ಬಿಗ್‌ಬಾಸ್ ಮನೆಯಲ್ಲಿ ರಗಡ್ ರಘು ಅಬ್ಬರ – ರೊಚ್ಚಿಗೆದ್ದ ಅಶ್ವಿನಿ-ಜಾಹ್ನವಿ!

ಬಿಗ್‌ಬಾಸ್ ಮನೆಯಲ್ಲಿ ರಗಡ್ ರಘು ಅಬ್ಬರ – ರೊಚ್ಚಿಗೆದ್ದ ಅಶ್ವಿನಿ-ಜಾಹ್ನವಿ!

ಬಿಗ್ ಬಾಸ್ ಮನೆಯಲ್ಲಿ ಈಗ ರಿಯಲ್ ಅಬ್ಬರ ಶುರುವಾಗಿದೆ. ಬಿಗ್ ಬಾಸ್ ಮನೆಯಲ್ಲಿ ನಾನೇ ಬಾಸ್, ನಂದೇ ರೂಲ್ಸ್ ಅಂತಾ ಹಾರಾಡಿಕೊಂಡಿದ್ದ ಅಶ್ವಿನಿ ಗೌಡ ಅವರಿಗೆ ಎದುರಾಳಿ ಸಿಕ್ಕಿದ್ದಾರೆ. ಜೊತೆಗೆ ಅಶ್ವಿನಿ ಚಮಚ ಅಂತಾ ಸೋಶಿಯಲ್ ಮೀಡಿಯಾದಲ್ಲಿ ಕರೆಸಿಕೊಂಡಿದ್ದ ಜಾಹ್ನವಿ ಕೂಡಾ ರಘು ಅಬ್ಬರಕ್ಕೆ ತತ್ತರಗೊಂಡಿದ್ದಾರೆ.

ಇದನ್ನೂ ಓದಿ:ತಪ್ಪಾಗಿ ಆಡಿದ ಮಾತಿಗೆ ಬುದ್ಧಿ ಕಲಿಸದೇ ಬಿಡಲ್ಲ! – ರಕ್ಷಿತಾ ಪರ ನಿಂತ ಕಿಚ್ಚ ಸುದೀಪ್!‌

ಬಿಗ್ ಬಾಸ್ ಮನೆಯಲ್ಲಿ ಈ ಬಾರಿ ಬರೀ ಗಲಾಟೆ, ಅಬ್ಬರವೇ ಜೋರಾಗಿತ್ತು. ಇದೀಗ ಕ್ವಾಟ್ಲೆ ಕಿಚನ್ ಶೋ ವಿನ್ನರ್ ಮ್ಯೂಟಂಟ್ ರಘು ದೊಡ್ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ಮೊದಲೇ ಹೇಳಿ ಕಳಿಸಿರೋ ತರವೇ ಮನೆ ಒಳಗೆ ಸಿಂಹ ಘರ್ಜನೆ ಮಾಡುತ್ತಿದ್ದಾರೆ. ಮೊದಲೇ ರಘು ಅಬ್ಬರ ಒಂದು ಕೈ ಜೋರಿದೆ. ಇವರಿಗೆ ಎದುರಾಳಿಯಾಗಿ ಅಶ್ವಿನಿ ಗೌಡ ಮತ್ತು ಜಾಹ್ನವಿ ಸಿಕ್ಕಿದರೆ ಕೇಳಬೇಕಾ. ಸಹನೆ ಇಲ್ಲದೆ ಇರೋ ರಗಡ್ ಮನುಷ್ಯ ರಘು ಮನೆ ಒಳಗೆ ಕಾಲಿಟ್ಟಿದ್ದೇ ತಡ, ಅಬ್ಬರಿಸ್ದಾರೆ. ಲೌಡ್ ಸ್ಪೀಕರ್ ಹಿಡಿದುಕೊಂಡು ಮನೆ ಒಳಗೆ ಕಾಲಿಟ್ಟಿದ್ದಾರೆ. ಅರಾಮಾಗಿ ಮಲಗಿ ಕೊಂಡವ್ರನ್ನ ಕೂಗುತ್ತಲೇ ಎಬ್ಬಿಸಿದ್ದಾರೆ. ಇದು ರೆಸಾರ್ಟ್ ಅಲ್ವೇ ಅಲ್ಲ. ಮೇಲೆ ಹೇಳಿ ಅಂತ ಆವಾಜ್ ಹಾಕಿದ್ದಾರೆ.

ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಬಂದ ರಘು, ಅಬ್ಬರಿಸುತ್ತಿದ್ದಾರೆ. ಮನೆಯಲ್ಲಿ ಮಲಗಿದವರನ್ನ ರಘು ಬೇರೆ ರೀತಿನೇ ಎಬ್ಬಿಸಿದ್ದಾರೆ. ಮನೆಯ ಗಂಡು ಮಕ್ಕಳನ್ನ ಸೇರಿದಂತೆ ಎಲ್ಲರನ್ನು ಕರೆದುಕೊಂಡು ಬಂದು ಕುರ್ಚಿ ಮೇಲೆ ಕೂಡಿಸಿ ನೀರು ಸುರಿದಿದ್ದಾರೆ. ಇದರಿಂದ ಯಾರೆಲ್ಲ ಅದೆಷ್ಟು ಡಿಸ್ಟರ್ಬ್ ಆಗಿದ್ದಾರೋ ಏನೋ? ಆದರೆ, ತಮ್ಮಲ್ಲಿರೋ ಸಿಟ್ಟನ್ನ ಮೊದಲು ಜಾಹ್ನವಿ ಹೊರಗೆ ಹಾಕುತ್ತಾರೆ. ತಮ್ಮದೇ ರೀತಿಯಲ್ಲಿಯೇ ಅವಾಜ್ ಹಾಕುತ್ತಾರೆ. ಕಳೆದ ಸಲದ ಬಿಗ್ ಬಾಸ್ ಅಲ್ಲಿ ಶೋಭಾ ಶೆಟ್ಟಿ ಇದೇ ರೀತಿನೆ ಎಂಟ್ರಿ ಕೊಟ್ಟಿದ್ದರು. ಆದರೆ, ಮುಂದೆ ಡೌನ್ ಆದ್ರು. ಕಣ್ಣೀರು ಹಾಕುವ ರೀತಿನೇ ಸಂದರ್ಭಗಳು ಕ್ರಿಯೇಟ್ ಆಗಿದ್ದವು. ಆದರೆ, ರಘು ವಿಚಾರದಲ್ಲಿ ಆ ರೀತಿ ಅಗುವ ಸಾಧ್ಯತೆ ಕಡಿಮೆ ಅನಿಸುತ್ತದೆ. ಫಿಜಿಕಲಿ ಫಿಟ್ ಆಗಿದ್ದಾರೆ. ಸಹನೆ ಅಂತಲೂ ಮೊದಲೇ ಇಲ್ಲ. ಕ್ವಾಟ್ಲೆ ಕಿಚನ್ ಅಲ್ಲಿಯೇ ಅದನ್ನ ನೋಡಿ ಆಗಿದೆ. ಆದರೆ, ಬಿಗ್ ಬಾಸ್ ಫಾರ್‌ಮ್ಯಾಟ್ ಬೇರೆ ಇದೆ. ಇಲ್ಲಿ ರಘು ಹೇಗೆ ಇರ್ತಾರೆ ಅನ್ನೋ ಪ್ರಶ್ನೆನೂ ಇದೆ.

Sulekha