ಜನವರಿ 21 ರಿಂದ ವಿವಿಧ ವಿವಾಹ ಪೂರ್ವ ಕಾರ್ಯಕ್ರಮಗಳು ಪ್ರಾರಂಭವಾಗಲಿದ್ದು, ಕೆಲವೇ ಅತಿಥಿಗಳಿಗೆ ಮಾತ್ರ ಆಹ್ವಾನ ನೀಡಲಾಗಿದೆ ಎಂಬುದು ತಿಳಿದುಬಂದಿದೆ.

ಇದನ್ನೂ ಓದಿ:  ತೆಲುಗಿನಲ್ಲಿ ಮತ್ತೊಂದು ಚಿತ್ರ ಘೋಷಣೆ – ಟಾಲಿವುಡ್‌ನಲ್ಲಿ ಫಿಕ್ಸ್ ಆದ್ರಾ ಪ್ರಶಾಂತ್ ನೀಲ್..?

ಜನವರಿ 23 ರಂದು ಕೆ.ಎಲ್ ರಾಹುಲ್ ಮತ್ತು ಅಥಿಯಾ ಮದುವೆ ಸಮಾರಂಭ ನೆರವೇರಲಿದೆ. ಇದಕ್ಕಾಗಿ ರಾಹುಲ್ ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಯಿಂದ ವಿರಾಮ ತೆಗೆದುಕೊಂಡಿದ್ದಾರೆ. ಅಲ್ಲದೆ ಬಿಸಿಸಿಐ (BCCI) ಕೂಡ ಕಿವೀಸ್ ವಿರುದ್ಧದ ಸರಣಿಗೆ ತಂಡವನ್ನು ಪ್ರಕಟಿಸುವಾಗ ರಾಹುಲ್ ಹಾಗೂ ಅಕ್ಷರ್ ಪಟೇಲ್ ಕೌಟುಂಬಿಕ ಕಾರಣಗಳಿಂದ ನ್ಯೂಜಿಲೆಂಡ್ ಸರಣಿಯಿಂದ ಹಿಂದೆ ಸರಿದಿದ್ದಾರೆ ಎಂಬ ಮಾಹಿತಿ ನೀಡಿತ್ತು. ಜನವರಿ 21 ರಿಂದ ವಿವಾಹ ಕಾರ್ಯಕ್ರಮಗಳು ಪ್ರಾರಂಭವಾಗಲಿದ್ದು, ಅಥಿಯಾ ಅವರ ಸ್ನೇಹಿತರು, ಸಹೋದರ ಅಹಾನ್ ಶೆಟ್ಟಿ, ತಾಯಿ ಮಾಯಾ ಶೆಟ್ಟಿ ಮತ್ತು ತಂದೆ ಸುನಿಲ್ ಶೆಟ್ಟಿ ಸಂಗೀತ ಕಾರ್ಯಕ್ರಮದಲ್ಲಿ ನೃತ್ಯ ಪ್ರದರ್ಶಿಸಲಿದ್ದಾರೆ.

suddiyaana